ಹರಿಣಗಳ ವಿರುದ್ಧ ಮಂಡಿಯೂರಿದ ಭಾರತ; ಹೀನಾಯ ಸೋಲಿನ ಬಗ್ಗೆ ಹೆಡ್​ ಕೋಚ್​ ಗೌತಿ ಹೇಳಿದ್ದೇನು..? India vs South Africa

ಹೆಡ್​ಕೋಚ್​ ಗೌತಮ್​ ಗಂಭೀರ್ ಮತ್ತು ಬುಮ್ರಾ, ತೆಂಬಾ ಬವುಮಾ Head coach Gautam Gambhir and Bumrah, Temba Bavuma
ಹೆಡ್​ಕೋಚ್​ ಗೌತಮ್​ ಗಂಭೀರ್ ಮತ್ತು ಬುಮ್ರಾ, ತೆಂಬಾ ಬವುಮಾ Head coach Gautam Gambhir and Bumrah, Temba Bavuma
Published on
ಕೋಲ್ಕತ: ದಕ್ಷಿಣ ಆಫ್ರಿಕಾ(India vs South Africa) ವಿರುದ್ಧದ ಮೊದಲ ಟೆಸ್ಟ್​ ಸೋತ ಬಳಿಕ ಪ್ರತಿಕ್ರಿಯಿಸಿರುವ ಭಾರತದ ಹೆಡ್​ಕೋಚ್​ ಗೌತಮ್​ ಗಂಭೀರ್​, ಈ ಸೋಲಿಗೆ ತಂಡದ ಸಂಪೂರ್ಣ ಕಳಪೆ ಬ್ಯಾಟಿಂಗ್​ ಪ್ರದರ್ಶನವೇ ಕಾರಣ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಹರಿಣಗಳ ಎದುರಿನ ಹೀನಾಯ ಸೋಲಿನ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೌತಿ, ಎರಡನೇ ಸೆಷನ್‌ನಲ್ಲಿ ಭಾರತದ ಬ್ಯಾಟಿಂಗ್​ ಬಗ್ಗೆ ಕೇಳಿದಾಗ, ಉತ್ತಮ ಜತೆಯಾಟ ನಿರ್ವಹಿಸುವಲ್ಲಿ ನಾವು ವಿಫಲವಾಗಿದ್ದೇವೆ. ಇದಕ್ಕೆ ಪ್ರಮುಖ ಕಾರಣ ನಾಯಕ ಶುಭಮನ್ ಗಿಲ್ ಅನುಪಸ್ಥಿತಿಯಿಂದ ತಂಡವು ಒಬ್ಬ ಆಟಗಾರನನ್ನು ಕಡಿಮೆ ಆಡಿಸಿದ್ದರಿಂದ ಬ್ಯಾಟ್ಸ್‌ಮನ್‌ಗಳ ಮೇಲೆ ಹೆಚ್ಚುವರಿ ಒತ್ತಡವಿತ್ತು ಎಂದು ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ಗೌತಿ, ನನ್ನ ಯುಗಕ್ಕೂ ಮೊದಲು, ಡಿಆರ್‌ಎಸ್ ವ್ಯವಸ್ಥೆ ಇರಲಿಲ್ಲ. ನಮ್ಮ ತಂಡವು ಯುವ ಆಟಗಾರರಿಂದ ತುಂಬಿದೆ. ಇವರಿಗೆ ಹೆಚ್ಚು ಬ್ಯಾಟಿಂಗ್ ಅನುಭವವಿಲ್ಲ. ಆದರೆ ಇವರಲ್ಲಿ ಕೌಶಲ್ಯವಿದೆ ಎಂದಿದ್ದಾರೆ. ಅಲ್ಲದೆ, ವಿಕೆಟ್ ಎಷ್ಟೇ ತಿರುವು ಪಡೆದರೂ, ಮೊದಲ 10-15 ನಿಮಿಷಗಳು ಕಷ್ಟಕರವಾಗುತ್ತದೆ. ಆದರೆ ನೀವು