ಟಿ20 ವಿಶ್ವಕಪ್: ಭಾರತ-ಪಾಕ್​ ಪಂದ್ಯದ ಗೊಂದಲ ಫೆ.15ರವರೆಗೂ ಮುಂದುವರಿಯಲಿದೆ!

ಟಿ20 ವಿಶ್ವಕಪ್: ಫೆ.15ರವರೆಗೂ ಭಾರತ-ಪಾಕ್​ ಪಂದ್ಯದ ಗೊಂದಲ ಮುಂದುವರಿಯಲಿದೆ!
ಟಿ20 ವಿಶ್ವಕಪ್: ಫೆ.15ರವರೆಗೂ ಭಾರತ-ಪಾಕ್​ ಪಂದ್ಯದ ಗೊಂದಲ ಮುಂದುವರಿಯಲಿದೆ!
Published on
ನವದೆಹಲಿ: ಟಿ20 ವಿಶ್ವಕಪ್​ನಲ್ಲಿ (T20 World Cup) ಭಾಗವಹಿಸಿದರೂ, ಭಾರತ ವಿರುದ್ಧದ ಪಂದ್ಯದಲ್ಲಿ ಆಡುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ಸಾಮಾಜಿಕ ಜಾಲತಾಣದಲ್ಲಿ ಭಾನುವಾರವೇ ಘೋಷಣೆ ಮಾಡಿದ್ದು, ಇದನ್ನು ಅಧಿಕೃತ ನಿಲುವು ಎಂದೂ ಪರಿಗಣಿಸಲಾಗಿದೆ. ಆದರೆ ಇದಾಗಿ 2 ದಿನ ಕಳೆದರೂ ಪಾಕಿಸ್ತಾನ ಕ್ರಿಕೆಟ್​ ಮಂಡಳಿ (ಪಿಸಿಬಿ) ಈ ಬಹಿಷ್ಕಾರದ ನಿಲುವನ್ನು ಐಸಿಸಿಗೆ ಇಮೇಲ್​ ಮೂಲಕ ಲಿಖಿತವಾಗಿ ಇನ್ನೂ ಐಸಿಸಿಗೆ ಮಾಹಿತಿ ನೀಡಿಲ್ಲ. ಇದರಿಂದಾಗಿ ಟಿ20 ವಿಶ್ವಕಪ್​ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ನಡೆಯುವುದೇ, ಇಲ್ಲವೇ ಎಂಬ ಗೊಂದಲ ಫೆ.15ರವರೆಗೂ ಮುಂದುವರಿಯುವ ಸಾಧ್ಯತೆ ಇದೆ.

ಭಾರತ ವಿರುದ್ಧದ ಪಂದ್ಯ ಬಹಿಷ್ಕಾರದ ಮಾಹಿತಿ ಹೊರಬಿದ್ದ ಬೆನ್ನಲ್ಲೇ ಐಸಿಸಿ, ಈ ಆಯ್ದ ಆಟದ ನಿಲುವನ್ನು ಖಂಡಿಸಿತ್ತು ಮತ್ತು ಕಠಿಣ ಕ್ರಮದ ಎಚ್ಚರಿಕೆ ನೀಡಿತ್ತು. ಇದರಿಂದಾಗಿ ಪಿಸಿಬಿಗೆ ಟಿ20 ವಿಶ್ವಕಪ್​ನಲ್ಲಿ ಆಡುವ ಅವಕಾಶವೇ ಕೈತಪ್ಪುವ ಭೀತಿ ಇದೆ. ಹೀಗಾಗಿ ಪಿಸಿಬಿ, ಭಾರತ ವಿರುದ್ಧದ ಪಂದ್ಯ ಬಹಿಷ್ಕಾರದ ಬಗ್ಗೆ ಐಸಿಸಿಗೆ ಅಧಿಕೃತ ಮಾಹಿತಿ ನೀಡದೆ ಕುತಂತ್ರ ಅನುಸರಿಸಿದೆ. ಇದರಿಂದ ವಿಶ್ವಕಪ್​ನಿಂದ ಹೊರಬೀಳುವ ಅಪಾಯದಿಂದ ಪಾಕ್​ ಸದ್ಯಕ್ಕೆ ಪಾರಾದರೂ, ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸಿದರೆ ಭವಿಷ್ಯದಲ್ಲಾದರೂ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net