ಅಷ್ಟಕ್ಕೂ ಅಭಿ ಆಡಿದ ಸ್ಫೂರ್ತಿದಾಯಕ ಮಾತುಗಳು ಯಾವುವು ಅಂದರೆ, ನಾನು ನಮ್ಮ ಹುಡುಗರನ್ನು ಉತ್ತೇಜಿಸಲು ಹೋಗುತ್ತಿದ್ದೇನೆ. ಈ ಮಾತುಗಳು ನಮ್ಮ ತಂಡಕ್ಕೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ ಎನ್ನುತ್ತಾ ಮಾತು ಆರಂಭಿಸಿದ ಅಭಿಷೇಕ್, ಪ್ರತಿಯೊಂದು ಪಂದ್ಯವನ್ನು ಆನಂದಿಸುವುದು ಒಬ್ಬ ಚಾಂಪಿಯನ್ ತಂಡದ ಲಕ್ಷಣ. ಆಟಗಾರರು ಒಬ್ಬರ ಪ್ರದರ್ಶನವನ್ನು ಮತ್ತೊಬ್ಬರು ಆನಂದಿಸಬೇಕು ಮತ್ತು ಇದೇ ರೀತಿ ಬೆಂಬಲವಾಗಿ ಇರಬೇಕು ಎಂದರು. ಅಲ್ಲದೆ, ನಮ್ಮ ತಂಡವು ಎಲ್ಲಾ ಪಂದ್ಯಗಳಲ್ಲಿ ತೋರಿಸುತ್ತಿರುವ ಅಸಾಧಾರಣ ಶಕ್ತಿ ಮತ್ತು ಉತ್ಸಾಹವನ್ನು ಅಭಿ ಶ್ಲಾಘಿಸಿದರು. ನಾವು ಇಲ್ಲಿಗೆ ಬಂದಿರುವುದು ಎಲ್ಲಾ ಪಂದ್ಯಗಳನ್ನು ಗೆಲ್ಲಲು, ಆದ್ದರಿಂದ ಆಟವನ್ನು ಆನಂದಿಸುತ್ತಾ ಮುನ್ನಡೆಯೋಣ ಎಂದು ಅಭಿ ತಂಡಕ್ಕೆ ಸ್ಫೂರ್ತಿ ನೀಡಿದರು.