ಸೆಮೀಸ್​ ಲಗ್ಗೆ ಇಟ್ಟ ಭಾರತ... ಆಡಿದ ಅದೊಂದು ಮಾತಿನಿಂದ ಮಾಜಿ ಪಾಕ್​ ಆಟಗಾರನಿಗೆ ಭಾರಿ ಮುಖಭಂಗ! Team India

ಆಡಿದ ಅದೊಂದು ಮಾತಿನಿಂದ ಮಾಜಿ ಪಾಕ್​ ಆಟಗಾರನಿಗೆ ಭಾರಿ ಮುಖಭಂಗ! Team India
ಆಡಿದ ಅದೊಂದು ಮಾತಿನಿಂದ ಮಾಜಿ ಪಾಕ್​ ಆಟಗಾರನಿಗೆ ಭಾರಿ ಮುಖಭಂಗ! Team India
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್​ ಇಂಡಿಯಾ, ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಟಿ20 ವಿಶ್ವಕಪ್ ಸೆಮಿಫೈನಲ್​ ತಲುಪಿದೆ
  • ಸೂಪರ್​ 8 ಕಾಳಗದಲ್ಲಿ ವಿಂಡೀಸ್​ ಪಡೆಯನ್ನು ಭಾರತ ಧೂಳೀಪಟ ಮಾಡಿದೆ
  • ಪಾಕಿಸ್ತಾನದ ಮಾಜಿ ಆಟಗಾರನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದ್ದಾನೆ
Team India : ಟೀಮ್​ ಇಂಡಿಯಾ, ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಟಿ20 ವಿಶ್ವಕಪ್ ಸೆಮಿಫೈನಲ್​ ತಲುಪಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದ್ದಾನೆ. ಏಕೆ ಅಂತೀರಾ? ಹಾಗಾದರೆ ಈ ಸ್ಟೋರಿ ಓದಿ...
ಭಾನುವಾರ (ಮಾರ್ಚ್​ 02) ಭಾರತ ತಂಡ, ವೆಸ್ಟ್ ಇಂಡೀಸ್ ತಂಡವನ್ನು 5 ವಿಕೆಟ್​ಗಳಿಂದ ಮಣಿಸಿ ಸೆಮಿಫೈನಲ್​ ಹಂತಕ್ಕೆ ಲಗ್ಗೆ ಇಟ್ಟಿತು. ಈ ಪಂದ್ಯದ ನಂತರ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಸೋಷಿಯಲ್​ ಮೀಡಿಯಾ ತುಂಬೆಲ್ಲಾ ಟ್ರೋಲ್​ಗೆ ಗುರಿಯಾಗುತ್ತಿದ್ದಾರೆ. 
ಹೌದು, ಭಾರತ ಸೆಮಿಫೈನಲ್ ತಲುಪುವುದಿಲ್ಲ ಎಂದು ಅಮೀರ್ ಈ ಹಿಂದೆ ಭವಿಷ್ಯ ನುಡಿದಿದ್ದರು ಮತ್ತು ಪಂದ್ಯಕ್ಕೂ ಮುನ್ನವೇ, ಭಾರತ ವೆಸ್ಟ್ ಇಂಡೀಸ್ ವಿರುದ್ಧ ಸೋಲುತ್ತದೆ ಎಂದಿದ್ದರು. ಆದರೆ, ಸೂಪರ್​ 8 ಕಾಳಗದಲ್ಲಿ ವಿಂಡೀಸ್​ ಪಡೆಯನ್ನು ಭಾರತ ಧೂಳೀಪಟ ಮಾಡಿದೆ. ಭಾರತ ತಂಡ ವೆಸ್ಟ್ ಇಂಡೀಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದೆ. 
