ಪಾಕಿಸ್ತಾನ: ಪ್ರಸ್ತುತ ಟೀಮ್ ಇಂಡಿಯಾದಲ್ಲಿ ವಿನಾಶಕಾರಿ ಬ್ಯಾಟ್ಸ್ಮನ್ ಯಾರೆಂದು ಪ್ರಶ್ನೆ ಮಾಡಿದರೆ ಥಟ್ಟನೆ ನೆನಪಿಗೆ ಬರುವ ಉತ್ತರವೆಂದರೆ ಅಭಿಷೇಕ್ ಶರ್ಮ. ತಮ್ಮ ವಿಧ್ವಂಸಕ ಬ್ಯಾಟಿಂಗ್ನಿಂದಾಗಿ ಎದುರಾಳಿ ಬೌಲರ್ಗಳ ಎದೆಯಲ್ಲಿ ನಡುಕು ಹುಟ್ಟಿಸಿರುವ ಅಭಿಷೇಕ್, ಪ್ರಸ್ತುತ ಭಾರತದ ಟಿ20 ಸ್ಪೆಷಲಿಸ್ಟ್. ಮೈದಾನಕ್ಕೆ ಇಳಿದು ಕ್ರೀಸ್ನಲ್ಲಿ ನಿಂತರೆ ಮೊದಲ ಎಸೆತದಿಂದಲೇ ಅಬ್ಬರಿಸಿ, ಬೊಬ್ಬರಿಯುವ ಅಭಿಷೇಕ್, ಅನೇಕ ದಾಖಲೆಗಳನ್ನು ತಮ್ಮ ಬತ್ತಳಿಗೆ ಸೇರಿಸಿಕೊಳ್ಳುತ್ತಿದ್ದಾರೆ. ಈ ಅಭಿಷೇಕ್, ಮಾಜಿ ಸ್ಫೋಟಕ ಆಟಗಾರ ಯುವರಾಜ್ ಸಿಂಗ್ ಅವರ ಶಿಷ್ಯ ಎಂಬುದು ಗಮನಾರ್ಹ ಸಂಗತಿ. ಅಷ್ಟಕ್ಕೂ ಈಗ್ಯಾಕೆ ಅಭಿಷೇಕ್ ಶರ್ಮಾ ವಿಚಾರ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೆ ಉತ್ತರವೂ ಇದೆ. ಪಾಕಿಸ್ತಾನದವರಿಗೆ ( Pakistan ) ಅಭಿಷೇಕ್ ಶರ್ಮ ಹೆಸರು ಇದೀಗ ದುಸ್ವಪ್ನವಾಗಿ ಕಾಡುತ್ತಿದೆ.