ಸದ್ಯ ಇಶಾನ್ ಅತ್ಯುತ್ತಮ ಡಿಫೆನ್ಸ್ ಹೊಂದಿದ್ದು, ಅತ್ಯಂತ ವೇಗವಾಗಿ ಬ್ಯಾಕ್ಫುಟ್ಗೆ ಹೋಗಿ ಶಾರ್ಟ್ ಪಿಚ್ ಎಸೆತಗಳನ್ನು ಸಿಕ್ಸರ್ಗಳಾಗಿ ಪರಿವರ್ತಿಸುತ್ತಿದ್ದಾರೆ, ಅಷ್ಟೇ ಅಲ್ಲದೆ, ಈ ಹಿಂದೆ ಅವರ ಬಳಿ ಇಲ್ಲದಿದ್ದ 'ಲಾಫ್ಟೆಡ್ ಎಕ್ಸ್ಟ್ರಾ-ಕವರ್ ಡ್ರೈವ್'ಗಳಂತಹ ಆಕರ್ಷಕ ಶಾಟ್ಗಳ ಮೇಲೂ ಈಗ ಅವರು ಸಂಪೂರ್ಣ ಹಿಡಿತ ಸಾಧಿಸಿದ್ದಾರೆ. ಇದೇ ಕಾರಣಕ್ಕೆ ಬೌಲರ್ಗಳಿಗೆ ಅವರನ್ನು ಕಟ್ಟಿಹಾಕುವುದು ತುಂಬಾ ಕಷ್ಟಕರವಾಗಿದೆ ಎಂದು ಗವಾಸ್ಕರ್ ವಿಶ್ಲೇಷಿಸಿದ್ದಾರೆ, (ಏಜೆನ್ಸೀಸ್).