ಮೂಲಗಳ ಪ್ರಕಾರ, ಆರ್ಸಿಬಿ ತನ್ನ ಐಪಿಎಲ್ ಪಂದ್ಯಗಳನ್ನು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘವನ್ನು (ಕೆಎಸ್ಸಿಎ) ಈವರೆಗೂ ಸಂಪರ್ಕಿಸಿಲ್ಲ. ಹೀಗಾಗಿ, ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ನಡೆಯೋದು ಅನುಮಾನವಾಗಿದೆ. ಛತ್ತೀಸ್ಗಢದ ರಾಯ್ಪುರ ಅಥವಾ ಮಧ್ಯಪ್ರದೇಶದ ಇಂದೋರ್ ಆರ್ಸಿಬಿಯ ಹೊಸ 'ತವರು' ಮೈದಾನವಾಗಲಿದೆ ಎಂಬ ವರದಿ ಇದೆ. ಇವರೆಡರಲ್ಲಿ ರಾಯ್ಪುರ ಮುಂಚೂಣಿಯಲ್ಲಿದೆ.