ಶ್ರೇಯಾಂಕಾ​ ಕೈಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ರಾ ಪಲಾಶ್​! ಮದುವೆ ಹಿಂದಿನ ರಾತ್ರಿ ನಡೆದಿದ್ದೇನು? Smriti Mandhana

ಮಹಿಳಾ ಕ್ರಿಕೆಟರ್​ ಸ್ಮೃತಿ ಮಂಧಾನ, ಸಂಗೀತ ನಿರ್ದೇಶಕ ಪಲಾಶ್​ ಮುಚ್ಚಲ್​ ಮತ್ತು ಕ್ರಿಕೆಟರ್​ ಶ್ರೇಯಾಂಕಾ ಪಾಟೀಲ್​
ಮಹಿಳಾ ಕ್ರಿಕೆಟರ್​ ಸ್ಮೃತಿ ಮಂಧಾನ, ಸಂಗೀತ ನಿರ್ದೇಶಕ ಪಲಾಶ್​ ಮುಚ್ಚಲ್​ ಮತ್ತು ಕ್ರಿಕೆಟರ್​ ಶ್ರೇಯಾಂಕಾ ಪಾಟೀಲ್​
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್ ಇಂಡಿಯಾದ ಮಹಿಳಾ ಕ್ರಿಕೆಟರ್​ ಸ್ಮೃತಿ ಮಂಧಾನ ಮದುವೆ ರದ್ದಾಗಿರುವುದು ನಿಮಗೆ ಗೊತ್ತಿದೆ
  • ಡಿಸೆಂಬರ್ 7 ರಂದು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಅಧಿಕೃತವಾಗಿ ತಿಳಿಸಿದ ಸ್ಮೃತಿ
  • ಮದುವೆ ಹಿಂದಿನ ರಾತ್ರಿ ಟೀಮ್​ ಇಂಡಿಯಾ ಕ್ರಿಕೆಟರ್​ ಶ್ರೇಯಾಂಕಾ ಪಾಟೀಲ್ ಕಣ್ಣಿಗೆ ಬಿದ್ದಿದ್ದೇನು?
ಮುಂಬೈ: ಟೀಮ್ ಇಂಡಿಯಾದ ಮಹಿಳಾ ಕ್ರಿಕೆಟರ್​ ಸ್ಮೃತಿ ಮಂಧಾನ ( Smriti Mandhana ) ಅವರ ವಿವಾಹ ರದ್ದಾಗಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಅಂದುಕೊಂಡಂತೆ ನಡೆದಿದ್ದರೆ ನವೆಂಬರ್​ 23ರಂದೇ ಸ್ಮೃತಿ ಅವರ ಮದುವೆ ಬಾಲಿವುಡ್​ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜತೆ ನಡೆಯಬೇಕಿತ್ತು. ಸಿನಿಮಾ ಕತೆಯಲ್ಲಿ ಬರುವ ಟ್ವಿಸ್ಟ್​ನಂತೆ ಮದುವೆಗೂ ಕೆಲ ಗಂಟೆಗಳ ಮುನ್ನ ಅನಿರೀಕ್ಷಿತವಾಗಿ ವಿವಾಹವನ್ನು ಮುಂದೂಡಲಾಯಿತು. ಸುಮಾರು ಎರಡು ವಾರಗಳ ಬಳಿಕ ವಿವಾಹ ರದ್ದಾಗಿರುವುದಾಗಿ ಸ್ವತಃ ಸ್ಮೃತಿ ಹಾಗೂ ಪಲಾಶ್​ ಅಧಿಕೃತವಾಗಿ ತಿಳಿಸಿದರು.
