ಅನಾರೋಗ್ಯದಿಂದಾಗಿ ತೂಕ ಕಳೆದುಕೊಂಡ ಅಭಿ ಪಾಕ್​ ವಿರುದ್ಧ ಆಡ್ತಾರಾ? ಸ್ಫೋಟಕ ಆಟಗಾರ ಹೇಳಿದ್ದೇನು? Abhishek Sharma

ಪಾಕಿಸ್ತಾನ​ ವಿರುದ್ಧ ಆಡ್ತಾರಾ ಅಭಿಷೇಕ್​ ಶರ್ಮಾ? (Abhishek Sharma )
ಪಾಕಿಸ್ತಾನ​ ವಿರುದ್ಧ ಆಡ್ತಾರಾ ಅಭಿಷೇಕ್​ ಶರ್ಮಾ? (Abhishek Sharma )
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ
  • ಹೊಟ್ಟೆ ನೋವಿನಿಂದಾಗಿ ಗುರುವಾರ (ಫೆ.12) ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಆಡಲಿಲ್ಲ
  • ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್​ ಆಡುತ್ತಾರೋ? ಇಲ್ಲವೋ? ಎಂಬ ಅನುಮಾನ ಇದೆ
  • ನಾನೀಗ ಚೆನ್ನಾಗಿದ್ದೇನೆ ಆದರೆ, ಒಂದಿಷ್ಟು ಕೆಜಿ ತೂಕ ಇಳಿದಿದೆ ಎಂದು ಹೇಳಿದ್ದಾರೆ ಅಭಿಷೇಕ್​ ಶರ್ಮ
Abhishek Sharma : ಟೀಮ್ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹೊಟ್ಟೆ ನೋವಿನಿಂದಾಗಿ ಗುರುವಾರ (ಫೆ.12) ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಆಡಲಿಲ್ಲ. ಭಾನುವಾರ (ಫೆ. 15) ಕೊಲಂಬೊದಲ್ಲಿ ನಡೆಯಲಿರುವ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್​ ಆಡುತ್ತಾರೋ? ಇಲ್ಲವೋ? ಎಂಬ ಅನುಮಾನ ಮೂಡಿದೆ.
ಇದೇ ಸಂದರ್ಭದಲ್ಲಿ, ವೇಗಿ ಅರ್ಷದೀಪ್​ ಸಿಂಗ್ ಅವರ ವ್ಲಾಗ್‌ನಲ್ಲಿ ಕಾಣಿಸಿಕೊಂಡ ಅಭಿಷೇಕ್​, ಅನಾರೋಗ್ಯದಿಂದ ಚೇತರಿಸಿಕೊಂಡ ನಂತರವೂ ಶೆ. 100 ರಷ್ಟು ಫಿಟ್​ನೆಸ್​ ಸಾಧಿಸಿಲ್ಲ ಎಂದಿದ್ದಾರೆ. ನಾನೀಗ ಚೆನ್ನಾಗಿದ್ದೇನೆ. ಆದರೆ, ಒಂದಿಷ್ಟು ಕೆಜಿ ತೂಕ ಇಳಿದಿದೆ ಎಂದು ಹೇಳುತ್ತಾರೆ. ತಾವು ಕಟ್ಟುನಿಟ್ಟಿನ ಆಹಾರ ಪದ್ಧತಿ ಅನುಸರಿಸುತ್ತಿರುವಾಗಿ ಅಭಿಷೇಕ್​ ತಿಳಿಸಿದ್ದಾರೆ. ಆದರೆ, ಪಾಕ್​ ವಿರುದ್ಧ ಆಡುತ್ತಾರೋ? ಇಲ್ಲವೋ? ಎಂಬ ಅನುಮಾನ ಇನ್ನೂ ಹಾಗೇ ಇದೆ.
ಪಾಕ್​ ವಿರುದ್ಧ ಆಡ್ತಾರಾ ಅಭಿ?
ಅಮೆರಿಕ ವಿರುದ್ಧದ ಪಂದ್ಯದ ನಂತರ ಅಭಿಷೇಕ್ ಶರ್ಮ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಅವರನ್ನು ಡಿಸ್ಚಾರ್ಜ್ ಕೂಡ ಮಾಡಲಾಗಿದೆ. ಚೇತರಿಸಿಕೊಂಡ ನಂತರವೂ ಅಭಿ, ಪೂರ್ಣ ಪ್ರಮಾಣದ ಫಿಟ್ನೆಸ್ ಸಾಧಿಸಿಲ್ಲ. ಗುರುವಾರ ನಮೀಬಿಯಾ ವಿರುದ್ಧದ ಪಂದ್ಯದ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಕೂಡ ಇದೇ ವಿಷಯವನ್ನು ಬಹಿರಂಗಪಡಿಸಿದರು. ಅಭಿ ಅವರು ಒಂದು ಅಥವಾ ಎರಡು ಪಂದ್ಯಗಳನ್ನು ತಪ್ಪಿಸಿಕೊಳ್ಳಬಹುದು ಎಂದರು.

ಅಭ್ಯಾಸದಲ್ಲಿ ನಿರತ

ಅಭಿಷೇಕ್ ಶರ್ಮ ಇದೀಗ ಚೆನ್ನಾಗಿದ್ದಾರೆ ಎಂದು ಟೀಮ್ ಇಂಡಿಯಾ ಸ್ಪಿನ್ನರ್ ವರುಣ್ ಚಕ್ರವರ್ತಿ, ನಮೀಬಿಯಾ ವಿರುದ್ಧದ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಅಭಿ ಅವರು ಅಭ್ಯಾಸ ನಡೆಸುತ್ತಿರುವುದಾಗಿಯೂ ಬಹಿರಂಗಪಡಿಸಿದರು. ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಆಡುವ ಸಾಧ್ಯತೆಯಿದೆ ಅಂತಾನೂ ತಿಳಿಸಿದರು. ಒಂದು ವೇಳೆ ಅಭಿಷೇಕ್, ಸಂಪೂರ್ಣ ಫಿಟ್ನೆಸ್ ಸಾಧಿಸದಿದ್ದರೆ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಇಶಾನ್ ಕಿಶನ್ ಜೊತೆಗೆ ಸಂಜು ಸ್ಯಾಮ್ಸನ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net