5 ಎಸೆತದಲ್ಲಿ 5 ವಿಕೆಟ್... 254 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು, ದಾಖಲೆ ಬರೆದ ಯುವ ಕ್ರಿಕೆಟಿಗ! Five wickets in five balls
5 ಎಸೆತದಲ್ಲಿ 5 ವಿಕೆಟ್... 254 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು, ದಾಖಲೆ ಬರೆದ ಯುವ ಕ್ರಿಕೆಟಿಗ! Five wickets in five balls
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನ್ಯೂಜಿಲೆಂಡ್ ತಂಡದ ಯುವ ಆಟಗಾರ ಬ್ರೆಟ್ ರಾಂಡಲ್ರಿಂದ ಕ್ರಿಕೆಟ್ ಇತಿಹಾಸದಲ್ಲೇ ಅಭೂತಪೂರ್ವ ಸಾಧನೆ
ದೇಶೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಸತತ ಐದು ಎಸೆತಗಳಲ್ಲಿ ಐದು ವಿಕೆಟ್ ಪಡೆದ ರಾಂಡಲ್
ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಇಂತಹ ಸಾಧನೆ ಮಾಡಿರುವುದು ಇದೇ ಮೊದಲು
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ತಂಡದ ಯುವ ಆಟಗಾರ ಬ್ರೆಟ್ ರಾಂಡಲ್ ಕ್ರಿಕೆಟ್ ಇತಿಹಾಸದಲ್ಲೇ ಅಭೂತಪೂರ್ವ ಸಾಧನೆ ಮಾಡಿದ್ದಾರೆ. 30 ವರ್ಷದ ರಾಂಡಲ್ 254 ವರ್ಷಗಳ ದೇಶೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಸತತ ಐದು ಎಸೆತಗಳಲ್ಲಿ ಐದು ವಿಕೆಟ್ಗಳನ್ನು ( Five wickets in five balls ) ಪಡೆಯುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ.
ಹೌದು, 1772ರಲ್ಲಿ ದೇಶೀಯ ಕ್ರಿಕೆಟ್ ಮೊದಲ ಬಾರಿಗೆ ದಾಖಲಾದ ಬಳಿಕ ಸುಮಾರು 254 ವರ್ಷಗಳಲ್ಲಿ ಬೌಲರ್ ಒಬ್ಬರು ಸತತ ಐದು ವಿಕೆಟ್ಗಳನ್ನು ಪಡೆದಿರುವುದು ಇದೇ ಮೊದಲು.
ತಮ್ಮ ಎರಡನೇ ಓವರ್ನ ಕೊನೆಯ ಎಸೆತದಲ್ಲಿ ಹೆನ್ರಿ ಕೂಪರ್ ಅವರನ್ನು ಔಟ್ ಮಾಡುವ ಮೂಲಕ ರಾಂಡಲ್ ಅವರು ತಮ್ಮ ವಿಕೆಟ್ ಪಡೆಯುವ ಸಾಹಸವನ್ನು ಆರಂಭಿಸಿದರು. ಮುಂದಿನ ಓವರ್ನ ಮೊದಲ ಎಸೆತದಲ್ಲಿ ಮಾಜಿ ನ್ಯೂಜಿಲೆಂಡ್ ಆಟಗಾರ ಜೀತ್ ರಾವಲ್ ಅವರನ್ನು ಔಟ್ ಮಾಡಿದರು. ಬಳಿಕ ಮುಂದಿನ ಮೂರು ಎಸೆತಗಳಲ್ಲಿ ಸತತ ವಿಕೆಟ್ ಪಡೆದರು. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಅಭೂತಪೂರ್ವ ಸಾಧನೆ ಮಾಡಿದರು.
ಐರಿಶ್ನ ಕ್ರಿಶ್ಚಿಯನ್ ಕ್ಲಾರ್ಕ್ ಅವರನ್ನು ಔಟ್ ಮಾಡುವ ಮೂಲಕ ರಾಂಡಲ್ ಅವರು ಈ ದಾಖಲೆಯನ್ನು ಬರೆದರು. ಅಲ್ಲದೆ, ತಮ್ಮ ಮುಂದಿನ ಓವರ್ನಲ್ಲಿ ಮತ್ತೆ ಎರಡು ವಿಕೆಟ್ ಪಡೆಯುವ ಮೂಲಕ ಒಟ್ಟು ಏಳು ವಿಕೆಟ್ ಪಡೆದರು.
ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ತಂಡ ನೀಡಿದ 373 ರನ್ಗಳ ಗುರಿಯನ್ನು ಬೆನ್ನತ್ತಲು ಬ್ಯಾಟಿಂಗ್ಗೆ ಇಳಿದ ನಾರ್ದರ್ನ್ ಡಿಸ್ಟ್ರಿಕ್ಟ್ಸ್ ಕೇವಲ 82 ರನ್ಗಳಿಗೆ ಆಲೌಟ್ ಆಯಿತು. ತಮ್ಮ ಒಂಬತ್ತು ವರ್ಷಗಳ ವೃತ್ತಿಜೀವನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ರಾಂಡಾಲ್, ಕೇವಲ 25 ರನ್ಗಳಿಗೆ ಏಳು ವಿಕೆಟ್ ಕಬಳಿಸಿದರು.
ಕಳೆದ ವರ್ಷ ದೇಶೀಯ ಟಿ-20 ಪಂದ್ಯದಲ್ಲಿ ಐರ್ಲೆಂಡ್ನ ಕರ್ಟಿಸ್ ಕ್ಯಾಂಪರ್ ಐದು ಎಸೆತಗಳಲ್ಲಿ ಐದು ವಿಕೆಟ್ ಕಬಳಿಸಿದರು. ಆದರೆ, ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಇಂತಹ ಸಾಧನೆ ಮಾಡಿರುವುದು ಇದೇ ಮೊದಲು, (ಏಜೆನ್ಸೀಸ್).