ಇದಲ್ಲದೆ, 2027ರಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ತಮ್ಮ ಇಚ್ಛೆಯನ್ನು ರೋಹಿತ್ ಈ ಹಿಂದೆ ಐಸಿಸಿ ಕಾರ್ಯಕ್ರಮವೊಂದರಲ್ಲಿ ವ್ಯಕ್ತಪಡಿಸಿದ್ದರು. ನನ್ನ ದೇಶಕ್ಕಾಗಿ ವಿಶ್ವಕಪ್ ಗೆಲ್ಲುವುದು ನನ್ನ ದೊಡ್ಡ ಕನಸು. ನಾನು ಬೆಳೆದಿದ್ದೇ 50 ಓವರ್ಗಳ ವಿಶ್ವಕಪ್ ನೋಡಿಕೊಂಡು, ಆಗ ಟಿ20 ಅಥವಾ ಐಪಿಎಲ್ ಇರಲಿಲ್ಲ. ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಮಹಾಸಮರವೇ ಕ್ರಿಕೆಟ್ನ ಅತ್ಯುನ್ನತ ಹಂತವಾಗಿತ್ತು. ಹಾಗಾಗಿ, ಆ ಒಂದು ಟ್ರೋಫಿ ಗೆಲ್ಲಲು ನನ್ನ ಸಂಪೂರ್ಣ ಶಕ್ತಿ ಮತ್ತು ಸಾಮರ್ಥ್ಯವನ್ನು ಹಾಕಿ ಶ್ರಮಿಸುತ್ತೇನೆ ಎಂದು ರೋಹಿತ್ ಶರ್ಮಾ ಹೇಳಿದ್ದರು. ಹೀಗಾಗಿ, ಸದ್ಯ ರೋಹಿತ್ ನಿವೃತ್ತಿ ದೂರದ ಮಾತಾಗಿದೆ, (ಏಜೆನ್ಸೀಸ್).