ಒತ್ತಡದಲ್ಲಿ ಆಡಲು ಕಲಿಯಬೇಕು. ಮೊದಲನೆಯದಾಗಿ, ಈ ವಿಕೆಟ್‌ನಲ್ಲಿ ಯಾವುದೇ ತಪ್ಪಿಲ್ಲ. ದಕ್ಷಿಣ ಅಫ್ರಿಕಾ ಟೆಂಬಾ ರನ್ ಗಳಿಸಿದರು, ನಮ್ಮ ಪರವಾಗಿ ಅಕ್ಷರ್ ರನ್ ಕಾಲೆ ಹಾಕಿದರು. ಪಿಚ್ ಕಷ್ಟಕರವಾಗಿತ್ತು ಎಂದು ನಾನು ಭಾವಿಸುವುದಿಲ್ಲ. ಇದು ನಿಮ್ಮ ತಂತ್ರ ಮತ್ತು ಮನೋಧರ್ಮದ ಪರೀಕ್ಷೆಯಾಗಿತ್ತು ಎಂದು ಹೇಳಿದ್ದಾರೆ.
ಪಂದ್ಯದಲ್ಲಿ ಸ್ಪಿನ್ನರ್‌ಗಳ ಪ್ರಾಬಲ್ಯದ ಬಗ್ಗೆ ಕೇಳಿದಾಗ, ಗಂಭೀರ್, ಹೆಚ್ಚಿನ ವಿಕೆಟ್‌ಗಳು ವೇಗದ ಬೌಲರ್‌ಗಳ ಪಾಲಾದವು. ಅದರೆ, ವಿಕೆಟ್ ಏನೇ ಇರಲಿ, 123 (124) ಗುರಿಯನ್ನು ಸಾಧಿಸಬಹುದು ಎಂದು ನಾನು ಇನ್ನೂ ನಂಬುತ್ತೇನೆ. ನೀವು ಧೈರ್ಯದಿಂದ ಆಡಿದರೆ ಮತ್ತು ನಿಮ್ಮ ರಕ್ಷಣೆ ಬಲವಾಗಿದ್ದರೆ, ನಿಮಗೆ ತಾಳ್ಮೆ ಇದ್ದರೆ, ನೀವು ಖಂಡಿತವಾಗಿಯೂ ರನ್ ಗಳಿಸಬಹುದು ಎಂದು ನಾನು ಭಾವಿಸಿದೆ ಎಂದು ಗೌತಿ ಸೋಲಿನ ಬಳಿಕ ತಿಳಿಸಿದ್ದಾರೆ.

ಭಾರತಕ್ಕೆ ಹೀನಾಯ ಸೋಲು

ಈಡನ್ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಶುಭಮಾನ್​ ಗಿಲ್​ ನೇತೃತ್ವದ ಟೀಮ್​ ಇಂಡಿಯಾ ( India vs South Africa) 30 ರನ್​ಗಳಿಂದ ಹೀನಾಯ ಸೋಲನ್ನು ಅನುಭವಿಸಿದೆ.
ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್​ನಲ್ಲಿ 159 ರನ್ ಗಳಿಸಿದರೆ, ಎರಡನೇ ಇನ್ನಿಂಗ್ಸ್​ನಲ್ಲಿ 153 ರನ್ ಗಳಿಸಿತು. ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 189 ರನ್ ಗಳಿಸಿದರೆ, ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 93 ರನ್​ಗೆ ಆಲೌಟ್​ ಆಯಿತು. ದಕ್ಷಿಣ ಆಫ್ರಿಕಾ ವಿರುದ್ಧ ಸುಲಭವಾಗಿ ಗೆಲ್ಲುತ್ತೇವೆ ಎಂದು ಭಾವಿಸಿದ ಭಾರತ, ಹೀನಾಯ ಸೋಲು ಅನುಭವಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net