ಇದೇನಾದ್ರೂ ನಡೆದರೆ ಭಾರತಕ್ಕೆ ನೆಟ್​ ರನ್​ ರೇಟ್​ ಅವಶ್ಯಕತೆಯೇ ಇರುವುದಿಲ್ಲ: ಈಗ ಎಲ್ಲರ ಕಣ್ಣು ಅದೊಂದರ ಮೇಲೆ! T20 World Cup 2026

ಇದೇನಾದ್ರೂ ನಡೆದರೆ ಭಾರತಕ್ಕೆ ನೆಟ್​ ರನ್​ ರೇಟ್​ ಅವಶ್ಯಕತೆಯೇ ಇರುವುದಿಲ್ಲ! T20 World Cup 2026
ಇದೇನಾದ್ರೂ ನಡೆದರೆ ಭಾರತಕ್ಕೆ ನೆಟ್​ ರನ್​ ರೇಟ್​ ಅವಶ್ಯಕತೆಯೇ ಇರುವುದಿಲ್ಲ! T20 World Cup 2026
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್​ ಟೂರ್ನಿಯ ಸೂಪರ್-8ರ ಭಾಗವಾಗಿ ಇಂದು ಜಿಂಬಾಬ್ವೆ ವಿರುದ್ಧ ಭಾರತ ಸೆಣಸಾಟ
  • ಮಹತ್ವದ ಪಂದ್ಯಕ್ಕೆ ವೇದಿಕೆಯಾಗಲಿದೆ ಚೆನ್ನೈನ ಚೆಪಾಕ್ ಕ್ರೀಡಾಂಗಣ
  • ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಆಶಯ ಟೀಮ್​ ಇಂಡಿಯಾಗಿದೆ
T20 World Cup 2026  : ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ ಟೂರ್ನಿಯ ಸೂಪರ್-8ರ ಭಾಗವಾಗಿ ಟೀಮ್ ಇಂಡಿಯಾ ಇಂದು (ಫೆ.26) ಕ್ರಿಕೆಟ್​ ಶಿಶು ಜಿಂಬಾಬ್ವೆಯನ್ನು ಎದುರಿಸಲಿದೆ. ಚೆನ್ನೈನ ಚೆಪಾಕ್ ಕ್ರೀಡಾಂಗಣ ಈ ಪಂದ್ಯಕ್ಕೆ ವೇದಿಕೆಯಾಗಲಿದೆ. ಈ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿ, ತನ್ನ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಆಶಯವನ್ನು ಟೀಮ್​ ಇಂಡಿಯಾ ಹೊಂದಿದೆ. 
ಆದಾಗ್ಯೂ, ಈ ಪಂದ್ಯಕ್ಕೂ ಮೊದಲು, ಅಹಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯದ ಫಲಿತಾಂಶವು ಕೂಡ ಭಾರತ ತಂಡದ ಸೆಮಿಫೈನಲ್ ಅವಕಾಶಗಳ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಹೀಗಾಗಿ, ಟೀಮ್ ಇಂಡಿಯಾದ ಅಭಿಮಾನಿಗಳು ವಿಂಡೀಸ್​ ವಿರುದ್ಧ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಲಿ ಎಂದು ಬೇಡಿಕೊಳ್ಳುತ್ತಿದ್ದಾರೆ. 
ಸೂಪರ್-8 ರ ಮೊದಲ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು ಅನುಭವಿಸಿತು. ಇದರಿಂದಾಗಿ, ಭಾರತ ತಂಡದ ನೆಟ್​ ರನ್​ ರೇಟ್​ (-3.800) ತೀವ್ರವಾಗಿ ಕುಸಿಯಿತು. ಮತ್ತೊಂದೆಡೆ, ವೆಸ್ಟ್ ಇಂಡೀಸ್ ತಂಡವು ಜಿಂಬಾಬ್ವೆಯನ್ನು ಭಾರಿ ಅಂತರದಿಂದ ಸೋಲಿಸಿ ಬೃಹತ್ ನೆಟ್ ರನ್​ ರೇಟ್​ (+5.350) ಪಡೆದುಕೊಂಡಿತು. ಉತ್ತಮ ನೆಟ್​ ರನ್​ ರೇಟ್​ನೊಂದಿಗೆ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸಮಾನ ಅಂಕಗಳನ್ನು ಗಳಿಸಿವೆ ಮತ್ತು ವೆಸ್ಟ್ ಇಂಡೀಸ್ ಪ್ರಸ್ತುತ ಗ್ರೂಪ್​-1 ರಲ್ಲಿ ಅಗ್ರಸ್ಥಾನದಲ್ಲಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲ್ಲಬೇಕೆಂದು ಭಾರತ ತಂಡ ಬಯಸುತ್ತದೆ. ಏಕೆಂದರೆ, ಹರಿಣ ಪಡೆ ಗೆದ್ದರೆ ಭಾರತದ ಸೆಮಿಸ್ ಹಾದಿ ಸುಲಭವಾಗುತ್ತದೆ. ಒಂದು ವೇಳೆ ವೆಸ್ಟ್ ಇಂಡೀಸ್ ಗೆದ್ದರೆ, ಟೀಮ್​ ಇಂಡಿಯಾ ಜಿಂಬಾಬ್ವೆ ವಿರುದ್ಧದ ಪಂದ್ಯ ಹಾಗೂ ತಮ್ಮ ಕೊನೆಯ ಸೂಪರ್​ 8ರ ಪಂದ್ಯವನ್ನು ಭಾರಿ ಅಂತರದಿಂದ ಗೆಲ್ಲಬೇಕಾಗುವ ಅನಿವಾರ್ಯ ಸೃಷ್ಟಿಯಾಗುತ್ತದೆ. 

