IPL​ ಶುರುವಾಗಿ 18 ವರ್ಷಗಳೇ ಕಳೆದರೂ ಈ ದಾಖಲೆಗಳನ್ನು ಮಾತ್ರ ಇನ್ನೂ ಯಾರೂ ಮುರಿದಿಲ್ಲ! Unbroken IPL Records

IPL​ ಶುರುವಾಗಿ 18 ವರ್ಷಗಳೇ ಕಳೆದರೂ ಈ ದಾಖಲೆಗಳನ್ನು ಮಾತ್ರ ಇನ್ನೂ ಯಾರೂ ಮುರಿದಿಲ್ಲ! Unbroken IPL Records
IPL​ ಶುರುವಾಗಿ 18 ವರ್ಷಗಳೇ ಕಳೆದರೂ ಈ ದಾಖಲೆಗಳನ್ನು ಮಾತ್ರ ಇನ್ನೂ ಯಾರೂ ಮುರಿದಿಲ್ಲ! Unbroken IPL Records
Published on

ಪ್ರಮುಖ ಮುಖ್ಯಾಂಶಗಳು

  • ಮಹಾ ಕ್ರಿಕೆಟ್​ ಉತ್ಸವ ಇಂಡಿಯನ್​ ಪ್ರೀಮಿಯರ್​ ಲೀಗ್​-2026 ಇನ್ನೂ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ
  • ವಿಶ್ವದ ಕ್ಯಾಶ್​ ರಿಚ್​ ಲೀಗ್​ ಎಂದೇ ಖ್ಯಾತಿ ಪಡೆದಿರುವ ಐಪಿಎಲ್​ ಇದೇ ಮಾರ್ಚ್​ 28ರಂದು ಆರಂಭವಾಗಲಿದೆ
  • ಈವರೆಗೆ 18 ಆವೃತ್ತಿಗಳು ಯಶಸ್ವಿಯಾಗಿ ಮುಗಿದಿದ್ದು, 19ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ
  • ಇಂದಿಗೂ ಮುರಿಯಲಾಗದ ಹಳೆಯ ಐಪಿಎಲ್​ ದಾಖಲೆಗಳನ್ನು ಒಮ್ಮೆ ಮೆಲುಕು ಹಾಕೋಣ
Unbroken IPL Records : ಕ್ರೀಡಾಭಿಮಾನಿಗಳು ಎದುರು ನೋಡುತ್ತಿರುವ ಮಹಾ ಕ್ರಿಕೆಟ್​ ಉತ್ಸವ ಇಂಡಿಯನ್​ ಪ್ರೀಮಿಯರ್​ ಲೀಗ್​-2026 ಇನ್ನೂ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ವಿಶ್ವದ ಕ್ಯಾಶ್​ ರಿಚ್​ ಲೀಗ್​ ಎಂದೇ ಖ್ಯಾತಿ ಪಡೆದಿರುವ ಐಪಿಎಲ್​ ಇದೇ ಮಾರ್ಚ್​ 28ರಂದು ಆರಂಭವಾಗಲಿದೆ. ಈವರೆಗೆ 18 ಆವೃತ್ತಿಗಳು ಯಶಸ್ವಿಯಾಗಿ ಮುಗಿದಿದ್ದು, 19ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಈ ಹೊತ್ತಿನಲ್ಲಿ ಇಂದಿಗೂ ಮುರಿಯಲಾಗದ ಹಳೆಯ ಐಪಿಎಲ್​ ದಾಖಲೆಗಳನ್ನು ಒಮ್ಮೆ ಮೆಲುಕು ಹಾಕೋಣ. 
ಐಪಿಎಲ್​ ಎಂಬ ಮಹಾ ಕ್ರಿಕೆಟ್​ ಉತ್ಸವ ಆರಂಭವಾಗಿದ್ದು 2008ರಲ್ಲಿ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಈ 18 ವರ್ಷಗಳಲ್ಲಿ ಅನೇಕ ದಾಖಲೆಗಳು ನಿರ್ಮಾಣವಾಗಿವೆ ಮತ್ತು ಆ ದಾಖಲೆಗಳನ್ನು ಮುರಿದು ಆಟಗಾರರು ಇತಿಹಾಸ ನಿರ್ಮಾಣ ಮಾಡಿದ್ದಾರೆ. ಆದರೆ, ಕೆಲವೊಂದು ದಾಖಲೆಗಳನ್ನು ಮಾತ್ರ ಇಂದಿಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. ಪ್ರಸ್ತುತ, ಟಿ20 ಕ್ರಿಕೆಟ್ ಆಡುವ ಶೈಲಿ ಬದಲಾಗಿದ್ದರು ಕೂಡ ಇಲ್ಲಿಯವರೆಗೆ ಯಾರೂ ಮುರಿಯಲು ಸಾಧ್ಯವಾಗದ ಕೆಲವು ದಾಖಲೆಗಳಿವೆ. ಆ ದಾಖಲೆಗಳು ಯಾವುವು ಅನ್ನೋದನ್ನು ನಾವೀಗ ತಿಳಿಯೋಣ. 

