ನಾನಾ ಪಾಟೇಕರ್ ಅವರ ಕೋಪದ ಕಥೆ ಇಲ್ಲಿಗೆ ಮುಗಿಯಲ್ಲ. ಈ ಹಿಂದೆ ಖ್ಯಾತ ನಿರ್ದೇಶಕಿ ಸಾಯಿ ಪರಾಂಜಪೆ ಕೂಡ 1990ರ ದಿಶಾ ಚಿತ್ರದ ಶೂಟಿಂಗ್ ವೇಳೆ ನಾನಾ ಜೊತೆಗಿನ ಕಿರಿಕ್ ನೆನಪಿಸಿಕೊಂಡಿದ್ದರು. ಚಪ್ಪಲಿಯ ವಿಷಯಕ್ಕೆ ನಾನಾ ಸೆಟ್ನಲ್ಲಿ ಜಗಳ ತೆಗೆದಾಗ, ಸಾಯಿ ನಿನ್ನ ಆಟ ಇಲ್ಲಿ ನಡೆಯಲ್ಲ, ವೃತ್ತಿಪರನಾಗಿ ಇರು ಇಲ್ಲದಿದ್ದರೆ ಸೆಟ್ನಿಂದ ಹೊರನಡೆ ಎಂದು ಗದರಿಸಿದ್ದರಂತೆ. ಆಗ ನಾನಾ ನೀನು ಹೆಣ್ಣು ಮಗಳಾಗಿದ್ದಕ್ಕೆ ಬದುಕುಳಿದೆ, ಇಲ್ಲದಿದ್ದರೆ ಕಥೆಯೇ ಬೇರೆ ಇರುತ್ತಿತ್ತು ಎಂದು ವಾರ್ನಿಂಗ್ ಕೊಟ್ಟು ಹೋಗಿದ್ದರಂತೆ, (ಏಜನ್ಸೀಸ್).