ವಿಂಡೀಸ್​ ಸೋತರೆ ಏನಾಗುತ್ತದೆ?

ಒಂದು ವೇಳೆ ವೆಸ್ಟ್ ಇಂಡೀಸ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೋತರೆ, ಭಾರತಕ್ಕೆ ಲಾಭವಾಗುತ್ತದೆ. ಏಕೆಂದರೆ, ಆಗ ನೆಟ್​ ರನ್​ ರೇಟ್ ಮುಖ್ಯವಾಗುವುದಿಲ್ಲ. ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಗೆದ್ದರೆ 4 ಅಂಕಗಳನ್ನು ಗಳಿಸಿ ಗ್ರೂಪ್​ 1 ರಲ್ಲಿ ಅಗ್ರಸ್ಥಾನವನ್ನು ತಲುಪುತ್ತದೆ. ಜಿಂಬಾಬ್ವೆ ವಿರುದ್ಧ ಭಾರತ ಗೆದ್ದರೆ, ಅವರು ಎರಡು ಅಂಕಗಳನ್ನು ಗಳಿಸುತ್ತಾರೆ. ಆಗ ಭಾರತ ಮತ್ತು ವೆಸ್ಟ್ ಇಂಡೀಸ್ ತಲಾ ಎರಡು ಅಂಕಗಳೊಂದಿಗೆ ಸಮಾನವಾಗಿರುತ್ತವೆ. ಇದಾದ ಬಳಿಕ ಮಾರ್ಚ್​ 1 ರಂದು ನಡೆಯುವ ಭಾರತ ಮತ್ತು ವೆಸ್ಟ್ ಇಂಡೀಸ್ ಪಂದ್ಯವು ನಿರ್ಣಾಯಕ ಪಂದ್ಯವಾಗುತ್ತದೆ. ಈ ಪಂದ್ಯವನ್ನು ಗೆದ್ದ ತಂಡವು ನೇರವಾಗಿ ಸೆಮಿಫೈನಲ್ ಪ್ರವೇಶಿಸುತ್ತದೆ. 
ದಕ್ಷಿಣ ಆಫ್ರಿಕಾ ತನ್ನ ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಎದುರಿಸಲಿದೆ. ಈ ಪಂದ್ಯದ ಫಲಿತಾಂಶವು ಯಾವುದೇ ಪರಿಣಾಮ ಬೀರುವುದಿಲ್ಲ. ಈ ಪಂದ್ಯದಲ್ಲಿ ಸಫಾರಿಗಳು ಸೋತರೂ, ಅವರು 4 ಅಂಕಗಳೊಂದಿಗೆ ಸೆಮಿಫೈನಲ್ ತಲುಪುತ್ತಾರೆ, (ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net