ಆರ್ಸಿಬಿ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಗಾಯಗೊಂಡರು. ರೋಹಿತ್ ಅವರು ಮತ್ತೊಬ್ಬ ಆರಂಭಿಕ ಆಟಗಾರ ರಿಕಲ್ಟನ್ ಜೊತೆಗೆ ವೇಗವಾಗಿ ರನ್ ಗಳಿಸಲು ಪ್ರಯತ್ನಿಸಿದರು. ಆದಾಗ್ಯೂ, ಆರನೇ ಓವರ್ನಲ್ಲಿ, ತಂಡದ ಸ್ಕೋರ್ 57 ಆಗಿದ್ದಾಗ, ತೊಡೆಯ ಸ್ನಾಯುವಿನ ಗಾಯದಿಂದಾಗಿ ರೋಹಿತ್ (19) ನಿವೃತ್ತರಾದರು. ಅಲ್ಲಿಯವರೆಗೂ ಮುಂಬೈ ತಂಡ ಒಂದೇ ಒಂದು ವಿಕೆಟ್ ಕಳೆದುಕೊಂಡಿರಲಿಲ್ಲ. ಯಾವಾಗ ರೋಹಿತ್ ಪೆವಲಿಯನ್ ತೆರಳಿದರೋ ಅಲ್ಲಿಂದಾಚೆಗೆ ವಿಕೆಟ್ಗಳು ಬೀಳಲು ಶುರುವಾಯಿತು. ಈ ಮಧ್ಯೆ ಅಭಿಮಾನಿಗಳು ರೋಹಿತ್ ಶರ್ಮಾ ಮತ್ತೆ ಕ್ರೀಸ್ಗೆ ಬರುತ್ತಾರೆ ಎಂದು ನಿರೀಕ್ಷಿಸಿದ್ದರು. ಹೀಗಾಗಿ ರೋಹಿತ್ಗೆ ದೊಡ್ಡ ಗಾಯವಾಗಿದೆ ಎಂದು ಫ್ಯಾನ್ಸ್ ಭಾವಿಸಿದ್ದಾರೆ. ರೋಹಿತ್ಗೆ ಗಾಯವಾಗದೇ ಇದ್ದಿದ್ದರೆ ಮುಂಬೈಗೆ ಗೆಲ್ಲುವ ಚಾನ್ಸ್ ಇತ್ತು. ಆದರೆ, ಆರ್ಸಿಬಿ ಪಾಲಿಗೆ ರೋಹಿತ್ ಹೊರನಡೆದಿದ್ದು ಒಂದು ರೀತಿಯಲ್ಲಿ ವರವಾಯ್ತು. ಇನ್ನೂ ಮುಂಬರುವ ಪಂದ್ಯಗಳಲ್ಲಿ ರೋಹಿತ್ ಆಡುತ್ತಾರೋ ಅಥವಾ ಒಂದೆರಡು ಪಂದ್ಯಗಳಿಗೆ ವಿಶ್ರಾಂತಿ ಪಡೆಯುತ್ತಾರೋ ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ, (ಏಜೆನ್ಸೀಸ್).