ಶುಕ್ರವಾರ ನಡೆದ ಪಂದ್ಯದಲ್ಲಿ ನಿಗದಿತ ಸಮಯದೊಳಗೆ ಓವರ್ಗಳನ್ನು ಪೂರ್ಣಗೊಳಿಸಲು ಪಂಜಾಬ್ ಕಿಂಗ್ಸ್ ವಿಫಲವಾಗಿತ್ತು. ಐಪಿಎಲ್ನ ಬಿಗಿ ನಿಯಮಗಳ ಪ್ರಕಾರ, ಪಂದ್ಯದ ನಿಗದಿತ ಸಮಯ ಮೀರಿ ಓವರ್ ಎಸೆದರೆ ನಾಯಕನಿಗೆ ಮತ್ತು ಇಡೀ ತಂಡಕ್ಕೆ ದಂಡ ವಿಧಿಸಲಾಗುತ್ತದೆ. ಪಂಜಾಬ್ ತಂಡ ಈ ಸೀಸನ್ನಲ್ಲಿ ಈಗಾಗಲೇ ಒಮ್ಮೆ ಇದೇ ತಪ್ಪು ಮಾಡಿದ್ದರಿಂದ, ಎರಡನೇ ಬಾರಿಗೆ ಅಯ್ಯರ್ ಅವರಿಗೆ ದಂಡದ ಮೊತ್ತವನ್ನು ದುಪ್ಪಟ್ಟುಗೊಳಿಸಲಾಗಿದೆ.