7 ವರ್ಷ ದಾಟುತ್ತಿದ್ದಂತೆ ಸಿಎಂ ಕುರ್ಚಿ ಖಾಲಿ! ಏನಿದು ಕರ್ನಾಟಕ ರಾಜಕಾರಣದ ವಿಚಿತ್ರ ಸಿಂಡ್ರೋಮ್?: ಸಿದ್ದರಾಮಯ್ಯನವರಿಗೂ ತಪ್ಪಲಿಲ್ಲ | 7 Years Syndrome

ಸಿದ್ದರಾಮಯ್ಯ, ರಾಮಕೃಷ್ಣ ಹೆಗಡೆ, ದೇವರಾಜು ಅರಸು
ಸಿದ್ದರಾಮಯ್ಯ, ರಾಮಕೃಷ್ಣ ಹೆಗಡೆ, ದೇವರಾಜು ಅರಸು
Published on
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯಾಗಿದ್ದು, ಸುದೀರ್ಘ ಕಾಲ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ಉತ್ತರಾಧಿಕಾರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆ ರಾಜ್ಯದ 7 ವರ್ಷಗಳ ಸಿಂಡ್ರೋಮ್( 7 Years Syndrome) ಬಗ್ಗ ಚರ್ಚೆಯಾಗುತ್ತಿದೆ. ಏನೂ ಈ ವಿಷಯ ಇಲ್ಲಿ ಓದಿ.
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಏಳು ವರ್ಷಗಳ ಸಿಂಡ್ರೋಮ್ ಬಗ್ಗೆ ಬಹಳಷ್ಟು ರಾಜಕೀಯ ವಿಶ್ಲೇಷಕರು ಬೇರೆ-ಬೇರೆ ಸಂದರ್ಭದಲ್ಲೂ ಮಾತನಾಡಿದ್ದಾರೆ. ಇತ್ತೀಚಿಗೆ ಸಿದ್ದರಾಮಯ್ಯನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರು ಸಹ ಖಾಸಗಿ ಚಾನಲ್​​ವೊಂದರಲ್ಲಿ ಈ ಕುರಿತು ಮಾತಾಡಿದ್ದಾರೆ.

ಏನಿದು 7 ವರ್ಷಗಳ ಸಿಂಡ್ರೋಮ್?

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಯಾವೊಬ್ಬ ಮುಖ್ಯಮಂತ್ರಿಯೂ ಒಟ್ಟಾರೆಯಾಗಿ ಎಲ್ಲಾ ಅವಧಿ ಸೇರಿಯೂ 7 ವರ್ಷಗಳಿಗಿಂತ ಹೆಚ್ಚು ಕಾಲ ಸಿಎಂ ಗಾದಿಯಲ್ಲಿ ಉಳಿಯಲು ಸಾಧ್ಯವಿಲ್ಲ ಎಂಬ ಒಂದು ವಿಚಿತ್ರ ನಂಬಿಕೆ ಹಾಗೂ ಇತಿಹಾಸ ಸೃಷ್ಟಿಯಾಗಿದೆ.
ಯಾರೇ ಸಿಎಂ ಆದರೂ ಅವರ ಒಟ್ಟು ಅಧಿಕಾರಾವಧಿ 7 ವರ್ಷ ತಲುಪುತ್ತಿದ್ದಂತೆ ಅವರ ಕುರ್ಚಿ ಅಲುಗಾಡುತ್ತದೆ, ಅಥವಾ ಅಧಿಕಾರವನ್ನು ಕಳೆದುಕೊಳ್ಳುತ್ತಿದ್ದಾರೆ. ಇದನ್ನೇ ರಾಜಕೀಯದಲ್ಲಿ ಏಳು ವರ್ಷಗಳ ಸಿಂಡ್ರೋಮ್ ಎಂದು ಕರೆಯುತ್ತಾರೆ.

7 ವರ್ಷದ ಬಳಿಕ ಸಿಎಂ ಸ್ಥಾನ ಕಳೆದುಕೊಂಡವರು

ಎಸ್. ನಿಜಲಿಂಗಪ್ಪ: ಕರ್ನಾಟಕದ ಏಕೀಕರಣದ ನಂತರ ಪ್ರಭಾವಿ ನಾಯಕರಾಗಿದ್ದ ಎಸ್​. ನಿಜಲಿಂಗಪ್ಪ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಅವರ ಎರಡು ಬಾರಿಯ ಸಿಎಂ ಅವಧಿ ಒಟ್ಟು ಅಧಿಕಾರಾವಧಿ 7 ವರ್ಷ 175 ದಿನಗಳಿಗೆ ಅಂತ್ಯವಾಯಿತು.
ಡಿ. ದೇವರಾಜ ಅರಸು: 1972 ರಿಂದ 1980ರವರೆಗೆ ರಾಜ್ಯದಲ್ಲಿ ಎರಡು ಬಾರಿ ಸಿಎಂ ಆಗಿದ್ದ ದೇವರಾಜು ಅರಸು ಅವರನ್ನು ಹಿಂದುಳಿದ ವರ್ಗಗಳ ಹರಿಕಾರರೆಂದೇ ಕರೆಯುತ್ತಾರೆ. ಕರ್ನಾಟಕದ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದಾರೆ, ಅವರ ಒಟ್ಟು ಅಧಿಕಾರಾವಧಿ 7 ವರ್ಷ 239 ದಿನಗಳಿಗೆ ಅವರು ಸಿಎಂ ಸ್ಥಾನದಿಂದ ಕೆಳಗಿಳಿದರು.
ರಾಮಕೃಷ್ಣ ಹೆಗಡೆ: ಕರ್ನಾಟಕದಲ್ಲಿ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರು ಎರಡು ಬಾರಿ ಸಿಎಂ ಹುದ್ದೆಗೆ ಏರಿದ್ದರು. 1983 ರಿಂದ 1988ರವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಎರಡನೇ ಅವಧಿಯಲ್ಲಿ ದೂರವಾಣಿ ಕದ್ದಾಲಿಕೆ ಹಗರಣ ಹಿನ್ನೆಲೆ ರಾಜೀನಾಮೆ ಕೊಟ್ಟರು.
ಸಿದ್ದರಾಮಯ್ಯ: ಈ ಏಳು ವರ್ಷಗಳ ಸಿಂಡ್ರೋಮ್​ಗೆ ಹಾಲಿ ಸಿಎಂ ಸಿದ್ದರಾಮಯ್ಯನವರು ಉದಾಹರಣೆಯಾದರು. ಅವರು ಎರಡು ಬಾರಿ ರಾಜ್ಯದ ಸಿಎಂ ಆಗಿದ್ದರು. 2013 ರಿಂದ 2018ರವರೆಗೆ 5 ವರ್ಷ ಸಿಎಂ ಆಗಿದ್ದರು. ಬಳಿಕ 2023ರಲ್ಲಿ ಎರಡನೇ ಬಾರಿ ಸಿಎಂ ಆಗಿದ್ದರು. ಜನವರಿ ತಿಂಗಳಲ್ಲಿ 7 ವರ್ಷ 240 ದಿನಗಳಿಗಿಂತೆ ಹೆಚ್ಚು ದಿನ ಸಿಎಂ ಆಗಿ ದೇವರಾಜು ಅರಸು ಅವರ ದಾಖಲೆಯನ್ನು ಮುರಿದರು. ಬಳಿಕ ಮೇ 28ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net