ಮೈದಾನದಲ್ಲೇ ರಾಹುಲ್ ಆಸ್ಕರ್ ಲೆವೆಲ್ ಆಕ್ಟಿಂಗ್! ಮೂರ್ಖರಾದ ಅಫ್ಘಾನ್ ಆಟಗಾರರು, ವಿಡಿಯೋ ವೈರಲ್​...KL Rahul

ಮೈದಾನದಲ್ಲೇ ರಾಹುಲ್ ಆಸ್ಕರ್ ಲೆವೆಲ್ ಆಕ್ಟಿಂಗ್! ಮೂರ್ಖರಾದ ಅಫ್ಘಾನ್ ಆಟಗಾರರು, ವಿಡಿಯೋ ವೈರಲ್​...KL Rahul
ಮೈದಾನದಲ್ಲೇ ರಾಹುಲ್ ಆಸ್ಕರ್ ಲೆವೆಲ್ ಆಕ್ಟಿಂಗ್! ಮೂರ್ಖರಾದ ಅಫ್ಘಾನ್ ಆಟಗಾರರು, ವಿಡಿಯೋ ವೈರಲ್​...KL Rahul
Published on
KL Rahul : ನ್ಯೂ ಚಂಡೀಗಢ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಬೆಳಗಿನ ಅವಧಿಯು ಸಂಪೂರ್ಣವಾಗಿ ಅಫ್ಘಾನ್ ಆಟಗಾರರ ಹಿಡಿತದಲ್ಲಿ ಇರಬೇಕಿತ್ತು. ಆದರೆ, ಮೈದಾನದಲ್ಲಿ ಅವರು ಮಾಡಿದ ಸಾಲು ಸಾಲು ತಪ್ಪುಗಳು ಸಿಕ್ಕ ದೊಡ್ಡ ಅವಕಾಶವನ್ನು ಕೈಚೆಲ್ಲುವಂತೆ ಮಾಡಿದವು. ಇದರ ಲಾಭ ಪಡೆದ ಟೀಮ್​ ಇಂಡಿಯಾ ಮೊದಲ ದಿನದ ತಮ್ಮ ಮೊದಲ ಇನ್ನಿಂಗ್ಸ್​ನಲ್ಲಿ 8 ವಿಕೆಟ್​ ನಷ್ಟಕ್ಕೆ 564 ರನ್​ ಕಲೆಹಾಕಿತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಸಿಕ್ಕ ಉತ್ತಮ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದರೆ, ಹಿರಿಯ ಬ್ಯಾಟರ್ ಕೆ.ಎಲ್. ರಾಹುಲ್ 100 ರನ್​ಗಳ ಶತಕದೊಂದಿಗೆ ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡಿದರು.
ಅಫ್ಘಾನಿಸ್ತಾನದ ಬೌಲರ್ ಜಿಯಾವುರ್ ರೆಹಮಾನ್ ಎಸೆದ ಓವರ್‌ನಲ್ಲಿ, ಚೆಂಡು ಕೆ.ಎಲ್. ರಾಹುಲ್ ಅವರ ಬ್ಯಾಟ್‌ನ ಅಂಚಿಗೆ ತಗುಲಿ ನೇರವಾಗಿ ವಿಕೆಟ್ ಕೀಪರ್ ಕೈ ಸೇರಿತ್ತು. ಅದು ಸ್ಪಷ್ಟವಾದ ಎಡ್ಜ್ ಆಗಿತ್ತು ಎಂಬುದು ಟಿವಿ ರಿಪ್ಲೇಗಳಲ್ಲಿ ಅತ್ಯಂತ ಸ್ಪಷ್ಟವಾಗಿ ಕಂಡುಬಂದಿದ್ದರೂ, ಅಫ್ಘಾನ್ ಕೀಪರ್ ಅಫ್ಸರ್ ಝಜಾಯ್ ಆಗಲಿ ಅಥವಾ ಬೌಲರ್ ಆಗಲಿ ಔಟ್‌ಗಾಗಿ ಅಪೀಲ್ ಮಾಡಲೇ ಇಲ್ಲ. ಇದಕ್ಕೆ ಪ್ರಮುಖ ಕಾರಣ ಕೆ.ಎಲ್. ರಾಹುಲ್ ಸಮಯಪ್ರಜ್ಞೆ ಮತ್ತು ಅವರು ನೀಡಿದ ರಿಯಾಕ್ಷನ್!
