ಇದು ಇದೇ ಮೊದಲು... ವಿಲ್​ ಜಾಕ್ಸ್​ ಹಿಡಿದ ಅದ್ಭುತ ಕ್ಯಾಚ್​ಗೆ ತಲೆಬಾಗಿದ ಕ್ರೀಡಾ ಜಗತ್ತು! ವಿಡಿಯೋ ವೈರಲ್​...Will Jacks

ಇದು ಇದೇ ಮೊದಲು... ವಿಲ್​ ಜಾಕ್ಸ್​ ಹಿಡಿದ ಅದ್ಭುತ ಕ್ಯಾಚ್​ಗೆ ತಲೆಬಾಗಿದ ಕ್ರೀಡಾ ಜಗತ್ತು! ವಿಡಿಯೋ ವೈರಲ್​...Will Jacks
ಇದು ಇದೇ ಮೊದಲು... ವಿಲ್​ ಜಾಕ್ಸ್​ ಹಿಡಿದ ಅದ್ಭುತ ಕ್ಯಾಚ್​ಗೆ ತಲೆಬಾಗಿದ ಕ್ರೀಡಾ ಜಗತ್ತು! ವಿಡಿಯೋ ವೈರಲ್​...Will Jacks
Published on

ಪ್ರಮುಖ ಮುಖ್ಯಾಂಶಗಳು

  • ದಿ ಹಂಡ್ರೆಡ್ ಟೂರ್ನಮೆಂಟ್‌ನಲ್ಲಿ ವಿಲ್ ಜಾಕ್ಸ್ ಹಿಡಿದ ಅದ್ಭುತ ಕ್ಯಾಚ್ ಕ್ರೀಡಾಭಿಮಾನಿಗಳ ಹುಬ್ಬೇರಿಸಿದೆ
  • ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಎಂಐ ಲಂಡನ್ ತಂಡಕ್ಕೆ 4 ವಿಕೆಟ್‌ಗಳ ಜಯ
  • ಬೌಂಡರಿ ಲೈನ್ ಬಳಿ ವಿಲ್ ಜಾಕ್ಸ್ ಗಾಳಿಯಲ್ಲಿ ಹಾರಿ ಒಂದೇ ಕೈಯಿಂದ ಆಶ್ಚರ್ಯಕರ ಕ್ಯಾಚ್ ಪಡೆದಿದ್ದಾರೆ
  • ವಿಲ್ ಜಾಕ್ಸ್ ಅವರ ಸೂಪರ್‌ಮ್ಯಾನ್ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಲಂಡನ್​: ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಟೂರ್ನಮೆಂಟ್‌ನಲ್ಲಿ ಆಲ್​​ರೌಂಡರ್​ ಆಟಗಾರ ವಿಲ್ ಜಾಕ್ಸ್ ( Will Jacks ) ಪಡೆದ ಅದ್ಭುತ ಕ್ಯಾಚ್​ ಕ್ರೀಡಾಭಿಮಾನಿಗಳ ಹುಬ್ಬೇರಿಸಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.
ಲಂಡನ್ ಸ್ಪಿರಿಟ್ ಮತ್ತು ಎಂಐ ಲಂಡನ್ ನಡುವೆ ಇಂಗ್ಲೆಂಡ್‌ನ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಎಂಐ ಲಂಡನ್ ತಂಡವು 4 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತು. ಆದರೆ, ಪಂದ್ಯದ ಫಲಿತಾಂಶಕ್ಕಿಂತ ಸ್ಟಾರ್ ಆಲ್-ರೌಂಡರ್ ವಿಲ್ ಜಾಕ್ಸ್ ಬೌಂಡರಿ ಲೈನ್‌ನಲ್ಲಿ ಹಿಡಿದ ಆ ಅಸಾಧಾರಣ ಕ್ಯಾಚ್ ಎಲ್ಲರ ಕೇಂದ್ರಬಿಂದುವಾಯಿತು.
ಲಂಡನ್ ಸ್ಪಿರಿಟ್ ತಂಡದ ಬ್ಯಾಟರ್ ಲುವಾನ್ ಡ್ರೆ ಪ್ರಿಟೋರಿಯಸ್ ಬಾರಿಸಿದ ಭರ್ಜರಿ ಶಾಟ್ ಸಿಕ್ಸರ್‌ಗೆ ಹೋಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಬೌಂಡರಿ ಗೆರೆಯಲ್ಲಿದ್ದ ವಿಲ್ ಜಾಕ್ಸ್ ಗಾಳಿಯಲ್ಲಿ ಹಾರಿ ಮೊದಲು ಚೆಂಡು ಗೆರೆ ದಾಟದಂತೆ ತಡೆದು, ಗಾಳಿಯಲ್ಲಿ ಎಸೆದರು. ಬಳಿಕ ಬೌಂಡರಿ ಗೆರೆಯಿಂದ ಮೈದಾನದೊಳಗೆ ಬಂದು ಡೈವ್ ಹೊಡೆದು ಒಂದೇ ಕೈಯಿಂದ ಅದ್ಭುತ ಕ್ಯಾಚ್ ಹಿಡಿದು ಎಲ್ಲರನ್ನೂ ದಂಗಾಗಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದ್ದು, ಎಂಥಾ ಅದ್ಭುತ ಕ್ಯಾಚ್​ ಇದು ಎಂದು ವಿಲ್​ ಜಾಕ್ಸ್​ ಅವರನ್ನು ಕೊಂಡಾಡುತ್ತಿದ್ದಾರೆ.

ಅಂದಹಾಗೆ, ಲಾರ್ಡ್ಸ್‌ನಲ್ಲಿ ನಡೆದ ಈ ಪಂದ್ಯಕ್ಕೆ ಬರೋಬ್ಬರಿ 27,721 ಮಂದಿ ವೀಕ್ಷಕರು ಆಗಮಿಸುವ ಮೂಲಕ ದಿ ಹಂಡ್ರೆಡ್ ಗ್ರೂಪ್ ಹಂತದ ಗರಿಷ್ಠ ವೀಕ್ಷಕರ ದಾಖಲೆ ನಿರ್ಮಿಸಿತು. ಮೊದಲು ಬ್ಯಾಟ್ ಮಾಡಿದ ಲಂಡನ್ ಸ್ಪಿರಿಟ್ 160 ರನ್ ಕಲೆಹಾಕಿದರೆ, ಗುರಿ ಬೆನ್ನಟ್ಟಿದ ಎಂಐ ಲಂಡನ್ ಪರ ಸಿಕಂದರ್ ರಾಜಾ ಅವರ ಸ್ಫೋಟಕ ಆಟದ ನೆರವಿನಿಂದ 6 ಎಸೆತಗಳು ಬಾಕಿ ಇರುವಂತೆ ಜಯ ಸಾಧಿಸಿತು.

ಬ್ಯಾಟಿಂಗ್‌ನಲ್ಲಿ ವಿಲ್ ಜಾಕ್ಸ್ ಕೇವಲ 18 ರನ್ ಗಳಿಸಿ ನಿರಾಸೆ ಮೂಡಿಸಿದರೂ, ಅವರು ಮೈದಾನದಲ್ಲಿ ಮಾಡಿದ ಆ ಸೂಪರ್‌ಮ್ಯಾನ್ ಸಾಹಸದ ಅದ್ಭುತ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸಿ ಇತಿಹಾಸದಪುಟಗಳಲ್ಲಿ ಶಾಶ್ವತವಾಗಿ ಉಳಿಯುವಂತಾಯಿತು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net