ರಾಹುಲ್ ಚಾಹರ್ ವಿಚ್ಛೇದನ: ಪತ್ನಿಯಿಂದ ಬೇರೆಯಾದ ಟೀಮ್ ಇಂಡಿಯಾ ಸ್ಪಿನ್ನರ್; ಪೋಸ್ಟ್ ವೈರಲ್ | Rahul Chahar

ಪತ್ನಿ ಇಶಾನಿ ಜೋಹರ್ ಜತೆ ರಾಹುಲ್ ಚಾಹರ್, ರಾಹುಲ್ ಚಾಹರ್ ಸಾಮಾಜಿಕ ಮಾಧ್ಯಮ ಪೋಸ್ಟ್​
ಪತ್ನಿ ಇಶಾನಿ ಜೋಹರ್ ಜತೆ ರಾಹುಲ್ ಚಾಹರ್, ರಾಹುಲ್ ಚಾಹರ್ ಸಾಮಾಜಿಕ ಮಾಧ್ಯಮ ಪೋಸ್ಟ್​
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್ ಇಂಡಿಯಾ ಸ್ಪಿನ್ನರ್ ವಿಚ್ಛೇದನ
  • ಪತ್ನಿ ಇಶಾನಿ ಜೋಹರ್ ಇಂದ ದೂರವಾದ ರಾಹುಲ್ ಚಾಹರ್
  • ಸಾಮಾಜಿಕ ಮಾಧ್ಯದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸ್ಟಾರ್ ಸ್ಪಿನ್ನರ್​
ರಾಜಸ್ಥಾನ: 2026 ರ ಟಿ20 ವಿಶ್ವಕಪ್ ನಡುವೆ ಭಾರತೀಯ ತಂಡದಿಂದ ಒಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ರಾಹುಲ್ ಚಾಹರ್ (Rahul Chahar) ಕಾನೂನು ಪ್ರಕ್ರಿಯೆಯ ನಂತರ ತಮ್ಮ ಪತ್ನಿ ಇಶಾನಿ ಜೋಹರ್ ಅವರಿಂದ ವಿಚ್ಛೇದನ ಪಡೆದಿರುವ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ.
ಕಳೆದ 15 ತಿಂಗಳುಗಳಿಂದ ಈ ಸಮಸ್ಯೆಯಿಂದ ತಾನು ತೊಂದರೆಗೊಳಗಾಗಿದ್ದೆ, ತಾನು ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದರಿಂದ ತನಗೆ ಹೆಚ್ಚಿನ ವಿಷಯಗಳು ಅರ್ಥವಾಗುತ್ತಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ರಾಹುಲ್ ಚಾಹರ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್

ನಾನು ನನ್ನನ್ನು, ನನ್ನ ಮೌಲ್ಯವನ್ನು ಅಥವಾ ನಾನು ನಿಜವಾಗಿಯೂ ಬದುಕಲು ಬಯಸುವ ಜೀವನವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಮೊದಲೇ ನಾನು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದೆ ಎಂದು ರಾಹುಲ್ ಚಾಹರ್ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ನಂತರದ ವರ್ಷಗಳಲ್ಲಿ, ನಾನು ಎಂದಿಗೂ ನಿರೀಕ್ಷಿಸದ ಪಾಠಗಳನ್ನು ಕಲಿತಿದ್ದೇನೆ ಮತ್ತು ನ್ಯಾಯಾಲಯಗಳಲ್ಲಿ ಕಳೆದ ಕಳೆದ 15 ತಿಂಗಳುಗಳಲ್ಲಿ, ನಾನು ತಾಳ್ಮೆ ಮತ್ತು ಸತ್ಯದಿಂದ ದೊರೆಯುವ ಶಕ್ತಿಯನ್ನು ಗಳಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಜೀವನದ ಈ ಅಧ್ಯಾಯ ಮುಗಿದಿದೆ

ಇಂದು ನನ್ನ ಜೀವನದ ಆ ಅಧ್ಯಾಯ ಅಧಿಕೃತವಾಗಿ ಕೊನೆಗೊಂಡಿದೆ. ಕಾನೂನು ಪ್ರಕ್ರಿಯೆ ಪೂರ್ಣಗೊಂಡ ನಂತರ, ನನ್ನ ಒಪ್ಪಿಗೆಯೊಂದಿಗೆ ವಿಷಯವನ್ನು ಪರಿಹರಿಸಲಾಗಿದೆ. ಇದು ನನಗೆ ಬಹಳಷ್ಟು ವೆಚ್ಚದಾಯಕವಾದರೂ ನನ್ನ ಜೀವನದ ಈ ಭಾಗವು ಕೊನೆಗೊಂಡಿದೆ ಎಂದಿದ್ದಾರೆ.

ಕೆಲವು ಸಂಬಂಧಗಳು ಶಾಶ್ವತವಲ್ಲ

ಸಂಬಂಧದ ಬಗ್ಗೆ ಮಾತನಾಡುತ್ತಾ ರಾಹುಲ್, ನಾನು ಈ ಘಟನೆಯಿಂದ ಕೋಪ ಅಥವಾ ವಿಷಾದವನ್ನು ವ್ಯಕ್ತ ಪಡಿಸುತ್ತಿಲ್ಲ. ಬದಲಾಗಿ ಸ್ಪಷ್ಟತೆಯೊಂದಿಗೆ ಸಂಬಂಧವನ್ನು ಕೊನೊಗೊಳಿಸುತ್ತಿದ್ದೇನೆ.
ಕೆಲವು ಸಂಬಂಧಗಳು ಶಾಶ್ವತವಾಗಿ ಉಳಿಯಲು ಅಲ್ಲ, ಬದಲಾಗಿ ನಮ್ಮನ್ನು ಜಾಗೃತವಾಗಿಸಲು, ಪಾಠ ಕಲಿಸಲು ಮತ್ತು ಪರಿವರ್ತಿಸುವ ಉದ್ದೇಶವನ್ನು ಹೊಂದಿರುತ್ತವೆ ಎಂದಿದ್ದಾರೆ. ನಾನು ನನ್ನ ಮುಂದಿನ ಜೀವನವನ್ನು ಸ್ವಂತ ಅರಿವು ಮತ್ತು ಆತ್ಮವಿಶ್ವಾಸದಿಂದ ಮುನ್ನಡೆಸುತ್ತೇನೆ ಎಂದು ರಾಹುಲ್​ ಚಹಾರ್​ ಬರೆದುಕೊಂಡಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net