ಬೆಂಗಳೂರು: ಕುಡಿದ ಮತ್ತಿನಲ್ಲಿ ಯುವತಿಯರ ರಂಪಾಟ; ಕ್ಯಾಬ್ ಚಾಲಕನ ಮೇಲೆ ಹೆಲ್ಮೆಟ್​ನಿಂದ ಹಲ್ಲೆ; ವಿಡಿಯೋ ವೈರಲ್​ | Drunk Women

ಕಂಠಪೂರ್ತಿ ಕುಡಿದು ರಂಪಾಟ ನಡೆಸುತ್ತಿರುವ ಯುವತಿಯರು
ಕಂಠಪೂರ್ತಿ ಕುಡಿದು ರಂಪಾಟ ನಡೆಸುತ್ತಿರುವ ಯುವತಿಯರು
Published on

ಪ್ರಮುಖ ಮುಖ್ಯಾಂಶಗಳು

  • ಪಾನಮತ್ತ ಯುವತಿಯರಿಂದ ಬೀದಿ ರಂಪಾಟ
  • ಬೆಂಗಳೂರಿನ ಬೀದಿಯಲ್ಲಿ ಕುಡಿದು, ಕ್ಯಾಬ್​ ಚಾಲಕನ ಮೇಲೆ ಹಲ್ಲೆ ಮಾಡಿದ ಯುವತಿಯರು
  • ಪರಿಸ್ಥಿತಿಯನ್ನು ನಿಯಂತ್ರಿಸಲು ಬಂದ ಸ್ಥಳೀಯರ ಮೇಲೂ ಹಲ್ಲೆಗೆ ಮುಂದಾದ ಮಹಿಳೆಯರು
ಬೆಂಗಳೂರು: ಸಾಮಾನ್ಯವಾಗಿ ಪುರುಷರು ಕುಡಿದ ಮತ್ತಿನಲ್ಲಿ ಬೀದಿಗಳಲ್ಲಿ ಕೂಗಾಡುವ ಅಥವಾ ಜಗಳವಾಡುವ ದೃಶ್ಯಗಳನ್ನು ನಾವು ನೋಡಿರುತ್ತೇವೆ ಅಥವಾ ಸುದ್ದಿಯನ್ನು ಕೇಳಿರುತ್ತೇವೆ. ಆದರೆ ಬೆಂಗಳೂರಿನಲ್ಲಿ ಶನಿವಾರ ತಡರಾತ್ರಿ ಇಬ್ಬರು ಮಹಿಳೆಯರು (Drunk Women) ಕಂಠಪೂರ್ತಿ ಕುಡಿದು ಅವ್ಯವಸ್ಥೆ ಸೃಷ್ಟಿಸಿದ ಬಗ್ಗೆ ವರದಿಯಾಗಿದೆ.
ಮಹಿಳೆಯರು ತಮ್ಮ ಸ್ನೇಹಿತರನ್ನು ಭೇಟಿ ಮಾಡಿ ಹಿಂತಿರುಗುತ್ತಿದ್ದಾಗ, ಪಾನಮತ್ತರಾಗಿದ್ದ ಕಾರಣ ಸ್ಥಿಮಿತ ಕಳೆದುಕೊಂಡ ಇವರು, ಮುಂದೆ ಸಾಗುತ್ತಿದ್ದ ಕ್ಯಾಬ್‌ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಕ್ಯಾಬ್ ಚಾಲಕ ಅಹ್ಮದ್ ಎಂಬಾತನು, ಅಫಘಾತದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಈ ಮಹಿಳೆಯರು ಕ್ಯಾಬ್​ ಚಾಲಕನನ್ನು ಅವಾಚ್ಯ ಪದಗಳಿಂದ ನಿಂದಿಸಿ, ತಮ್ಮ ಹೆಲ್ಮೆಟ್‌ನಿಂದ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆ ನಡೆಯುತ್ತಿದ್ದನ್ನು ನೋಡಿದ ಸಾರ್ವಜನಿಕರು, ಪರಿಸ್ಥಿತಿಯನ್ನು ಶಾಂತಗೊಳಿಸಲು ಮುಂದಾದ ಸ್ಥಳೀಯರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಮಾಹಿತಿಯ ಪ್ರಕಾರ, ಘರ್ಷಣೆಯ ಸಮಯದಲ್ಲಿ ಕ್ಯಾಬ್ ಚಾಲಕನ ಮೇಲೆ ದಾಳಿ ಮಾಡಲು ಮಹಿಳೆಯರು ತಮ್ಮ ಕೈಗಳಿಗೆ ಸುತ್ತಿಕೊಂಡ ಸರಪಳಿಯನ್ನು ಸಹ ಬಳಸಿದ್ದಾರೆ ಎಂದು ಹೇಳಲಾಗುತ್ತಿದೆ.
ಘಟನೆಯ ವೀಡಿಯೊಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗುತ್ತಿದ್ಸದು, ಮಹಿಳೆಯರು ಗುಂಪಿನಲ್ಲಿದ್ದ ಜನರನ್ನು ನಿಂದಿಸುತ್ತಿರುವುದನ್ನು ಮತ್ತು ಅವರ ಮೇಲೆ ಅಶ್ಲೀಲ ಸನ್ನೆಗಳನ್ನು ಮಾಡುತ್ತಿರುವುದನ್ನು ನೋಡಬಹುದಾಗಿದೆ. ಒಂದು ಕ್ಲಿಪ್‌ನಲ್ಲಿ, ಒಬ್ಬ ಮಹಿಳೆ ತನ್ನನ್ನು ತಡೆಯಲು ಪ್ರಯತ್ನಿಸುವ ಪುರುಷರನ್ನು ಒದೆಯುವುದನ್ನು ಕಾಣಬಹುದು. ಕೆಲವು ಸಾರ್ವಜನಿಕರು ಮಹಿಳೆಯರ ವಿರುದ್ಧ ಕೂಗುತ್ತಿರುವುದನ್ನು ಸಹ ಕಾಣಬಹುದಾಗಿದೆ.
ಸ್ಥಳೀಯ ನಿವಾಸಿಗಳ ದೂರುಗಳ ಮೇರೆಗೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲಿಸಾ ಮತ್ತು ಮ್ಯಾಥ್ಯೂ ಎಂದು ಗುರುತಿಸಲಾದ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣವನ್ನು ದಾಖಲಿಸಿ ಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದು, ಈ ಇಬ್ಬರು ಮಹಿಳೆಯರಿಗೆ ಸರಿಯಾದ ಶಿಕ್ಷೆ ದೊರೆಯಬೇಕೆನ್ನುವುದು ಸಾರ್ವಜನಿಕರ ಆಗ್ರಹವಾಗಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net