ಎಂಥಾ ಮಾತು... ಸಂಜು ಬಗ್ಗೆ ವಿಂಡೀಸ್​ ನಾಯಕ ನೀಡಿದ ಹೇಳಿಕೆಗೆ ತಲೆಬಾಗಿದ ಕ್ರೀಡಾಜಗತ್ತು! T20 World Cup

ಸಂಜು ಬಗ್ಗೆ ವಿಂಡೀಸ್​ ನಾಯಕ ನೀಡಿದ ಹೇಳಿಕೆಗೆ ತಲೆಬಾಗಿದ ಕ್ರೀಡಾಜಗತ್ತು! T20 World Cup
ಸಂಜು ಬಗ್ಗೆ ವಿಂಡೀಸ್​ ನಾಯಕ ನೀಡಿದ ಹೇಳಿಕೆಗೆ ತಲೆಬಾಗಿದ ಕ್ರೀಡಾಜಗತ್ತು! T20 World Cup
Published on

ಪ್ರಮುಖ ಮುಖ್ಯಾಂಶಗಳು

  • ವೆಸ್ಟ್​ ಇಂಡೀಸ್​ ವಿರುದ್ಧ ಭರ್ಜರಿ ಜಯ ಸಾಧಿಸಿ ಟಿ20 ವಿಶ್ವಕಪ್​ ಟೂರ್ನಿಯ ಸಮಿಫೈನಲ್​ಗೆ ಭಾರತ ಎಂಟ್ರಿ​
  • ಪಂದ್ಯದ ಬಳಿಕ ತಮ್ಮ ಸೋಲಿನ ಬಗ್ಗೆ ಪ್ರಮುಖ ಹೇಳಿಕೆಗಳನ್ನು ನೀಡಿದ ವೆಸ್ಟ್ ಇಂಡೀಸ್ ನಾಯಕ ಶೈ ಹೋಪ್
  • ಅಸಾಧಾರಣ ಬ್ಯಾಟಿಂಗ್ ಮೂಲಕ ತಮ್ಮ ತಂಡದ ಸೋಲನ್ನು ಸಂಜು ದೂರ ಮಾಡಿದರು ಎಂದು ಹೋಪ್​
T20 World Cup : ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ನಿನ್ನೆ (ಮಾರ್ಚ್​ 01) ಸೂಪರ್-8 ಹಂತದ ಭಾಗವಾಗಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಿರ್ಣಾಯಕ ಪಂದ್ಯ ನಡೆಯಿತು. ಉಭಯ ತಂಡಕ್ಕೆ ಗೆಲ್ಲಲೇಬೇಕಾದ ಪಂದ್ಯ ಇದಾಗಿತ್ತು. ಕೊನೆಯವರೆಗೂ ನಡೆದ ರೋಚಕ ಹಣಾಹಣಿಯಲ್ಲಿ ಅಂತಿಮವಾಗಿ ಟೀಮ್​ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿತು. ವಿಂಡೀಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ, ಭಾರತ ಸೆಮೀಸ್​ಗೆ ಲಗ್ಗೆ ಇಟ್ಟಿದೆ.
ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡವು ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ 195 ರನ್ ಗಳಿಸಿತು. ನಂತರ, ಗುರಿ ಬೆನ್ನತ್ತಿದ ಭಾರತ 19.2 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 199 ರನ್ ಗಳಿಸಿ ಜಯಗಳಿಸಿತು. ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ 97 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ ಟೀಮ್ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಪಂದ್ಯದ ಬಳಿಕ ವೆಸ್ಟ್ ಇಂಡೀಸ್ ನಾಯಕ ಶೈ ಹೋಪ್ ತಮ್ಮ ಸೋಲಿನ ಬಗ್ಗೆ ಪ್ರಮುಖ ಹೇಳಿಕೆಗಳನ್ನು ನೀಡಿದರು.
