ಕ್ರಿಕೆಟ್ ಇತಿಹಾಸದಲ್ಲೇ ಹೊಸ ಮೈಲಿಗಲ್ಲು: ಜಿಯೋಹಾಟ್‌ಸ್ಟಾರ್‌ನಲ್ಲಿ ದಾಖಲೆಯ 65.2 ಮಿಲಿಯನ್ ವೀಕ್ಷಣೆ! T20 World Cup

(ಚಿತ್ರ X)
(ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ಕ್ರಿಕೆಟ್ ಜಗತ್ತಿನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪೈಪೋಟಿ ಯಾವಾಗಲೂ ರೋಚಕವಾಗಿರುತ್ತದೆ.
  • ಪಂದ್ಯವು ಜಿಯೋಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್‌ನಲ್ಲಿ ಬರೋಬ್ಬರಿ 65.2 ಮಿಲಿಯನ್ ಏಕಕಾಲಿಕ ವೀಕ್ಷಕರನ್ನು ಹೊಂದಿದೆ
  • ಇದು ಭಾರತೀಯ ಮಾರುಕಟ್ಟೆಯಲ್ಲಿ ಕ್ರಿಕೆಟ್ ಹೊಂದಿರುವ ಸಾಟಿಯಿಲ್ಲದ ಸಾಮರ್ಥ್ಯವನ್ನು ಒತ್ತಿಹೇಳುತ್ತದೆ
  • 2026 ರ ಐಸಿಸಿ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಡಿಜಿಟಲ್ ವೀಕ್ಷಕರ ವಿಶ್ವ ದಾಖಲೆಯನ್ನು ಮುರಿದಿದೆ
ಮುಂಬೈ: ಕ್ರಿಕೆಟ್ ಜಗತ್ತಿನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪೈಪೋಟಿ ಯಾವಾಗಲೂ ರೋಚಕವಾಗಿರುತ್ತದೆ. ಆದರೆ, ಇತ್ತೀಚೆಗೆ ನಡೆದ ಟಿ20 ವಿಶ್ವಕಪ್‌ನ (T20 World Cup) ಎರಡನೇ ಸೆಮಿಫೈನಲ್ ಪಂದ್ಯವು ಕೇವಲ ಮೈದಾನದ ಆಟದಲ್ಲಿ ಮಾತ್ರವಲ್ಲದೆ, ಡಿಜಿಟಲ್ ವೀಕ್ಷಣೆಯಲ್ಲೂ ಇಡೀ ವಿಶ್ವವೇ ಬೆರಗಾಗುವಂತಹ ಹೊಸ ದಾಖಲೆಯನ್ನು ಬರೆದಿದೆ. 
ಈ ಪಂದ್ಯವು ಜಿಯೋಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್‌ನಲ್ಲಿ ಬರೋಬ್ಬರಿ 65.2 ಮಿಲಿಯನ್ ಏಕಕಾಲಿಕ ವೀಕ್ಷಕರನ್ನು ಹೊಂದುವ ಮೂಲಕ ಜಾಗತಿಕ ಮಾನದಂಡವನ್ನು ಸ್ಥಾಪಿಸಿದೆ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಅಧಿಕೃತವಾಗಿ ತಿಳಿಸಿದೆ.
ಭಾರತವು ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿ ಫೈನಲ್​ಗೆ ಪ್ರವೇಶಿಸಿದ ನಂತರ ಲೈವ್​ ಕಾರ್ಯಕ್ರಮಕ್ಕಾಗಿ ಅತ್ಯಧಿಕ ಗರಿಷ್ಟ ದಿಜಿಟಲ್​ ವೀಕ್ಷಕರ ಸಂಖ್ಯೆಯನ್ನು ದಾಖಲಿಸಿದ್ದು,  ಇದು  ಭಾರತೀಯ ಮಾರುಕಟ್ಟೆಯಲ್ಲಿ ಕ್ರಿಕೆಟ್ ಹೊಂದಿರುವ ಸಾಟಿಯಿಲ್ಲದ ಸಾಮರ್ಥ್ಯವನ್ನು ಒತ್ತಿಹೇಳುತ್ತದೆ.
2026 ರ ಐಸಿಸಿ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಡಿಜಿಟಲ್ ವೀಕ್ಷಕರ ವಿಶ್ವ ದಾಖಲೆಯನ್ನು ಮುರಿದಿದೆ. ಆದಾಗ್ಯೂ, ಬಿಸಿಸಿಐ ಮತ್ತು ಇಂಗ್ಲೆಂಡ್ ಕ್ರಿಕೆಟ್ ನಡುವಿನ ಪಂದ್ಯವು ಜಿಯೋಹಾಟ್‌ಸ್ಟಾರ್‌ನಲ್ಲಿ 65.2 ಮಿಲಿಯನ್ ಗರಿಷ್ಟ ವೀಕ್ಷರನ್ನು ಏಕಕಾಲದಲ್ಲಿ ಸೆಳೆಯುವ ಮೂಲಕ ಹಳೆ ದಾಖಲೆಗಳನ್ನು ಮುರಿದಿದೆ. ಇದು ಪ್ರಪಂಚದಾದ್ಯಂತ ಯಾವುದೇ ಲೈವ್​ ಕಾರ್ಯಕ್ರಮಕ್ಕೆ ಅತ್ಯಧಿಕವಾಗಿದೆ ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆದಾಗ್ಯೂ, ಈ ಬೃಹತ್ ವೀಕ್ಷಕರ ಸಂಖ್ಯೆಯು ಜಾಗತಿಕ ಮಟ್ಟದ ಪ್ರಮುಖ ಕ್ರಿಕೆಟ್ ಪಂದ್ಯಾವಳಿಗಳು ಎಷ್ಟು ದೊಡ್ಡ ಮಟ್ಟದ ಪ್ರೇಕ್ಷಕರನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿವೆ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದರು.
ಇದು ಭಾರತೀಯ ಅಭಿಮಾನಿಗಳನ್ನು ಒಟ್ಟುಗೂಡಿಸುವಲ್ಲಿ ಮಾರ್ಕ್ಯೂ ಗ್ಲೋಬಲ್ ಕ್ರಿಕೆಟ್‌ನ ಅಪ್ರತಿಮ ಸಾಮರ್ಥ್ಯವನ್ನು ಹಾಗೂ ಐಸಿಸಿಯಲ್ಲಿ ನನ್ನ ತಂಡ ಮತ್ತು ನಮ್ಮ ಪಾಲುದಾರ ಜಿಯೋಸ್ಟಾರ್‌ನ ಅಭಿಮಾನಿಗಳನ್ನು ದೊಡ್ಡ ಪ್ರಮಾಣದಲ್ಲಿ ನೇಮಿಸಿಕೊಳ್ಳುವ ಮತ್ತು ತೊಡಗಿಸಿಕೊಳ್ಳುವಲ್ಲಿನ ಪರಾಕ್ರಮವನ್ನು ಪ್ರದರ್ಶಿಸುತ್ತದೆ ಎಂದು ಶಾ ಬರೆದಿದ್ದಾರೆ.
ಡಿಜಿಟಲ್ ಯುಗದಲ್ಲಿ ಕ್ರೀಡೆಯು ಜಾಗತಿಕ ವ್ಯಾಪ್ತಿಗೆ ಹೆಗ್ಗುರುತಾಗಿದ್ದು, ಕ್ರೀಡೆ, ಮಾಧ್ಯಮ ಮತ್ತು  ಸ್ಟ್ರೀಮಿಂಗ್ ಜಗತ್ತಿನಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವುದು ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣ ಎಂದು ಹೇಳಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net