ಹೌದು, ಸ್ಮೃತಿ ಮತ್ತು ಪಲಾಶ್ ತಮ್ಮ ಇನ್ಸ್ಟಾಗ್ರಾಂ ಬಯೋವನ್ನು ಅಪ್ಡೇಟ್ ಮಾಡಿದ್ದು, ಇಬ್ಬರು ನಜರ್ ಎಮೊಟಿಕಾನ್ ಅಥವಾ ದೃಷ್ಟಿ ಎಮೋಜಿಯನ್ನು ಹಾಕಿದ್ದಾರೆ. ಇಬ್ಬರು ಒಂದೇ ರೀತಿಯ ಎಮೋಜಿಯನ್ನು ಅಪ್ಡೇಟ್ ಮಾಡಿರುವುದರಿಂದ ಅವರಿಬ್ಬರ ನಡುವೆ ಏನೂ ಸಮಸ್ಯೆ ಇಲ್ಲ. ಇತ್ತೀಚೆಗೆ ಹರಿದಾಡಿದ್ದೆಲ್ಲ ಕೇವಲ ವದಂತಿಯಷ್ಟೇ ಎಂದು ಎಲ್ಲರು ಮಾತನಾಡಿಕೊಳ್ಳುತ್ತಿದ್ದಾರೆ. ಬಹುಶಃ ಇಬ್ಬರು ಮಾತನಾಡಿಕೊಂಡೇ ಈ ಎಮೋಜಿಯನ್ನು ಹಾಕಿದ್ದಾರೆಂದು ಚರ್ಚಿಸುತ್ತಿದ್ದಾರೆ. ಆದರೆ, ಕೆಲವರು ಇದು ಕಾಕತಾಳಿಯ ಇರಬಹುದು. ಏನೂ ಇಲ್ಲದಿದ್ದರೆ ಇಬ್ಬರು ಏಕೆ ಮೌನವಾಗಿದ್ದಾರೆ? ಇಬ್ಬರಲ್ಲಿ ಯಾರಾದರೂ ಒಬ್ಬರು ವದಂತಿಗಳಿಗೆ ಸ್ಪಷ್ಟನೆ ನೀಡಬಹುದಿತ್ತು. ಕೇವಲ ಪಲಾಶ್ ಕುಟುಂಬದವರು ಮಾತ್ರ ಹೇಳಿಕೆ ನೀಡುತ್ತಿದ್ದಾರೆ ಹೊರತು, ಸ್ಮೃತಿ ಕುಟುಂಬದಿಂದ ಯಾರೊಬ್ಬರು ಯಾವುದೇ ಹೇಳಿಕೆಗಳನ್ನು ನೀಡುತ್ತಿಲ್ಲ. ಕೆಲವೊಂದು ನಡೆಗಳನ್ನು ನೋಡಿದರೆ ಎರಡೂ ಕುಟುಂಬದಲ್ಲಿ ಏನೂ ಸರಿಯಿಲ್ಲ ಎಂಬ ಸಂಶಯ ಇಂದಿಗೂ ಜೀವಂತವಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.