ಸ್ಮೃತಿಗೆ ಮೋಸ ಮಾಡಿದ್ರಾ ಪಲಾಶ್​? ಯಾರು ಆ ನಿಗೂಢ ಯುವತಿ? ಚಾಟಿಂಗ್ ಬಿಚ್ಚಿಟ್ಟ ರಹಸ್ಯವೇನು? Smriti Mandhana ​

ಟೀಮ್​ ಇಂಡಿಯಾದ ಆಟಗಾರ್ತಿ ಸ್ಮೃತಿ ಮಂಧಾನ
ಟೀಮ್​ ಇಂಡಿಯಾದ ಆಟಗಾರ್ತಿ ಸ್ಮೃತಿ ಮಂಧಾನ
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್​ ಇಂಡಿಯಾದ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ ಮದುವೆ ಮಂದೂಡಿಕೆ
  • ಮದುವೆ ಸಂಬಂಧಿಸಿದ ಪೋಸ್ಟ್​ಗಳನ್ನು ಡಿಲೀಟ್​ ಮಾಡಿದ ಸ್ಮೃತಿ ಮಂಧಾನ
  • ಡಿಲೀಟ್​ ಮಾಡಿದ್ದೇ ತಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ನಾನಾ ವದಂತಿ
  • ಪಲಾಶ್​ ಮುಚ್ಚಲ್​ ಸ್ಮೃತಿ ಅವರಿಗೆ ಮೋಸ ಮಾಡಿದ್ದಾರೆ ಎಂಬ ವದಂತಿ ವೇಗವಾಗಿ ಹರಿದಾಡುತ್ತಿದೆ
ಮುಂಬೈ: ಟೀಮ್​ ಇಂಡಿಯಾದ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ ( Smriti Mandhana ​) ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ಮದುವೆ ನವೆಂಬರ್ 23 ರಂದು ನಡೆಯಬೇಕಿತ್ತು. ಆದರೆ, ಅದೇ ದಿನ ಇದ್ದಕ್ಕಿದ್ದಂತೆ ಸ್ಮೃತಿ ಅವರ ತಂದೆ ಶ್ರೀನಿವಾಸ್​​ ಮಂಧಾನ ಅವರಿಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಹೊರಬಿತ್ತು. ಇದರಿಂದಾಗಿ ಮದುವೆಯನ್ನು ಮುಂದೂಡಲಾಗಿದೆ ಎಂಬ ವರದಿ ಇದೆ. ಇದಾದ ನಂತರ, ಪಲಾಶ್ ಅವರ ಆರೋಗ್ಯವೂ ಹದಗೆಟ್ಟಿತು ಮತ್ತು ಅವರನ್ನೂ ಆಸ್ಪತ್ರೆಗೆ ದಾಖಲಿಸಬೇಕಾಯಿತು. ಇದೀಗ ಮದುವೆ ಮುಂದೂಡಿದ ವಿಚಾರದಲ್ಲಿ ನಾನಾ ವದಂತಿಗಳು ಹರಡಲು ಶುರುವಾಗಿದೆ.
ಹೌದು, ಮದುವೆಯನ್ನು ಮುಂದೂಡಲಾಗಿದೆ ಎಂಬ ಸುದ್ದಿ ಹೊರ ಬಿದ್ದ ಬೆನ್ನಲ್ಲೇ ಸ್ಮೃತಿ ಮಂಧಾನ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಿಂದ ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್​ ಮಾಡಿದರು. ಅಲ್ಲದೆ, ಸ್ಮೃತಿ ಅವರ ಸಹ ಆಟಗಾರ್ತಿಯರಾದ ಜೆಮಿಮಾ ರೊಡ್ರಿಗಸ್ ಮತ್ತು ಶ್ರೇಯಾಂಕ ಪಾಟೀಲ್ ಕೂಡ ಮದುವೆಗೆ ಸಂಬಂಧಿಸಿದ ತಮ್ಮ ಪೋಸ್ಟ್‌ಗಳನ್ನು ಡಿಲೀಟ್​ ಮಾಡಿದ್ದಾರೆ. ಈ ಒಂದು ನಡೆಯಿಂದ ಸಾಮಾಜಿಕ ಜಾಲತಾಣದಲ್ಲಿ ವದಂತಿಗಳು ವೇಗವಾಗಿ ಹರಡುತ್ತಿವೆ. 
ಒಂದು ವರದಿಯ ಪ್ರಕಾರ, ಮದುವೆಗೂ ಮೊದಲೇ ಪಲಾಶ್ ಮುಚ್ಚಲ್ ಅವರು ಸ್ಮೃತಿ ಅವರಿಗೆ ಮೋಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ನೃತ್ಯ ಸಂಯೋಜಕಿಯೊಬ್ಬರು ಪಲಾಶ್​ ಮತ್ತು ಸ್ಮೃತಿ ಮದುವೆ ಸಮಾರಂಭಕ್ಕಾಗಿ ಡಾನ್ಸ್​ ತರಬೇತಿ ನೀಡುತ್ತಿದ್ದರು. ಆ ನೃತ್ಯ ಸಂಯೋಜಕಿ ಜತೆ ಪಲಾಶ್​ಗೆ ಅಫೇರ್​ ಇದೆ ಎನ್ನಲಾಗುತ್ತಿದೆ. ಇದರ ನಡುವೆ ಪಲಾಶ್ ಮತ್ತು ಆ ನಿಗೂಢ ಯುವತಿ ಚಾಟ್ ಮಾಡಿದ್ದಾರೆ ಎನ್ನಲಾದ ಸ್ಕ್ರೀನ್​ ಶಾಟ್​ಗಳನ್ನು ಸಹ ಜಾಲತಾಣದಲ್ಲಿ ಸೋರಿಕೆ ಮಾಡಲಾಗಿದೆ. 
