ಈ ಹಾಡಿನ ಬಗ್ಗೆ ಸುದೀರ್ಘ ವಿಡಿಯೋ ಸಂದೇಶ ಹಂಚಿಕೊಂಡಿರುವ ನೋರಾ, ನಾನು ಈ ಹಾಡನ್ನು ಚಿತ್ರೀಕರಿಸಿದ್ದು ಮೂರು ವರ್ಷಗಳ ಹಿಂದೆ. ಅದು ದೊಡ್ಡ ಸಿನಿಮಾ ಮತ್ತು ಸಂಜಯ್ ದತ್ ಅವರಂತಹ ಸ್ಟಾರ್ ನಟರು ಇದ್ದಾರೆ ಎಂಬ ಕಾರಣಕ್ಕೆ ನಾನು ಒಪ್ಪಿಕೊಂಡಿದ್ದೆ. ಆಗ ಅದು ನನಗೆ ಹಿಂದಿ ಚಿತ್ರ ಖಳನಾಯಕ್ ಚಿತ್ರದ ರೀಮೇಕ್‌ನಂತೆ ಕಂಡಿತ್ತು. ಆದರೆ, ಇತ್ತೀಚೆಗೆ ಅವರು ಈ ಹಾಡನ್ನು ಹಿಂದಿಗೆ ಡಬ್ ಮಾಡಿದಾಗ ನನ್ನಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.