ವಿಶ್ವ ಕ್ರಿಕೆಟ್‌ನಲ್ಲಿ ಮಿಂಚಿರುವ ಹಲವಾರು ತಾರೆಯರು, ಕಿರಿಯರ ವಿಶ್ವಕಪ್‌ನಲ್ಲೇ ಮೊದಲ ಬಾರಿ ಸದ್ದು ಮಾಡಿದ್ದರು. ಬ್ರಿಯಾನ್ ಲಾರಾ, ಸನತ್ ಜಯಸೂರ್ಯ, ಇಂಜಮಾಮ್ ಉಲ್ ಹಕ್, ಮೈಕ್ ಆಥರ್ಟನ್, ಕ್ರಿಸ್ ಕೇರ್ನ್ಸ್, ಯುವರಾಜ್ ಸಿಂಗ್, ಬ್ರೆಂಡನ್ ಮೆಕ್ಕಲಂ, ಮೈಕೆಲ್ ಕ್ಲಾರ್ಕ್, ಗ್ರೇಮ್ ಸ್ಮಿತ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಹಾಶಿಂ ಆಮ್ಲ, ಅಲಸ್ಟೈರ್ ಕುಕ್, ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಜೋ ರೂಟ್, ಸ್ಟೀವನ್ ಸ್ಮಿತ್, ಶುಭಮಾನ್ ಗಿಲ್ ಅಂಥವರಲ್ಲಿ ಪ್ರಮುಖರೆನಿಸಿದ್ದಾರೆ.