ಆರೋಗ್ಯ ಸಮಸ್ಯೆಗಳಿಂದಾಗಿ ಭಿಂದರ್ ಅವರು 10 ಕೆಜಿಗಿಂತ ಹೆಚ್ಚು ತೂಕ ಇಳಿಸಿಕೊಂಡಿದ್ದಾರೆ. ಅವರಿಗೆ ಆಸ್ತಮಾ ಕೂಡ ಇದೆ. ಆದ್ದರಿಂದ ಅವರು ಹೆಚ್ಚು ದೂರ ನಡೆಯಬಾರದು ಅಥವಾ ಆಗಾಗ ಮೆಟ್ಟಿಲುಗಳನ್ನು ಹತ್ತಬಾರದು ಎಂದು ವೈದ್ಯರು ಸೂಚಿಸಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಭಿಂದರ್ ತಮ್ಮ ತಂಡದಲ್ಲಿ ಸಕ್ರಿಯರಾಗಿದ್ದಾರೆ. ಅವರು ತಮ್ಮ ಫ್ರಾಂಚೈಸಿಗಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾರೆ. ಆದ್ದರಿಂದ, ಭಿಂದರ್ ಆರ್ಆರ್ ತಂಡಕ್ಕೆ ತುಂಬಾ ಮುಖ್ಯ. ಅವರಿಗೆ ಐಪಿಎಲ್ನ ನಿಯಮಗಳು ಚೆನ್ನಾಗಿ ತಿಳಿದಿವೆ. ವೈದ್ಯಕೀಯ ಕಾರಣಗಳಿಂದಾಗಿ ಮಾತ್ರ ಫೋನ್ ಅವರ ಬಳಿ ಇತ್ತು. ಇದಲ್ಲದೆ, ಶಿಷ್ಟಾಚಾರದ ಪ್ರಕಾರ ಡಗೌಟ್ನಲ್ಲಿ ಮೊಬೈಲ್ ಫೋನ್ ಮತ್ತು ಲ್ಯಾಪ್ಟಾಪ್ ಹೊಂದಲು ಅನುಮತಿಸಲಾಗಿದೆ. ಆದರೆ, ಬಳಕೆ ಮಾಡುವಂತಿಲ್ಲ. ಇಲ್ಲಿ ಭಿಂದರ್ ಬಳಕೆ ಮಾಡಿರುವುದರಿಂದ ಈ ಸಮಸ್ಯೆ ಎದುರಾಗಿದೆ. ಮುಖ್ಯವಾಗಿ ಇಲ್ಲಿ ಭಿಂದರ್ ಅವರು ಕಾಲ್ ಮಾಡುವುದಾಗಲಿ ಅಥವಾ ಕಾಲ್ ರಿಸೀವ್ ಮಾಡುವುದಾಗಲಿ ಮಾಡುತ್ತಿರಲಿಲ್ಲ. ಅವರು ತಮ್ಮ ಫೋನ್ ಅನ್ನು ಸ್ಕ್ರೋಲ್ ಮಾಡುತ್ತಿದ್ದರು. ಸದ್ಯ ಅವರಿಗೆ ಉತ್ತರ ನೀಡಲು ಸಮಯವಿದ್ದು, ACSU ಅಧಿಕಾರಿಗಳಿಗೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಆರ್ಆರ್ ತಂಡಗಳ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.