ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಕ್ರಮವಾಗಿ 24, 6, 6, 10 ಮತ್ತು 0 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಈ ಕಳಪೆ ಫಾರ್ಮ್ ಅವರ ವಿಶ್ವಕಪ್ ಕನಸಿಗೆ ದೊಡ್ಡ ಹಿನ್ನಡೆಯಾಯಿತು. ಸರಣಿಯಲ್ಲಿ ಅವರ ಗರಿಷ್ಠ ಮೊತ್ತವೇ 24 ರನ್ ಆಗಿದ್ದಾಗ, ಬದಲಿಯಾಗಿ ಬಂದ ಆಟಗಾರ ತಕ್ಷಣವೇ 70 ರನ್ ಮತ್ತು ನಂತರ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಇಂತಹ ಸನ್ನಿವೇಶದಲ್ಲಿ ಯಾವುದೇ ತಂಡದ ಮ್ಯಾನೇಜ್ಮೆಂಟ್ ಆದರೂ ಅತ್ಯುತ್ತಮ ಫಾರ್ಮ್ನಲ್ಲಿರುವ ಆಟಗಾರನನ್ನೇ ಆಯ್ಕೆ ಮಾಡುತ್ತದೆ ಎಂಬುದು ಸ್ಪಷ್ಟವಾಗಿದ್ದರಿಂದ, ತಾವು ವಿಶ್ವಕಪ್ ಅವಕಾಶ ತಪ್ಪಿಸಿಕೊಂಡಿರುವುದನ್ನು ಸಂಜು ಮುಂಚಿತವಾಗಿಯೇ ಅರಿತಿದ್ದರು. ಇದರಿಂದ ತೀವ್ರ ಬೇಸರವಾದರೂ, ಮೌನವಾಗಿ ಚಪ್ಪಾಳೆ ತಟ್ಟುವುದಷ್ಟೇ ತಮಗೆ ಸಾಧ್ಯವಿತ್ತು ಎಂದಿದ್ದಾರೆ.