ಅಂದಹಾಗೆ, ಆರಂಭದಲ್ಲಿ ಸ್ಮೃತಿ ಅವರ ತಂದೆ ಶ್ರೀನಿವಾಸ್ ಅವರ ಆರೋಗ್ಯ ಹದಗೆಟ್ಟ ಕಾರಣ ಮದುವೆಯನ್ನು ಮುಂದೂಡಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಅನೇಕ ಸುದ್ದಿ ಮಾಧ್ಯಮಗಳಲ್ಲಿ ಹರಡಿತು. ಇದರ ನಡುವೆ ಪಲಾಶ್ ಕೂಡ ಅನಾರೋಗ್ಯಕ್ಕೆ ಒಳಗಾದರು. ಸುಮಾರು ಎರಡು ವಾರಗಳ ಕಾಲ ಸ್ಮೃತಿ ಅವರ ಮದುವೆ ಮುಂದೂಡಿದ ವಿಚಾರವಾಗಿ ನಾನಾ ವದಂತಿಗಳು ಹರಿದಾಡಿದವು. ಪಲಾಶ್​ಗೆ ಬೇರೊಂದು ಯುವತಿಯ ಜತೆ ಸಂಬಂಧ ಇದೆ ಅನ್ನೋ ಊಹಾಪೋಹ ಕೂಡ ಹೊರಬಿತ್ತು. ಅಂತಿಮವಾಗಿ ಇಬ್ಬರೂ ಡಿಸೆಂಬರ್ 7 ರಂದು ತಮ್ಮ ಇನ್​ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಳ್ಳುವ ಮೂಲಕ ಅಧಿಕೃತವಾಗಿ ಘೋಷಣೆ ಮಾಡಿದರು.
ಅಂದಹಾಗೆ, ಮದುವೆ ರದ್ದಾಗಲು ಕಾರಣ ಏನೆಂಬುದನ್ನು ಸ್ಮೃತಿ ಆಗಲಿ ಅಥವಾ ಪಲಾಶ್​ ಆಗಲಿ ತಿಳಿಸಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಕೆಲವು ಆಘಾತಕಾರಿ ವಿಷಯಗಳು ಹರಿದಾಡುತ್ತಿವೆ. ಪಲಾಶ್ ಓರ್ವ ಯುವತಿಯೊಂದಿಗೆ ಚಾಟ್ ಮಾಡಿದ್ದಾರೆ ಎನ್ನಲಾದ ಕೆಲವು ಸ್ಕ್ರೀನ್‌ಶಾಟ್‌ಗಳು ಸಹ ವೈರಲ್ ಆಗಿವೆ. ಆದರೆ, ಸ್ಕ್ರೀನ್​ಶಾಟ್​ಗಳು ಪಲಾಶ್​ಗೆ ಸಂಬಂಧಿಸಿದ್ದು ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ. 
ಇದರ ನಡುವೆ ಮತ್ತೊಂದು ಆಘಾತಕಾರಿ ಸುದ್ದಿ ಅಂತರ್ಜಾಲದಲ್ಲಿ ಅಲೆದಾಡುತ್ತಿದೆ. ಅದೇನೆಂದರೆ, ಸಾಂಗ್ಲಿಯಲ್ಲಿರುವ ಸ್ಮೃತಿ ಒಡೆತನದ ಫಾರ್ಮ್​ಹೌಸ್​ನಲ್ಲಿ ಮದುವೆ ನಡೆಯಬೇಕಿತ್ತು. ಆದರೆ, ಮದುವೆಯ ಹಿಂದಿನ ರಾತ್ರಿ ಮಹಿಳಾ ಕ್ರಿಕೆಟಿಗರೊಬ್ಬರು ಪಲಾಶ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದರು ಎನ್ನಲಾಗುತ್ತಿದೆ. ಸ್ಮೃತಿ ಅವರು ಮದುವೆಯ ಹಿಂದಿನ ರಾತ್ರಿ ಫಾರ್ಮ್‌ಹೌಸ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಮೋಜು ಮಾಡುತ್ತಿದ್ದರಂತೆ. ಈ ಸಮಯದಲ್ಲಿ, ಟೀಮ್ ಇಂಡಿಯಾ ಕ್ರಿಕೆಟರ್​ ಶ್ರೇಯಾಂಕಾ ಪಾಟೀಲ್ ಅವರ ಕಣ್ಣಿಗೆ ಅನಿರೀಕ್ಷಿತ ದೃಶ್ಯವೊಂದು ಬಿದ್ದಿತು ಎನ್ನಲಾಗಿದೆ. 
