ಅಂದಹಾಗೆ, ಟಿ20 ವಿಶ್ವಕಪ್ ಪಂದ್ಯಾವಳಿಯ ನಿರ್ಣಾಯಕ ಸೆಮಿಫೈನಲ್ ಪಂದ್ಯಗಳು ಆರಂಭವಾಗುವುದಕ್ಕೂ ಮುನ್ನವೇ, ಭಾರತ ಮತ್ತು ಇಂಗ್ಲೆಂಡ್ ನಡುವಿನ ಹಿಂದಿನ ದಾಖಲೆಗಳು ಈಗ ವೈರಲ್ ಆಗಿವೆ. ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಈ ಎರಡೂ ತಂಡಗಳ ನಡುವೆ ಒಟ್ಟು ಐದು ಪಂದ್ಯಗಳು ನಡೆದಿವೆ. ಈ ಐದು ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಭಾರತ ಗೆದ್ದಿದೆ. ಉಳಿದಂತೆ ಎರಡು ಪಂದ್ಯಗಳಲ್ಲಿ ಆಂಗ್ಲ ಪಡೆ ಗೆದ್ದಿದೆ. ಕೊನೆಯ ಬಾರಿಗೆ ಭಾರತ ವಿರುದ್ಧ ಇಂಗ್ಲೆಂಡ್ ಸೆಮಿಫೈನಲ್ ಪಂದ್ಯವನ್ನು 2024 ರಲ್ಲಿ ಆಡಿತ್ತು. ಈ ವೇಳೆ ಟೀಮ್ ಇಂಡಿಯಾ 68 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತ್ತು. ಈಗ, ಮತ್ತೊಮ್ಮೆ ಮಾರ್ಚ್ 5 ರಂದು, ಈ ಎರಡೂ ತಂಡಗಳು ಸೆಮಿಫೈನಲ್ ಹಂತದಲ್ಲಿ ಪರಸ್ಪರ ಎದುರಾಗುತ್ತಿವೆ. ಯಾರು ಗೆಲ್ಲುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್).