ಆರ್ಸಿಬಿ ಪ್ರಕಾರ, ಕೆಎಸ್ಸಿಎ ಮುಂದೆ ಪ್ರಸ್ತಾಪ ಮಾಡಿರುವ AI ಸಿಸ್ಟಮ್, ಯಾವುದೇ ಹಿಂಸೆ, ಒಳನುಸುಳುವಿಕೆ ಮತ್ತು ಅನಧಿಕೃತ ಪ್ರವೇಶದಂತಹ ಘಟನೆಗಳನ್ನು ಪತ್ತೆಹಚ್ಚಲು ರಿಯಲ್ ಟೈಮ್ ವಿಡಿಯೋ ವಿಶ್ಲೇಷಣೆಯನ್ನು ನೀಡುತ್ತದೆ. ಇದರಿಂದ, ಸಂಭವನೀಯ ಅಪಘಾತವನ್ನು ಪತ್ತೆಹಚ್ಚಬಹುದು. ಅಲ್ಲದೆ, ಏನಾದರೂ ಆದಲ್ಲಿ ತನಿಖೆಗೂ ಸಹಕಾರಿಯಾಗಲಿದೆ. ಪಂದ್ಯಗಳ ಸಮಯದಲ್ಲಿ ಯಾವುದಾದರೂ ಒಂದು ನಿರ್ಧಾರ ತೆಗೆದುಕೊಳ್ಳಬೇಕಾದರೆ ಈ ತಂತ್ರಜ್ಞಾನದ ವಿಶ್ಲೇಷಣೆಯು ಕೂಡ ಸಹಾಯ ಮಾಡುತ್ತದೆ.