ಹೌದು, ಚೆಂಡು ಬ್ಯಾಟ್‌ಗೆ ತಗುಲಿದ ತಕ್ಷಣ ರಾಹುಲ್, ತಮಗೇನೂ ತಿಳಿಯದವರಂತೆ ಹಾಗೂ ಚೆಂಡು ಬ್ಯಾಟ್‌ಗೆ ತಗುಲೇ ಇಲ್ಲ ಎಂಬಂತೆ ಅತ್ಯಂತ ಮುಗ್ಧವಾಗಿ ತಲೆಯಾಡಿಸಿದರು. ರಾಹುಲ್ ಅವರ ಈ ಅದ್ಭುತ ನಟನೆಯನ್ನು ನಂಬಿದ ಅಫ್ಘಾನಿಸ್ತಾನದ ನಾಯಕ ಮತ್ತು ವಿಕೆಟ್ ಕೀಪರ್ ಸಂಪೂರ್ಣವಾಗಿ ದಾರಿ ತಪ್ಪಿ, ಅಪೀಲ್ ಮಾಡುವ ಸುವರ್ಣ ಅವಕಾಶವನ್ನು ಕಳೆದುಕೊಂಡು ಮೂರ್ಖರಾದರು.
ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್, ಕೆ.ಎಲ್. ರಾಹುಲ್ ಅವರ ಈ ನಡೆಯನ್ನು ನೋಡಿ ಅತ್ಯಂತ ಹಾಸ್ಯಭರಿತವಾಗಿ ಕಾಮೆಂಟ್ ಮಾಡಿದ್ದಾರೆ. "ಇಲ್ಲಿ ರಾಹುಲ್ ಅದ್ಭುತವಾದ ಮೈಂಡ್ ಗೇಮ್ ಆಡಿದ್ದಾರೆ. ಅಫ್ಘಾನ್ ನಾಯಕ ಮತ್ತು ಕೀಪರ್ ಅವರ ಮುಖ ನೋಡಿದಾಗ, ತಮಗೇನೂ ಗೊತ್ತೇ ಇಲ್ಲ ಎಂಬಂತೆ ರಾಹುಲ್ ತಲೆಯಾಡಿಸಿದರು. ಎದುರಾಳಿಗಳು ಸಹ ಅದನ್ನು ನಿಜವೆಂದೇ ನಂಬಿಬಿಟ್ಟರು. ರಾಹುಲ್ ಅವರ ಈ ನಟನೆಗೆ ಖಂಡಿತವಾಗಿಯೂ ಆಸ್ಕರ್ ಪ್ರಶಸ್ತಿ ನೀಡಬೇಕು. ಹ್ಯಾಟ್ಸ್ ಆಫ್ ರಾಹುಲ್, ನಿಮಗಾಗಿ ಒಂದು ಆಸ್ಕರ್ ಕಾಯುತ್ತಿದೆ ಎಂದು ಸ್ವಾನ್ ತಮಾಷೆಯಾಗಿ ಹೇಳಿದ್ದಾರೆ. ಈ ಜೀವದಾನದ ಸುವರ್ಣ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ರಾಹುಲ್, 100 ರನ್​ಗಳನ್ನು ಪೂರೈಸಿದರು.
ಇನ್ನೂ ಪಂದ್ಯ ವಿಚಾರಕ್ಕೆ ಬರುವುದಾದರೆ, ಭಾರತ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ನಾಯಕ ಶುಭಮಾನ್ ಗಿಲ್ ಮತ್ತು ಹಿರಿಯ ಬ್ಯಾಟರ್ ಕೆ.ಎಲ್. ರಾಹುಲ್ ಅವರ ಆಕರ್ಷಕ ಶತಕಗಳ ನೆರವಿನಿಂದ 564/8 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಸಾಯಿ ಸುದರ್ಶನ್, ರಿಷಭ್ ಪಂತ್ ಮತ್ತು ವಾಷಿಂಗ್ಟನ್ ಸುಂದರ್ ಅರ್ಧಶತಕಗಳ ಕೊಡುಗೆ ನೀಡಿದರೆ, ಅಫ್ಘಾನಿಸ್ತಾನ ಪರ ಸಲೀಂ ಸಫಿ 6 ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿಕೊಂಡರು. ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನ ತಂಡ, ಭಾರತದ ಸ್ಪಿನ್ನರ್ ಮಾನವ್ ಸುತಾರ್ (3/21) ಅವರ ಮಾರಕ ದಾಳಿಗೆ ನಲುಗಿ 113 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಸದ್ಯ ಪ್ರವಾಸಿ ಅಫ್ಘಾನಿಸ್ತಾನ ತಂಡವು ಎರಡನೇ ದಿನದಾಟದಲ್ಲಿ ಭಾರತದ ಮೊದಲ ಇನ್ನಿಂಗ್ಸ್ ಮೊತ್ತಕ್ಕಿಂತ ಇನ್ನು 451 ರನ್‌ಗಳ ಭಾರಿ ಹಿನ್ನಡೆಯಲ್ಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net