ಬ್ರೆಂಡನ್ ಮೆಕಲಮ್ ಇನ್ನಿಂಗ್ಸ್

ಐಪಿಎಲ್​ನ ಚೊಚ್ಚಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ನಡುವೆ ನಡೆಯಿತು. ಕೆಕೆಆರ್​ ಪರ ಆಡಿದ್ದ ಬ್ರೆಂಡನ್ ಮೆಕಲಮ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು 73 ಎಸೆತಗಳಲ್ಲಿ 10 ಬೌಂಡರಿ ಮತ್ತು 13 ಸಿಕ್ಸರ್‌ಗಳೊಂದಿಗೆ ಅಜೇಯ 158 ರನ್ ಗಳಿಸಿದರು. ಈ ಇನ್ನಿಂಗ್ಸ್ ಐಪಿಎಲ್‌ನಲ್ಲಿ ಚೊಚ್ಚಲ ಪಂದ್ಯದಲ್ಲಿ ಆಟಗಾರನೊಬ್ಬ ಗಳಿಸಿದ ಅತ್ಯಧಿಕ ಸ್ಕೋರ್ ಆಗಿದೆ. ಇಲ್ಲಿಯವರೆಗೆ ಬೇರೆ ಯಾವುದೇ ಬ್ಯಾಟ್ಸ್‌ಮನ್ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.

ಒಂದು ಪಂದ್ಯದಲ್ಲಿ ಅತ್ಯಧಿಕ ಹೆಚ್ಚುವರಿ ರನ್​

ಐಪಿಎಲ್‌ನ ಮೊದಲ ಋತುವಿನಲ್ಲಿ, ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ಹೆಚ್ಚುವರಿ ರನ್‌ಗಳನ್ನು ಬಿಟ್ಟುಕೊಟ್ಟ ದಾಖಲೆ ಕೂಡ ನಿರ್ಮಾಣವಾಯಿತು. ಈ ದಾಖಲೆಯನ್ನು ಡೆಕ್ಕನ್ ಚಾರ್ಜರ್ಸ್ ತಂಡವು ಕೋಲ್ಕತ್ತ ನೈಟ್​ ರೈಡರ್ಸ್​ ವಿರುದ್ಧ ಮಾಡಿತು. ಆ ಪಂದ್ಯದಲ್ಲಿ, ಡೆಕ್ಕನ್​​ ಚಾರ್ಜರ್ಸ್ ಬೌಲರ್‌ಗಳು 28 ಹೆಚ್ಚುವರಿ ರನ್‌ಗಳನ್ನು ಬಿಟ್ಟುಕೊಟ್ಟರು. ಇದರಲ್ಲಿ 4 ಬೈಗಳು, 8 ಲೆಗ್ ಬೈಗಳು, 15 ವೈಡ್‌ಗಳು ಮತ್ತು ಒಂದು ನೋ-ಬಾಲ್ ಸೇರಿವೆ. ಈ ಕಳಪೆ ದಾಖಲೆ ಇಂದಿಗೂ ಐಪಿಎಲ್‌ನಲ್ಲಿದೆ ಮತ್ತು ಯಾವುದೇ ತಂಡವು ಇದನ್ನು ಮೀರಿಸಿಲ್ಲ.

