ಹೌದು, ಬ್ಯಾಟಿಂಗ್ ಮಾಡುತ್ತಿದ್ದ ಕೊಹ್ಲಿಗೆ ದೊಡ್ಡ ಶಾಟ್‌ಗಳನ್ನು ಹೊಡೆಯುವಂತೆ ಹೆಡ್ ಸವಾಲು ಹಾಕಿದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಆರ್‌ಸಿಬಿ ಸ್ಟಾರ್, "ಈಗ ಹೆಂಗೂ ನಿನ್ನನ್ನು ಸಬ್‌ಸ್ಟಿಟ್ಯೂಟ್ (ಇಂಪ್ಯಾಕ್ಟ್ ಪ್ಲೇಯರ್ ಆಗಿ ಹೊರಗೆ) ಮಾಡಲ್ಲ, ಹಾಗಾಗಿ ನೀನೇ ಬಂದು ಬೌಲಿಂಗ್ ಕೂಡ ಮಾಡಬಹುದು ನೋಡು" ಎಂದು ಹೆಡ್ ಅವರ ಕಾಲೆಳೆದಿದ್ದರು. ಪಂದ್ಯದ ಬಳಿಕ ಕೊಹ್ಲಿ, ಹೆಡ್ ಅವರ ಕೈಕುಲುಕದೇ ಮುಂದೆ ನಡೆದರು. ಇದರಿಂದ ಹೆಡ್, ತೀವ್ರ ಮುಜುಗರ ಅನುಭವಿಸಿದರು.