ಆರ್ಸಿಬಿ ಮೂಲಗಳ ಪ್ರಕಾರ, ಅನುಷ್ಕಾ ಶರ್ಮಾ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಶೇ. 3 ರಷ್ಟು ಷೇರನ್ನು ಖರೀದಿ ಮಾಡಲು ಆಸಕ್ತಿ ತೋರಿದ್ದಾರೆ ಎನ್ನಲಾಗುತ್ತಿದೆ. ಶೇ. 3 ರಷ್ಟು ಅಂದರೆ ಬರೋಬ್ಬರಿ 400 ಕೋಟಿ ರೂ. ಬಂಡವಾಳ ಹೂಡಲು ಅನುಷ್ಕಾ ಶರ್ಮಾ ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ. ವಿರಾಟ್ ಕೊಹ್ಲಿ ಅವರು ಈಗಾಗಲೇ ಆರ್ಸಿಬಿಯ ಪ್ರಮುಖ ಆಟಗಾರರಾಗಿದ್ದಾರೆ. ಇನ್ನೊಂದೆಡೆ, ಅವರ ಪತ್ನಿ ಅನುಷ್ಕಾ, ಮೈದಾನದಿಂದಾಚೆಗೆ ಆರ್ಸಿಬಿ ಪಾಲನ್ನು ಹೊಂದುವ ಮೂಲಕ ಆರ್ಸಿಬಿ ತಂಡದ ಜತೆ ಹೊಸ ಜರ್ನಿ ಆರಂಭಿಸಲು ಆಸಕ್ತಿ ಹೊಂದಿದ್ದಾರೆ ಎಂಬ ವರದಿ ಇದೆ. ಒಂದು ವೇಳೆ ಇದು ಸಂಭವಿಸಿದ್ದಲ್ಲಿ, ವಿರಾಟ್ ಮತ್ತು ಅನುಷ್ಕಾ ಭಾರತದ ಅತ್ಯಂತ ಶಕ್ತಿಶಾಲಿ ಕ್ರೀಡಾ ಜೋಡಿಯಾಗಿ ಹೊರಹೊಮ್ಮಲಿದ್ದಾರೆ.