ರೆಡ್ಡಿಟ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ವ್ಯಾಪಕವಾಗಿ ಹರಡಿರುವ ವರದಿಗಳ ಪ್ರಕಾರ, ಅಪರಿಚಿತ ಮಹಿಳೆಯೊಬ್ಬರು ಪಲಾಶ್ ಜೊತೆ ಚಾಟ್​ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ, ಸಾರ್ವಜನಿಕವಾಗಿಯೇ ತಮ್ಮ ಸ್ಕ್ರೀನ್‌ಶಾಟ್‌ಗಳನ್ನು ಬಿಡುಗಡೆ ಮಾಡಿದ್ದು, ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಪಲಾಶ್ ಅವರ ಸಹೋದರಿ ಹಾಗೂ ಗಾಯಕಿ ಪಲಾಕ್ ಮುಚ್ಚಲ್, ನವೆಂಬರ್ 23 ರಂದು ಸಾಂಗ್ಲಿಯಲ್ಲಿ ನಡೆಯಬೇಕಿದ್ದ ಮದುವೆ ನಿಗದಿಯಂತೆ ನಡೆಯುವುದಿಲ್ಲ ಮತ್ತು ಮದುವೆಯನ್ನು ಮುಂದೂಡಲಾಗಿದೆ ಎಂದು ದೃಢಪಡಿಸಿದ ಕೆಲವೇ ಸಮಯದ ಬಳಿಕ ಸ್ಕ್ರೀನ್‌ಶಾಟ್‌ಗಳು ಜಾಲತಾಣದಲ್ಲಿ ಕಾಣಿಸಿಕೊಂಡವು. 
ಆರಂಭದಲ್ಲಿ, ಸ್ಮೃತಿ ಅವರ ತಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವರದಿಯಿಂದಾಗಿ ಈ ಮದುವೆ ಮುಂದೂಡಿಕೆಯಾಗಿದೆ ಎಂದು ಹೇಳಲಾಗಿತ್ತು. ಆದರೆ, ನಂತರದಲ್ಲಿ ಪಲಾಶ್ ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ವರದಿ ಬಂದಾಗ ಮತ್ತಷ್ಟು ನಿಗೂಢತೆ ಹೆಚ್ಚಾಯಿತು. ಕೆಲವು ಪೋಸ್ಟ್‌ಗಳಲ್ಲಿ ಮೇರಿ ಡಿ'ಕೋಸ್ಟಾ ಎಂದು ಗುರುತಿಸಲ್ಪಟ್ಟ ಮಹಿಳೆ ಸ್ಕ್ರೀನ್​ ಶಾಟ್​ಗಳನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿವೆ. ಆ ಚಾಟ್​ನಲ್ಲಿ ಪಲಾಶ್ ಅವರು ನಿಗೂಢ ಯುವತಿಯ ಲುಕ್​ ಅನ್ನು ಹೊಗಳಿದ್ದಾರೆ ಮತ್ತು ಸ್ಮೃತಿ ಬಗ್ಗೆಯೂ ಚರ್ಚಿಸಿದ್ದಾರೆ. 
ಸ್ಪಾ ಭೇಟಿ, ಈಜು ಮತ್ತು ಮುಂಬೈನ ವರ್ಸೋವಾ ಬೀಚ್‌ನಲ್ಲಿ ಇಬ್ಬರು ಪರಸ್ಪರ ಭೇಟಿಯಾಗಿರುವ ಬಗ್ಗೆ ಚಾಟಿಂಗ್​ನಲ್ಲಿ ಉಲ್ಲೇಖವಾಗಿದೆ. ಯಾವಾಗ ಈ ಚಾಟಿಂಗ್​ ಸ್ಕ್ರೀನ್​ಶಾಟ್​ ವೈರಲ್​ ಆಯ್ತೋ ಅನೇಕರು ಪಲಾಶ್​ ವಿರುದ್ಧ ಮುಗಿಬಿದ್ದಿದ್ದಾರೆ. ಆತ ಓರ್ವ ಹೆಣ್ಣುಬಾಕ ಎನ್ನುತ್ತಿದ್ದಾರೆ. ಆದರೆ, ಇನ್ನು ಕೆಲವರು ಸಂಯಮ ಕಾಯ್ದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್​ಗಳಿಂದ ಒಂದು ನಿರ್ಧಾರಕ್ಕೆ ಬರಬೇಡಿ ಎನ್ನುತ್ತಿದ್ದಾರೆ.
ಅಂದಹಾಗೆ, ಈ ಚಾಟ್ ಯಾವಾಗ ನಡೆಯಿತು ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಈ ಚಾಟ್ ಹಾಗೂ ಕೇಳಿಬರುತ್ತಿರುವ ವದಂತಿಗಳು ನಿಜವೇ ಎಂಬುದರ ಕುರಿತು ಯಾವುದೇ ಅಧಿಕೃತ ದೃಢೀಕರಣವಿಲ್ಲ. ಸದ್ಯ ಆನ್‌ಲೈನ್‌ನಲ್ಲಿ ಹರಡುತ್ತಿರುವುದು ಕೇವಲ ಊಹಾಪೋಹಗಳಾಗಿವೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net