ಪಲಾಶ್ ಮುಚ್ಚಲ್ ನೃತ್ಯ ನಿರ್ದೇಶಕಿ ನಂದಿಕಾ ದ್ವಿವೇದಿ ಎನ್ನುವರ ಜತೆ ತುಂಬಾ ಸಲುಗೆಯಿಂದ ಇರುವುದನ್ನು ಶ್ರೇಯಾಂಕಾ ಪಾಟೀಲ್ ನೋಡಿದ್ದಾರೆ ಎನ್ನಲಾಗಿದೆ. ಶ್ರೇಯಾಂಕಾ ಅವರು ತಕ್ಷಣ ಸ್ಮೃತಿಗೆ ಈ ವಿಷಯವನ್ನು ತಿಳಿಸಿದ್ದಾರೆ. ಸ್ಮೃತಿ ಕೂಡ ಪಲಾಶ್ ಮತ್ತು ನಂದಿಕಾ ಸಲುಗೆಯಿಂದಿರುವ ಸ್ಥಿತಿಯಲ್ಲಿ ನೋಡಿದ್ದಾರೆ. ಇದು ಸ್ಮೃತಿಯ ಸಹೋದರನಿಗೆ ತಿಳಿದಾಗ ಪಲಾಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಸ್ಥಳದಲ್ಲಿ ಭಾರಿ ಜಗಳ ನಡೆದಿದೆ. ಇದೆಲ್ಲವೂ ನಡೆದಾಗ ಆ ಸ್ಥಳದಲ್ಲಿ ಕೆಲವೇ ಕೆಲವು ಜನರು ಮಾತ್ರ ಇದ್ದರು. 
ಈ ವಿಚಾರ ಕೇಳಿದ ಸ್ಮೃತಿಯ ತಂದೆಗೆ ಬೆಳಗ್ಗೆ ಆರೋಗ್ಯ ಹದಗೆಟ್ಟಿತು ಮತ್ತು ಮದುವೆಯನ್ನು ಮುಂದೂಡಲಾಯಿತು. ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ ಪಲಾಶ್ ಕೂಡ ಸ್ಥಳದಿಂದ ಪರಾರಿಯಾದರಂತೆ. ಅಲ್ಲದೆ, ಸ್ಮೃತಿ ಅವರೇ ತಪ್ಪು ಮಾಡಿದ್ದಾರೆ ಎಂದು ತೋರಿಸಲು ಮತ್ತು ಅವರ ಖ್ಯಾತಿಯನ್ನು ಕುಗ್ಗಿಸಲು ಪಲಾಶ್ ಅವರು ಪಿಆರ್ ಕಂಪನಿಗೆ ಭಾರಿ ಮೊತ್ತದ ಹಣವನ್ನು ಪಾವತಿಸಿದ್ದಾರೆ ಅಂತಾನೂ ವರದಿಯಾಗಿದೆ. ಆದರೆ, ಇದೆಲ್ಲ ಕೇವಲ ವದಂತಿ ಎನ್ನಲಾಗುತ್ತಿದೆ. ಈ ಸತ್ಯ ಸ್ಮೃತಿ ಮತ್ತು ಪಲಾಶ್​ ಕುಟುಂಬಕ್ಕೆ ಮಾತ್ರ ತಿಳಿದಿದೆ. ಮುಂದೆ ಯಾರಾದರೂ ಈ ಬಗ್ಗೆ ಮಾತನಾಡುತ್ತಾರಾ ಕಾದು ನೋಡಬೇಕಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net