ಲೈಕ್ಸ್​, ವ್ಯೂವ್ಸ್​ಗಾಗಿ ದೊಡ್ಡಣ್ಣ ನಿಧನ ಅಂತ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ನಡುಕ; ಸೈಬರ್​ ಪೊಲೀಸ್​ರಿಗೆ ದೂರು ಕೊಟ್ಟ ಹಿರಿಯ ನಟ..Doddanna

Doddannas death fake news case
Doddannas death fake news case
Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯ ನಟ ದೊಡ್ಡಣ್ಣ ನಿಧನ ಎಂದು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟರ್​ ವೈರಲ್
  • ಬೆಂಗಳೂರು ಉತ್ತರ ವಿಭಾಗದ ಸೈಬರ್ ಠಾಣೆ ಮೆಟ್ಟಿಲೇರಿದ ನಟ ದೊಡ್ಡಣ್ಣ
  • ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗೇಡಿಗಳ ವಿರುದ್ಧ ದೂರು ನೀಡಿದ ದೊಡ್ಡಣ್ಣ
  • ಈ ಘಟನೆಯಿಂದ ಮಾನಸಿಕ ನೋವು, ಆಘಾತವುಂಟಾಗಿದೆ ಎಂದು ದೂರು ಕೊಟ್ಟ ನಟ
Doddannas death fake news case: ಸ್ಯಾಂಡಲ್​ವುಡ್​ನ ಹಿರಿಯ ನಟ ದೊಡ್ಡಣ್ಣ ಅವರು ಬದುಕಿದ್ದಾಗಲೇ ನಿಧನರಾಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದವರ ವಿರುದ್ಧ  ಹಿರಿಯ ನಟ ದೊಡ್ಡಣ್ಣ ಅವರು ಖುದ್ದಾಗಿ ಬೆಂಗಳೂರು ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

 ಏನಿದು ಘಟನೆ

ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ವ್ಯೂವ್ಸ್​​ಗಾಗಿ ಹಿರಿಯ ನಟ ದೊಡ್ಡಣ್ಣ ನಿಧನ ಇನ್ನಿಲ್ಲ ಎಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿತ್ತು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ದೊಡ್ಡಣ್ಣ ಅವರ ಅಭಿಮಾನಿಗಳು ಹಾಗೂ ಚಿತ್ರರಂಗದ ಆಪ್ತರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಅವರಿಗೆ ಕರೆಗಳನ್ನು ಮಾಡಿದ್ದರು.
ಆ ನಂತರ ಖುದ್ದಾಗಿ ತಾವೇ  ವಿಡಿಯೋ ಮಾಡಿ ನಾನು ಬದುಕಿದ್ದೇನೆ. ಸತ್ತಿಲ್ಲ, ಆರೋಗ್ಯವಾಗಿದ್ದೇನೆ, ಮುಂಜಾನೆಯಿಂದ ಸಾಕಷ್ಟು ಕರೆಗಳು ಬಂದಿದ್ದವರು ಎಂದು ಮಾತನಾಡಿದ್ದರು. ಯಾರೋ ಅವಿವೇಕಿಗಳು ನಾನು ನಿಧನವಾಗಿದ್ದೇನೆ ಎಂದು ಪೋಸ್ಟ್‌ ಮಾಡಿದ್ದಾರೆ. ಅದು ಶುದ್ದ ಸುಳ್ಳು, ನಾನು ಆರೋಗ್ಯವಾಗಿದ್ದೇನೆ ಎಂದಿದ್ದರು. ಸುಳ್ಳು ಸುದ್ದಿ ಹಬ್ಬಿಸಿದವರನ್ನು ಸುಮ್ಮನೆ ಬಿಡಬಾರದು ಎಂದಿದ್ದರು. ಅದರಂತೆ ದೂರು ನೀಡಿದ್ದಾರೆ. 

ದೊಡ್ಡಣ್ಣ ದೂರಿನಲ್ಲಿ ಏನಿದೆ?

 ಎಐ ಮೂಲಕ ಎಡಿಟ್ ಮಾಡಿ ಬದುಕಿರುವಾಗಲೇ ಸತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿ ವೈರಲ್ ಮಾಡಲಾಗಿದೆ. ಇದರಿಂದ ನನಗೆ ಮಾನಸಿಕ ನೋವು ಹಾಗೂ ಅತೀವ ಆಘಾತ ಉಂಟಾಗಿದೆ. ಸುಳ್ಳು ಸುದ್ದಿ ಹಬ್ಬಿಸಿ ವದಂತಿ ಹರಡಿದವರ ಮೇಲೆ ಕ್ರಮ ಕೈಗೊಳ್ಳಿ ಎಂದು ಜೂನ್​​15ರಂದು ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸದ್ಯ ಉತ್ತರ ವಿಭಾಗದ ಸೈಬರ್  ಕ್ರೈಂ ಪೊಲೀಸರು ಐಟಿ ಕಾಯ್ದೆಯಡಿ ಪ್ರಕರಣ  ದಾಖಲಿಸಿಕೊಂಡಿದ್ದು, ಅಪರಿಚಿತ ಆರೋಪಿಗಳ ಪತ್ತೆಗಾಗಿ ಹುಡುಕಾಟ ಶುರು ಮಾಡಿದ್ದಾರೆ ಎನ್ನಲಾಗಿದೆ. 
ಆ ‘ಪಬ್ಲಿಕ್ ಫ್ರೆಂಡ್’ ಖಾತೆಯ ಐಪಿ ಅಡ್ರೆಸ್ ಹಾಗೂ ಅದರ ಹಿಂದಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ತನಿಖೆ ಚುರುಕುಗೊಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ದೊಡ್ಡಣ್ಣ ಕುರಿತು ಇಂತಹ ನಕಲಿ ಪೋಸ್ಟ್‌ಗಳನ್ನು ಕ್ರಿಯೇಟ್ ಮಾಡಿದವರಿಗೆ ಮತ್ತು ಅದನ್ನು ಫಾರ್ವರ್ಡ್ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net