ಕೆರಿಬಿಯನ್ನರು ನೀಡಿದ್ದ 196 ರನ್‌ಗಳ ಬೃಹತ್​ ಗುರಿಯನ್ನು ಬೆನ್ನಟ್ಟಿದ ಭಾರತ, ಆರಂಭಿಕ ಹಂತದಲ್ಲಿ ನಿರ್ಣಾಯಕ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಮಯದಲ್ಲಿ ತಂಡಕ್ಕೆ ಆಸರೆಯಾಗಿದ್ದು ವಿಕೆಟ್​ ಕೀಪರ್​ ಹಾಗೂ ಬ್ಯಾಟ್ಸ್​ಮನ್​ ಸಂಜು ಸ್ಯಾಮ್ಸನ್. ಕೇವಲ 50 ಎಸೆತಗಳಲ್ಲಿ ಅಜೇಯ 97 ರನ್ ಗಳಿಸಿ ತಮ್ಮ ಅದ್ಭುತ ಆಟದ ಮೂಲಕ ಭಾರತವನ್ನು ಸೆಮಿಫೈನಲ್‌ಗೆ ಕೊಂಡೊಯ್ದರು.
ಭಾರತದ ತಂಡದ ಈ ವೀರೋಚಿತ ಪ್ರದರ್ಶನದಿಂದ ಅಮೀರ್ ನುಡಿದಿದ್ದ ಭವಿಷ್ಯವಾಣಿ ಇದೀಗ ಸುಳ್ಳಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನದ ಮಾಜಿ ವೇಗಿ ಅಮೀರ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಜಿಯೋ ನ್ಯೂಸ್‌ನಲ್ಲಿ ನಡೆದ 'ಹಾರ್ನಾ ಮನ ಹೈ' ಕಾರ್ಯಕ್ರಮದ ಚರ್ಚೆಯ ಸಂದರ್ಭದಲ್ಲಿ, ಪಾಕಿಸ್ತಾನದ ಸೆಮಿಫೈನಲ್‌ ಅರ್ಹತೆಯ ಬಗ್ಗೆ ಅಮೀರ್​ನ ಪ್ರಶ್ನಿಸಿದಾಗ, "ದೇಖೋ, ಪಾಕಿಸ್ತಾನ ಕರೇ ನಾ ಕರೇ, ಇಂಡಿಯಾ ನಾ (ಪಾಕಿಸ್ತಾನವು ಸೆಮಿಫೈನಲ್​ ತಲುದಿದ್ದರೂ ಪರವಾಗಿಲ್ಲ, ಆದರೆ ಭಾರತ ಮಾತ್ರ ಸೆಮಿಫೈನಲ್​ ತಲುಪುವುದಿಲ್ಲ)" ಎಂದಿದ್ದರು. ಹಾಗಾಗಿ ಅವರ ವಿರುದ್ಧ ಈಗ ಟ್ರೋಲ್​ ಮತ್ತು ವಿರೋಧಗಳು ವ್ಯಕ್ತವಾಗುತ್ತಿವೆ.
ಅಚ್ಚರಿ ಎಂದರೆ, ಭಾರತ ತಂಡವು ತಮ್ಮ ಮೊದಲ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲುತ್ತದೆ ಎಂದು ಅಮೀರ್ ಹೇಳಿದ್ದರು. ಅವರ ಹೇಳಿಕೆಯಂತೆ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಸೋಲನ್ನು ಅನುಭವಿಸಿತ್ತು. ಆದರೆ, ಇದೀಗ ಅಮೀರ್​ ಅವರ ಭವಿಷ್ಯವಾಣಿ ಸುಳ್ಳಾಗಿದೆ. ಅವರು ಆಡಿದ ಈ ಒಂದು ಮಾತಿನಿಂದ ಇದೀಗ ಭಾರಿ ಮುಖಭಂಗಕ್ಕೆ ಗುರಿಯಾಗಿದ್ದಾರೆ.

ಭಾರತದ ಮುಂದಿರುವ ಗುರಿ

ಸೆಮೀಸ್​ ತಲುಪಿರುವ ಭಾರತ ಮಾರ್ಚ್ 5 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದು, ಫೈನಲ್​ ತಲುಪಿ ಮೂರನೇ ಬಾರಿಗೆ ವಿಶ್ವಕಪ್​ ಗೆಲ್ಲುವ ತವಕದಲ್ಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net