ಕನ್ನಡಿಗರೆಲ್ಲರು ಕಣ್ಣೂರು ಜಿಲ್ಲೆ ಬಳಿ ಇರುವ ಕೊಟ್ಟಿಯೂರು ದೇವಸ್ಥಾನಕ್ಕೆ ಬರಬೇಕು ಇಲ್ಲಿನ ಆಡಳಿತ ಮಂಡಳಿ ಸರಿಯಾದ ವ್ಯವಸ್ಥೆಯನ್ನು ಮಾಡಿದೆ. ಪಾರ್ಕಿಂಗ್ ವ್ಯವಸ್ಥೆ ತುಂಬಾ ಚೆನ್ನಾಗಿದೆ. ವರ್ಷ ಕಳೆದಂತೆ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದೇವೆ. ಇಂತಹ ಪ್ರಶಸ್ತ ಸ್ಥಳಕ್ಕೆ ನೀವು ಭೇಟಿ ಕೊಡಬೇಕು. ನಿಮಗಾಗಿ ಕನ್ನಡದಲ್ಲೇ ಅನೌನ್ಸ್ಮೆಂಟ್ ಮಾಡ್ತಿದ್ದೇವೆ. ಬೋರ್ಡ್ ಸಹ ಕನ್ನಡದಲ್ಲೇ ಇದೆ. ಆದರೆ, ನೀವು ಬಂದಾಗ ನಿಮ್ಮ ಬಟ್ಟೆ, ಚಪ್ಪಲಿ, ಕವರ್ ಸೇರಿದಂತೆ ಯಾವುದೇ ವಸ್ತುವನ್ನು ಇಲ್ಲಿ ಹಾಕಬೇಡಿ. ಇಲ್ಲಿ ಸ್ವಚ್ಛತೆ ಮುಖ್ಯ ಎಂದು ಹೇಳಿದ್ದಾರೆ.