ಕೋಲ್ಕತದ ಈಡನ್​ ಗಾರ್ಡನ್​, ಚೇಸಿಂಗ್‌ಗೆ ಸೂಕ್ತವಾದ ಮೈದಾನ. ಈ ಪಂದ್ಯದಲ್ಲಿ ನಾವು ನಾವು ಕೊನೆಯವರೆಗೂ ಹೆಚ್ಚು ಆಕ್ರಮಣಕಾರಿಯಾಗಿ ಆಡಬೇಕಿತ್ತು. ನಾವು ಭಾರತ ತಂಡಕ್ಕೆ ಇನ್ನೂ ಕೆಲವು ರನ್‌ಗಳನ್ನು ನೀಡಿದ್ದರೆ, ಫಲಿತಾಂಶ ವಿಭಿನ್ನವಾಗಿರುತ್ತಿತ್ತು. ಇಲ್ಲಿ ಸಂಜು ಸ್ಯಾಮ್ಸನ್ ಬಗ್ಗೆ ಮಾತನಾಡಲೇಬೇಕು. ತಮ್ಮ ಅಸಾಧಾರಣ ಬ್ಯಾಟಿಂಗ್ ಮೂಲಕ ತಮ್ಮ ತಂಡದ ಸೋಲನ್ನು ಸಂಜು ದೂರ ಮಾಡಿದರು. ಅವರು ನಿಜವಾಗಿಯೂ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಹೀಗಾಗಿ, ಈ ಪಂದ್ಯದ ಕ್ರೆಡಿಟ್​ ಅವರಿಗೆ ನೀಡಬೇಕು ಮನಸಾರೆ ಹೊಗಳುವ ಮೂಲಕ ಶೈ ಹೋಪ್ ಕ್ರೀಡಾ ಸ್ಫೂ​ರ್ತಿ ಮೆರೆದರು.
ಜಸ್ಪ್ರೀತ್ ಬುಮ್ರಾ, ಟೀಮ್​ ಇಂಡಿಯಾದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರು. ಅವರ ಕೈಯಲ್ಲಿ ಚೆಂಡು ಇದ್ದಾಗ, ಏನು ಬೇಕಾದರೂ ನಡೆಯುತ್ತದೆ ಅನ್ನೋದು ನಿಮಗೆ ತಿಳಿದಿರುತ್ತದೆ. ವಿಶೇಷವಾಗಿ, ಶಿಮ್ರಾನ್​ ಹೆಟ್ಮೆಯರ್ ಈ ಪಂದ್ಯಾವಳಿಯಲ್ಲಿ ಉತ್ತಮವಾಗಿ ಆಡುತ್ತಿದ್ದರು. ಆದರೆ, ಬುಮ್ರಾ ಅವರನ್ನು ಬೇಗನೆ ಔಟ್​ ಮಾಡಿ ಪೆವಿಲಿಯನ್‌ಗೆ ಕಳುಹಿಸಿದರು. ಹೆಟ್ಮೆಯರ್​ ವಿಕೆಟ್ ಪಡೆದದ್ದು ಈ ಪಂದ್ಯದ ತಿರುವು. ಆದಾಗ್ಯೂ, ನಾವು 190 ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಗೆಲ್ಲುವ ಅವಕಾಶಗಳನ್ನು ಸೃಷ್ಟಿಸಿದೆವು ಎಂದು ಹೋಪ್​ ಹೇಳಿದರು.
ನಮ್ಮ ತಂಡದ ಬೌಲರ್‌ಗಳು ಸಹ ಅದ್ಭುತವಾಗಿ ಬೌಲಿಂಗ್ ಮಾಡಿದರು. ಆದರೆ, ಇಂದು ನಾವು ಗೆಲುವಿನ ಗೆರೆಯನ್ನು ದಾಟಲು ಸಾಧ್ಯವಾಗಲಿಲ್ಲ. ಈ ಹಂತದಲ್ಲಿ ಯಾರೂ ಬಿಟ್ಟುಕೊಡಲು ಬಯಸುವುದಿಲ್ಲ. ಒಟ್ಟಾರೆಯಾಗಿ, ಈ ಪಂದ್ಯದಲ್ಲಿ, ನಿರ್ಣಾಯಕ ಸಮಯದಲ್ಲಿ ನಾವು ಗೆಲುವನ್ನು ನಮ್ಮ ಪರವಾಗಿ ತಿರುಗಿಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ ಎಂದು ಶೈ ಹೋಪ್ ಹೇಳಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net