ವಿಡಿಯೋ ನೋಡಿದ ಹಲವಾರು ವೀಕ್ಷಕರು ಸಾರಾ ಕೈಯಲ್ಲಿರುವುದನ್ನು ಬಿಯರ್ ಬಾಟಲಿ ಎಂದು ಹೇಳುತ್ತಿದ್ದಾರೆ. ಅಲ್ಲದೆ, ಸಚಿನ್ ತೆಂಡೂಲ್ಕರ್ ಅವರನ್ನು ಉಲ್ಲೇಖಿಸಿ ಸಾರಾರನ್ನು ಟೀಕಿಸುತ್ತಿದ್ದಾರೆ. ಸಚಿನ್ ಅವರು ತಮ್ಮ ವೃತ್ತಿಜೀವನದಲ್ಲಿ ಒಮ್ಮೆಯು ಮದ್ಯ ಅಥವಾ ತಂಬಾಕು ಉತ್ಪನ್ನಗಳನ್ನು ಪ್ರಚಾರ ಮಾಡಲಿಲ್ಲ. ಆದರೆ, ಸಾರಾ ಅವರು ಬೀದಿಗಳಲ್ಲಿ ಮದ್ಯದ ಬಾಟಲಿ ಹಿಡಿದು ತಿರುಗಾಡುತ್ತಿದ್ದಾರೆ. ಸಾರಾ ಅವರು ತಮ್ಮ ತಂದೆಯ ಹಾದಿಯನ್ನು ಅನುಸರಿಸಲಿ, ತಂದೆಯ ಗೌರವನ್ನು ಕಾಪಾಡಲಿ ಎಂದು ಬುದ್ಧಿಮಾತುಗಳನ್ನು ಹೇಳುತ್ತಿದ್ದಾರೆ.