ಭಾರತ ಏನಾದರೂ ಗೆದ್ದರೆ... ಟಿ20 ವಿಶ್ವಕಪ್​​ ಆರಂಭಕ್ಕೂ ಮುನ್ನವೇ ಅಚ್ಚರಿ ಹೇಳಿಕೆ ನೀಡಿದ ವಾಸಿಂ ಅಕ್ರಮ್​! Wasim Akram

 ಟಿ20 ವಿಶ್ವಕಪ್​​ ಆರಂಭಕ್ಕೂ ಮುನ್ನವೇ ಅಚ್ಚರಿ ಹೇಳಿಕೆ ನೀಡಿದ ವಾಸಿಂ ಅಕ್ರಮ್​
ಟಿ20 ವಿಶ್ವಕಪ್​​ ಆರಂಭಕ್ಕೂ ಮುನ್ನವೇ ಅಚ್ಚರಿ ಹೇಳಿಕೆ ನೀಡಿದ ವಾಸಿಂ ಅಕ್ರಮ್​
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್-2026ರ ಮೆಗಾ ಟೂರ್ನಮೆಂಟ್ ಇನ್ನೂ ಮೂರು ದಿನಗಳಲ್ಲಿ ಆರಂಭವಾಗಲಿದೆ
  • ಫೆ. 7ರಂದು ಆರಂಭವಾಗಲಿರುವ ಈ ಟೂರ್ನಿ ಮಾರ್ಚ್ 8 ರವರೆಗೆ ನಡೆಯಲಿದೆ
  • ಫೆ.15ರಂದು ನಡೆಯಬೇಕಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಸದ್ಯ ಅನಿಶ್ಚಿತತೆಯಲ್ಲಿದೆ
  • ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ
Wasim Akram : ಟಿ20 ವಿಶ್ವಕಪ್-2026ರ ಮೆಗಾ ಟೂರ್ನಮೆಂಟ್ ಇನ್ನೂ ಮೂರು ದಿನಗಳಲ್ಲಿ ಆರಂಭವಾಗಲಿದೆ. ಫೆ. 7ರಂದು ಆರಂಭವಾಗಲಿರುವ ಈ ಟೂರ್ನಿ ಮಾರ್ಚ್ 8 ರವರೆಗೆ ನಡೆಯಲಿದೆ. ಫೆ.15ರಂದು ನಡೆಯಬೇಕಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಸದ್ಯ ಅನಿಶ್ಚಿತತೆಯಲ್ಲಿದೆ. ಈ ಸಂದರ್ಭದಲ್ಲಿ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.
ಭಾರತ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಈ ವಿಚಾರದ ಬಗ್ಗೆ ಮಾತನಾಡಿದ ವಾಸಿಂ ಅಕ್ರಮ್​, ಪಾಕಿಸ್ತಾನ ಖಂಡಿತವಾಗಿಯೂ ಭಾರತದ ವಿರುದ್ಧ ಆಡಬೇಕು ಎಂದರು. ಈ ಪಂದ್ಯದಲ್ಲಿ ಪಾಕಿಸ್ತಾನ, ಭಾರತ ವಿರುದ್ಧ ಸೋತರೆ, ನಮ್ಮವರು ಸುಮ್ಮನಿರುವುದಿಲ್ಲ. ಟಿವಿಗಳನ್ನು ಒಡೆದು ಹಾಕುತ್ತಾರೆ ಎಂದರು. ಅಲ್ಲದೆ, ಕೆಲವರು ವಿಮಾನ ನಿಲ್ದಾಣಗಳಲ್ಲಿ ಪಾಕಿಸ್ತಾನಿ ಕ್ರಿಕೆಟಿಗರ ಮೇಲೆ ದಾಳಿ ಮಾಡಲು ಸಹ ಪ್ರಯತ್ನಿಸುತ್ತಾರೆ ಎಂಬ ಆಘಾತಕಾರಿ ಸಂಗತಿಗಳನ್ನು ಸಹ ಅವರು ಬಹಿರಂಗಪಡಿಸಿದರು.
ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ವಾಸಿಂ ಅಕ್ರಮ್​, ಪಾಕಿಸ್ತಾನದಲ್ಲಿ ಕ್ರಿಕೆಟ್ ತುಂಬಾ ಜನಪ್ರಿಯವಾಗಿದೆ. ಅಭಿಮಾನಿಗಳು ಭಾರತ ವಿರುದ್ಧ ಸೋಲದಂತೆ ಪ್ರತಿದಿನ ಅಲ್ಲಾಹನಲ್ಲಿ ಪ್ರಾರ್ಥಿಸುತ್ತಾರೆ. ಕಳೆದ ಮೂರು ವರ್ಷಗಳಲ್ಲಿ, ಭಾರತ ಮತ್ತು ಪಾಕಿಸ್ತಾನ ನಡುವೆ ಅನೇಕ ಪಂದ್ಯಗಳು ನಡೆದಿವೆ. ಆದರೆ, ಪಾಕಿಸ್ತಾನ ಇದರಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ ಎಂದು ವಾಸಿಂ ಅಕ್ರಮ್ ನೆನಪಿಸಿದರು.
ಪ್ರತಿ ಬಾರಿ ಭಾರತದ ವಿರುದ್ಧ ಪಾಕಿಸ್ತಾನ ಸೋತಂತಹ ಸಂದರ್ಭದಲ್ಲಿ, ಅನೇಕ ಪಾಕಿಸ್ತಾನಿ ಅಭಿಮಾನಿಗಳು ತಮ್ಮ ದೇಶದಲ್ಲಿ ತಮ್ಮ ಟಿವಿಗಳನ್ನು ಒಡೆದಿದ್ದಾರೆ. ಆದರೆ, ಕಾಮೆಂಟರಿ ಮಾಡುವವರು ಪಾಕಿಸ್ತಾನ ಗೆದ್ದರೂ ಅಥವಾ ಸೋತರೂ ತಮ್ಮ ಹೃದಯವನ್ನು ಬಂಡೆಯಂತೆ ಇಟ್ಟುಕೊಳ್ಳಬೇಕು. ಗೆಲುವು ಮತ್ತು ಸೋಲುಗಳನ್ನು ಬದಿಗಿಟ್ಟು ಉಕ್ಕಿನ ಮನುಷ್ಯರಂತೆ ನಿಲ್ಲಬೇಕು. ನಮ್ಮ ಭಾವನೆಗಳು ನಿಷ್ಪ್ರಯೋಜಕವಾಗಿರುತ್ತವೆ ಮತ್ತು ಕೇವಲ ಕಾಮೆಂಟರಿ ಮಾತ್ರ ಹೇಳಬೇಕು ಎಂದು ಅಕ್ರಮ್​ ಹೇಳಿದರು.
ಅಂದಹಾಗೆ, 2026ರ ಟಿ20 ವಿಶ್ವಕಪ್ ಪಂದ್ಯಾವಳಿಯ ಭಾಗವಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಫೆಬ್ರವರಿ 15 ರಂದು ನಡೆಯಬೇಕಿದೆ. ಆದರೆ, ಭಾರತದ ವಿರುದ್ಧ ಆಡಬೇಡಿ ಎಂದು ಪಾಕ್​ ಸರ್ಕಾರ ತಮ್ಮ ತಂಡಕ್ಕೆ ಹೇಳಿದೆ. ಆದರೆ, ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಈ ವಿಚಾರವಾಗಿ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಒಂದು ವೇಳೆ ಪಂದ್ಯ ನಡೆದರೆ, ಶ್ರೀಲಂಕಾದ ಕೊಲಂಬೊದಲ್ಲಿ ಈ ಪಂದ್ಯ ನಡೆಯಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net