ಸಚಿನ್​ ತೆಂಡೂಲ್ಕರ್​ ಕ್ಯಾಚ್​ ದಾಖಲೆ

ಭಾರತದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್, ತಮ್ಮ ಚೊಚ್ಚಲ ಐಪಿಎಲ್ ಋತುವಿನಲ್ಲಿ ಅಪರೂಪದ ದಾಖಲೆಯನ್ನು ಸ್ಥಾಪಿಸಿದರು. ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಅವರು ನಾಲ್ಕು ಕ್ಯಾಚ್‌ಗಳನ್ನು ಪಡೆದರು. ಈ ದಾಖಲೆ ಇನ್ನೂ ಮುರಿಯದೆ ಹಾಗೇ ಉಳಿದಿದೆ. ಒಂದೇ ಇನ್ನಿಂಗ್ಸ್‌ನಲ್ಲಿ ಭಾರತೀಯ ಆಟಗಾರನೊಬ್ಬ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ದಾಖಲೆಯನ್ನು ಸಚಿನ್ ಹೊಂದಿದ್ದಾರೆ. ಇಲ್ಲಿಯವರೆಗೆ, ಯಾವುದೇ ಭಾರತೀಯ ಆಟಗಾರ ಒಂದೇ ಪಂದ್ಯದಲ್ಲಿ ನಾಲ್ಕುಕ್ಕಿಂತ ಹೆಚ್ಚಿನ ಕ್ಯಾಚ್‌ಗಳನ್ನು ಪಡೆದಿಲ್ಲ. ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ರಿಂಕು ಸಿಂಗ್ ಮತ್ತು ರವೀಂದ್ರ ಜಡೇಜಾ ತಲಾ ನಾಲ್ಕು ಕ್ಯಾಚ್‌ಗಳನ್ನು ತೆಗೆದುಕೊಳ್ಳುವ ಮೂಲಕ ಸಚಿನ್​ ದಾಖಲೆಯನ್ನು ಸರಿಗಟ್ಟಿದ್ದಾರೆ ಆದರೆ, ಇಲ್ಲಿಯವರೆಗೆ ಅದನ್ನು ಮುರಿಯಲು ಸಾಧ್ಯವಾಗಿಲ್ಲ.

ಒಂದು ಪಂದ್ಯದಲ್ಲಿ ಕಡಿಮೆ ರನ್​

ಐಪಿಎಲ್‌ನ ಮೊದಲ ಋತುವಿನಲ್ಲಿ, ವಾಂಖೆಡೆ ಕ್ರೀಡಾಂಗಣದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ನಡೆದಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತ 67 ರನ್‌ಗಳಿಗೆ ಆಲೌಟ್ ಆಗಿತ್ತು. ನಂತರ ಮುಂಬೈ 68 ರನ್ ಗಳಿಸಿ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದಿತು. ಈ ಪಂದ್ಯದಲ್ಲಿ ಒಟ್ಟು ಸ್ಕೋರ್ 135 ಆಗಿದ್ದು, ಇದು ಪಂದ್ಯದಲ್ಲಿ ದಾಖಲಾದ ಅತ್ಯಂತ ಕಡಿಮೆ ಸ್ಕೋರ್ ಆಗಿದೆ. 2017 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ಮತ್ತು ಡೆಲ್ಲಿ ಡೇರ್‌ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್) ನಡುವಿನ ಪಂದ್ಯದಲ್ಲಿ ಈ ದಾಖಲೆಯನ್ನು ಸಮಗೊಳಿಸಲಾಯಿತು. ಈ ಪಂದ್ಯದಲ್ಲಿ 135 ರನ್‌ಗಳು ಸಹ ದಾಖಲಾಗಿದ್ದವು, ಆದರೆ ಸ್ಕೋರ್ ಅದಕ್ಕಿಂತ ಕಡಿಮೆ ಇರಲಿಲ್ಲ.

ಅತ್ಯಧಿಕ ವಿಕೆಟ್​

ಐಪಿಎಲ್ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಐಪಿಎಲ್‌ನ ಮೊದಲ ಸೀಸನ್‌ನಲ್ಲಿ ನಿರ್ಮಾಣವಾಯಿತು. ಐಪಿಎಲ್ 2008 ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ಸೊಹೈಲ್ ತನ್ವೀರ್ 14 ರನ್‌ಗಳಿಗೆ 6 ವಿಕೆಟ್‌ಗಳನ್ನು ಪಡೆದರು. ಅವರ ದಾಖಲೆ ಇನ್ನೂ ಹಾಗೆಯೇ ಇದೆ. 2019 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಅಲ್ಜಾರಿ ಜೋಸೆಫ್, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳೊಂದಿಗೆ ತನ್ವೀರ್ ಅವರ ದಾಖಲೆಯನ್ನು ಸರಿಗಟ್ಟಿದರೂ, ಅವರ ದಾಖಲೆ ಹಾಗೆಯೇ ಉಳಿದಿದೆ.
ಅಂದಹಾಗೆ, 19ನೇ ಆವೃತ್ತಿಯು ಐಪಿಎಲ್​, ಮಾರ್ಚ್ 28ರಂದು ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ತವರು ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಸಂಜೆ 7.30ಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net