ಹಣ, ಖ್ಯಾತಿ ಸಿಕ್ಕರೆ ದೇವರ ಅನುಗ್ರಹ ಅಂದುಕೊಳ್ಳಬೇಡಿ: ವಿರಾಟ್-ಅನುಷ್ಕಾಗೆ ಪ್ರೇಮಾನಂದ ಮಹಾರಾಜರ ಜೀವನ ಪಾಠ | Virat Anushka

ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಮತ್ತು ಪ್ರೇಮಾನಂದ ಮಹಾರಾಜ್​
ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಮತ್ತು ಪ್ರೇಮಾನಂದ ಮಹಾರಾಜ್​
Published on

ಪ್ರಮುಖ ಮುಖ್ಯಾಂಶಗಳು

  • ವೃಂದಾವನಕ್ಕೆ ತೆರಳಿದ್ದ ವಿರಾಟ್​ ಅನುಷ್ಕಾ ಜೋಡಿ
  • ಕೇವಲ ಸಂಪತ್ತು ಮತ್ತು ಖ್ಯಾತಿ ದೇವನ ಕೃಪೆಯಲ್ಲ : ಪ್ರೇಮಾನಂದ ಮಹಾರಾಜ್​
  • ಜೀವನದಲ್ಲಿ ವಿರೋಧವನ್ನು ಎದುರಿಸುವ ಶಕ್ತಿ ಬೆಳೆಸಿಕೊಳ್ಳಿ
ಉತ್ತರಪ್ರದೇಶ: ಭಾರತದ ಸ್ಟಾರ್​ ಕ್ರಿಕೆಟ್​ ಆಟಗಾರ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ (Virat Anushka) ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜರ ಭಕ್ತರೆನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ ಇದೀಗ ಈ ದಂಪತಿಗಳಿಗೆ ಪ್ರೇಮಾನಂದ ಗುರುಗಳು ನೀಡಿರುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.

ವಿಡಿಯೋದಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿರುವ ವಿಡಿಯೋನಲ್ಲಿ ವಿರಾಟ್​ ಮತ್ತು ಅನುಷ್ಕಾ, ಪ್ರೇಮಾನಂದ ಮಹಾರಾಜರ ಮುಂದೆ ಕುಳಿತುಕೊಂಡಿದ್ದು, ಗುರುಗಳು ಜೀವನದಲ್ಲಿ ಪ್ರಸನ್ನರಾಗಿದ್ದಿರಾ? ಎಂದು ಕೇಳುತ್ತಾರೆ. ಈ ಮಾತಿಗೆ ಇಬ್ಬರೂ ಸಂತೋಷದಿಂದ ಹು.. ಎಂದು ಹೇಳಿದಾಗ, ಕೇವಲ ಆಸ್ತಿ ಮತ್ತು ಖ್ಯಾತಿ ದೊರೆತರೆ ಪರಮಾತ್ಮನ ಕೃಪೆ ನಿಮ್ಮ ಮೇಲಿದೆ ಎಂದಲ್ಲ, ದೇವನ ಅನುಗ್ರಹ ಎನ್ನುವುದು ನಿಮ್ಮ ಚಿಂತನೆ ಮತ್ತು ಮಾಡುವ ಕೆಲಸದಲ್ಲಿ ಇರುತ್ತದೆ ಎಂದು ಪ್ರೇಮಾನಂದರು ಹೇಳಿದ್ದಾರೆ.
ಕೇವಲ ಸಂಪತ್ತನ್ನು ಗಳಿಸುವುದು ಭಗವಂತನ ಆಶೀರ್ವಾದವಲ್ಲ, ಪರಮ ಪಾಪಿ ಕೂಡ ಈ ಭೌತಿಕ ಯಶಸ್ಸನ್ನು ಗಳಿಸುತ್ತಾನೆ. ಹಾಗೆಯೇ ಖ್ಯಾತಿ ಮತ್ತು ಹಣವನ್ನು ಸಹ ಯಾರು ಬೇಕಾದರೂ ಗಳಿಸುತ್ತಾರೆ, ಇದೆಲ್ಲಾ ದೇವರ ಅನುಗ್ರಹವಲ್ಲ, ದೇವರ ಅನುಗ್ರಹ ಎನ್ನವುದು ಆಂತರಿಕವಾಗಿರುತ್ತದೆ, ಮಾಡುವ ಕೆಲಸದಲ್ಲಿ ಅದು ಪ್ರತಿ ಫಲಿಸುತ್ತದೆ ಎಂದು ಹೇಳಿದ್ದಾರೆ.

ವಿರೋಧವನ್ನು ಎದುರಿಸುವ ಶಕ್ತಿ ಬೆಳೆಸಿಕೊಳ್ಳಿ

ಜೀವನದಲ್ಲಿ ಎದುರಾಗುವ ಸವಾಲುಗಳು ಆಧ್ಯಾತ್ಮಿಕತೆ ವೃದ್ಧಿಸಲು ಸಹಾಯವಾಗುತ್ತದೆ ಎಂದ ಮಹಾರಾಜರು, ನಿಮಗೆ ಮತ್ತು ನಿಮ್ಮ ಕೆಲಸಗಳಿಗೆ ಪ್ರತಿರೋಧ ಎದುರಾಗುತ್ತಿದೆ ಎಂದಾದರೆ, ಖುಷಿಪಡಿ ಏಕೆಂದರೆ ಈಗ ನಿಮಗೆ ದೇವರ ಅನುಗ್ರಹ ದೊರೆಯುತ್ತಿದೆ ಎಂದು ಖಾತರಿಯಾಗುತ್ತದೆ. ಕಷ್ಟದ ಹಾದಿಯಲ್ಲಿ ನಡೆದರೆ ಮಾತ್ರ ಯಶಸ್ವಿ ವ್ಯಕ್ತಿಯಾಗಲು ಸಾಧ್ಯ ಎಂದು ಅವರು ಹೇಳಿದ್ದಾರೆ. ಪ್ರವಚನದ ಕೊನೆಯಲ್ಲಿ ಪ್ರೇಮಾನಂದರು, ನಿಮ್ಮನ್ನು ಸುಧಾರಿಸಿಕೊಳ್ಳಿ, ನಿಮ್ಮ ಜೀವನ ತಾನಾಗಿಯೇ ಸತ್ಯದ ಮಾರ್ಗದಲ್ಲಿ ನಡೆಯಲಾರಂಭಿಸುತ್ತದೆ ಎಂದು ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರಿಗೆ ಹೇಳಿದ್ದಾರೆ.

ಮುಂಜಾನೆ ದರ್ಶನಕ್ಕೆ ಬಂದಿದ್ದ ದಂಪತಿ

ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇವರು ಪ್ರೇಮಾನಂದ ಮಹಾರಾಜರ ಮಹಾನ್​ ಭಕ್ತರಾಗಿದ್ದು, ಗುರುವಾರ ಬೆಳಿಗ್ಗೆ ಸುಮಾರು 5.30 ಕ್ಕೆ ಆಶ್ರಮಕ್ಕೆ ಆಗಮಿಸಿದ್ದರು. ಪ್ರೇಮಾನಂದರ ಕೇಲಿ ಕುಂಜ್​ ಆಶ್ರಮದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚಿನ ಕಾಲ ಧಾರ್ಮಿಕ ಕಾರ್ಯ ಮತ್ತು ಪ್ರಾರ್ಥನೆಯಲ್ಲಿ ನಿರತರಾದ ದಂಪತಿಗಳು, ಗುರುಗಳ ಆಶೀರ್ವಚನ ಪಡೆದು ಹಿಂದಿರುಗಿದರು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net