ಪತ್ನಿಯಿಂದಲೇ ವೈದ್ಯ ಕಿರಣ್ ಹತ್ಯೆ​: ಪ್ರಕರಣ ಕುರಿತು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದ್ದಿಷ್ಟು

ಪ್ರಿಯಾಂಕಾ-ಕಿರಣ್ ದಂಪತಿ, ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ (ಬಲ)
ಪ್ರಿಯಾಂಕಾ-ಕಿರಣ್ ದಂಪತಿ, ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ (ಬಲ)
Published on

ಪ್ರಮುಖ ಮುಖ್ಯಾಂಶಗಳು

  • ಖಾಸಗಿ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿದ್ದ ವೈದ್ಯ ಕಿರಣ್ ಹೊನ್ನಣ್ಣವರ್
  • ಗಂಡನನ್ನು ಬರ್ಬರವಾಗಿ ಇರಿದು ಕೊಂದ ವೈದ್ಯ ಪತ್ನಿ ಪ್ರಿಯಾಂಕಾ
  • ಧಾರವಾಡದ ಬಾರಾಕೊಟ್ರಿಯಲ್ಲಿರುವ ರಂಕಾ ಸ್ಟೆಲ್ಲೊ ಅಪಾರ್ಟ್​ಮೆಂಟ್​ನಲ್ಲಿ ಘಟನೆ
ಧಾರವಾಡ: ಪತ್ನಿಯೇ ತನ್ನ ವೈದ್ಯ ಪತಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದ ಮತ್ತು 8 ವರ್ಷದ ಮಗನ ಮೇಲೂ ಹಲ್ಲೆಗೈದ ಭೀಕರ ಘಟನೆ ಸದ್ಯ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಪ್ರಸ್ತುತ, ಖಾಕಿ ಸೂಕ್ತ ಚಿಕಿತ್ಸೆ ಪಡೆಯುತ್ತಿರುವ ಪ್ರಿಯಾಂಕಳನ್ನು ಶೀಘ್ರವೇ ಕಸ್ಟಡಿಗೆ ಪಡೆದು, ಘಟನೆಯ ಇಂಚಿಂಚೂ ಮಾಹಿತಿಯನ್ನು ಕಲೆಹಾಕುವುದಾಗಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಡಾ. ಕಿರಣ್ ಎಂಬ ವ್ಯಕ್ಯಿ ಮನೆಯಲ್ಲೇ ಮೃತಪಟ್ಟಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕ ತಕ್ಷಣವೇ ನಾವು ಸ್ಥಳಕ್ಕೆ ಹೋದೆವು. ಆರಂಭದಲ್ಲಿ ಡಬಲ್ ಮರ್ಡರ್ ಅನ್ನೋ ಮಾಹಿತಿ ಬಂತು. ಅವರ ಫ್ಲಾಟ್​ಗೆ ಹೋದಾಗ ಕಿರಣ್ ಮೃತಪಟ್ಟಿದ್ದರು. ಅವರ ಮಗ ಇನ್ನೂ ಉಸಿರಾಡುತ್ತಿದ್ದರು. ಮಗುವಿಗೆ ಎಸ್ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ ಎಂದರು.
ಮನೆಗೆ ಹೋದ ಸಮಯದಲ್ಲಿ ಪ್ರಿಯಾಂಕಳನ್ನು ಕೊಲೆ ಬಗ್ಗೆ ಕೇಳಿದಾಗ, ಆಕೆ ತಲೆ ಸುತ್ತುತ್ತಿದೆ, ಆಘಾತವಾಗಿದೆ ಅಂದಾಗ ಆಸ್ಪತ್ರೆಗೆ ದಾಖಲಿಸಿದೆವು. ಸ್ವತಃ ತಾನೇ ಇನ್ಸೂಲಿನ್​ ಇಂಜೆಕ್ಷನ್ ಮಾಡಿಕೊಂಡಿದ್ದಾಗಿ ಹೇಳಿದ್ದಾಳೆ. ಸದ್ಯ ಫಿಸಿಕಲಿ ಹಾಗೂ ಮೆಂಟಲಿ ಆಕೆ ಸದೃಡವಾಗಿಲ್ಲ. ಹೀಗಾಗಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಚೇತರಿಕೆ ಕಂಡ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ ಎಂದರು.
ಕೌಟುಂಬಿಕ ಕಲಹ ಅಂತ ಕುಟುಂಬಸ್ಥರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಿರಣ್​ಗೆ ಇತರೆ ಹೆಣ್ಣುಮಕ್ಕಳ ಜೊತೆ ಸಂಪರ್ಕವಿದೆ ಎಂದು ಪ್ರಿಯಾಂಕಾ ಆಗಾಗ್ಗೆ ಮನೆಯಲ್ಲಿ ಜಗಳ ಮಾಡುತ್ತಿದ್ದಳು. ಇದೇ ಕಾರಣಕ್ಕೆ ಈ ಹಿಂದೆಯೂ ಗಂಡನ ಮೇಲೆ ದಾಳಿ ನಡೆಸಿದ್ದಳು. ಚಾಕುವಿನಿಂದ ಬೆದರಿಸಿ, ದಾಳಿ ಮಾಡಿದ್ದಳು. ಆ ಸಮಯದಲ್ಲಿ ಕಿರಣ್​ಗೆ ಯಾವುದೇ ಗಾಯಗಳು ಅಥವಾ ಅನಾಹುತ ಸಂಭವಿಸದ ಕಾರಣ ಮಗನ ಮಾತಿಗೆ ಸುಮ್ಮನಾಗಿದ್ದಾಗಿ ಕುಟುಂಬದವರು ಹೇಳಿದ್ದಾರೆ.
ಆ ಮನೆಗೆ ಯಾರೂ ಎಂಟ್ರಿ ಆಗಲು ಸಾಧ್ಯವಿಲ್ಲ. ಇರವುದು ಒಂದೇ ಬಾಗಿಲು ಅದು ಲಾಕ್​ ಆಗಿತ್ತು. ಮೊನ್ನೆ ರಾತ್ರಿಯಿಂದಲೂ ಕಿರಣ್​ ಪೋಷಕರು ಹಲವಾರು ಬಾರಿ ಫೋನ್​ ಕಾಲ್ ಮಾಡಿದ್ದಾರೆ. ಇಷ್ಟಾದರೂ ರಿಸಿವ್ ಮಾಡದ ಹಿನ್ನೆಲೆ ಕುಟುಂಬದವರೇ ಫ್ಲಾಟ್​ಗೆ ಹೋಗಿ ಬಾಗಿಲು ಬಡಿದಿದ್ದಾರೆ. ಕೊನೆಗೆ ಪ್ರಿಯಾಂಕಳೇ ಡೋರ್​ ಓಪನ್​ ಮಾಡಿದ್ದಾಳೆ. ಘಟನೆಯ ಸಿಸಿಟಿವಿ ಫೂಟೇಜ್​, ಮೊಬೈಲ್ ವಶಕ್ಕೆ ಪಡೆದಿದ್ದೇವೆ ಎಂದು ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net