ಮಹತ್ವದ ಕ್ರೀಡಾಕೂಟಕ್ಕಾಗಿ ಆಯೋಜಕರು 'ಕೋಸ್ಟಾ ಸೆರೆನಾ' (Costa Serena) ಹೆಸರಿನ ಬೃಹತ್ ಕ್ರೂಸ್ ಹಡಗನ್ನು ವಸತಿಗಾಗಿ ಸಜ್ಜುಗೊಳಿಸಿದ್ದಾರೆ. ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (OCA) ಅಧಿಕೃತ ವೆಬ್ಸೈಟ್ ಪ್ರಕಾರ, ಈ ಹಡಗು ಸುಮಾರು 1,14,000 ಟನ್ ಸಮಗ್ರ ತೂಕ ಹಾಗೂ 290.2 ಮೀಟರ್ ಉದ್ದವನ್ನು ಹೊಂದಿದೆ. ಅಷ್ಟೇ ಅಲ್ಲದೆ, ಸುಮಾರು 1,500 ಅತ್ಯಾಧುನಿಕ ಕ್ಯಾಬಿನ್ಗಳನ್ನು ಹೊಂದಿರುವ ಈ ಐಷಾರಾಮಿ ನೌಕೆಯು ಒಟ್ಟು 3,780 ಪ್ರಯಾಣಿಕರನ್ನು ಏಕಕಾಲದಲ್ಲಿ ಆತಿಥ್ಯ ನೀಡುವ ಸಾಮರ್ಥ್ಯವನ್ನು ಹೊಂದಿದೆ.