ನೇರವಂತಿಕೆಯ ನಿಷ್ಠುರ ನಾಯಕನ ಅಂತ್ಯ: ಅಜಿತ್ ದಾದಾ ಸಾವು ನಂಬಲಾಗುತ್ತಿಲ್ಲ; ಏಕನಾಥ ಶಿಂಧೆ ಸಂತಾಪ | Ajit Pawar

ಅಜಿತ್ ಪವಾರ್ ಮತ್ತು ಏಕನಾಥ ಶಿಂಧೆ
ಅಜಿತ್ ಪವಾರ್ ಮತ್ತು ಏಕನಾಥ ಶಿಂಧೆ
Published on

ಪ್ರಮುಖ ಮುಖ್ಯಾಂಶಗಳು

  • ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ನಿಧನ
  • ಅವರೊಬ್ಬ ನೇರವಂತಿಕೆಯ ನಿಷ್ಠರು ನಾಯಕ : ಏಕನಾಥ ಶಿಂಧೆ
  • ಅಜಿತ್​ ದಾದಾರ ಸಾವನ್ನು ನಂಬಲು ಆಗುತ್ತಿಲ್ಲ : ಮಹಾರಾಷ್ಟ್ರ ಡಿಸಿಎಂ
ಮಹಾರಾಷ್ಟ್ರ: ಬುಧವಾರ (ಜ.28) ಬೆಳಿಗ್ಗೆ ವಿಮಾನ ಅಪಘಾತದಲ್ಲಿ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ (Ajit Pawar) ಸಾವಿಗೆ ಸಂತಾಪ ಸೂಚಿಸಿದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅಜಿತ್​ ಪವಾರ್​ ಒಬ್ಬ ನೇರವಂತಿಕೆಯ ನಿಷ್ಠುರ ನಾಯಕರಾಗಿದ್ದರು ಎಂದು ಹೇಳಿದ್ದಾರೆ.
ಅಜಿತ್​ ದಾದಾ ರಾಜಕೀಯದಲ್ಲಿ ಬಲವಾದ ಬದ್ಧತೆ ಮತ್ತು ಆಡಳಿತದ ಮೇಲೆ ಹಿಡಿತ ಹೊಂದಿದ್ದ ನಾಯಕರಾಗಿದ್ದರು ಎಂದು ಶಿವಸೇನಾ ಮುಖ್ಯಸ್ಥ ಏಕನಾಥ್ ಶಿಂಧೆ ಸುದ್ದಿಗಾರರಿಗೆ ತಿಳಿಸಿದರು. ಮುಂಬೈನಿಂದ ಹಾರಾಟ ನಡೆಸುತ್ತಿದ್ದ ವಿಮಾನ ಬಾರಾಮತಿಯಲ್ಲಿ ಇಳಿಯುವ  ಸಮಯದಲ್ಲಿ ಅಪಘಾತಕ್ಕೀಡಾಗಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಇಂದು ಬೆಳಿಗ್ಗೆ ಸಾವನ್ನಪ್ಪಿದರು. ಬಲಿಯಾದವರಲ್ಲಿ ವಿಮಾನದ ಪೈಲಟ್‌ಗಳು ಮತ್ತು ಎನ್‌ಸಿಪಿ ಮುಖ್ಯಸ್ಥರ ಭದ್ರತಾ ಸಿಬ್ಬಂದಿ ಸೇರಿದ್ದಾರೆ.

ಪವಾರ್ ವ್ಯಕ್ತಿತ್ವವನ್ನು ಶ್ಲಾಘಿಸಿದ ಶಿಂಧೆ

ತಮ್ಮ ಸಚಿವ ಸಂಪುಟದ ಗಟ್ಟಿ ಧ್ವನಿಯಂತಿದ್ದ ಸೇನಾ ನಾಯಕನನ್ನು ನಾವಿಂದು ಕಳೆದುಕೊಂಡಿದ್ದೇವೆ ಎಂದ ಶಿಂಧೆ ಸಂಪುಟ ಸಹೋದ್ಯೋಗಿಯಾಗಿ ಅವರೊಂದಿಗೆ ಕಳೆದ ಸಮಯವನ್ನು ನೆನಪಿಸಿಕೊಂಡರು.
ಯಾವುದೇ ನಿರ್ಧಾರ ತೆಗೆದುಕೊಳ್ಳುವ ಪೂರ್ವದಲ್ಲಿ ಪ್ರತಿಯೊಂದು ಅಂಶವನ್ನು ಅಧ್ಯಯನ ಮಾಡುವುದು ಅವರ ಸ್ವಭಾವವಾಗಿತ್ತು. ಅವರೊಬ್ಬ ನೇರ ಮತ್ತು ನಿರ್ಭೀತ ನಾಯಕರಾಗಿದ್ದರು. ನಾನು ಇದನ್ನು ಸ್ವತಃ ನೋಡಿದ್ದೇನೆ. ನಾನು ಅವರೊಂದಿಗೆ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಯಾಗಿ ಮತ್ತು ಈಗ ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ ಎಂದು ಏಕನಾಥ ಶಿಂಧೆ ಹೇಳಿದರು.
ನಮ್ಮ ಸರ್ಕಾರದಲ್ಲಿ ಅವರು ನನಗೆ ದೊಡ್ಡ ಸಹೋದರನಂತೆ ಇದ್ದರು. ಅವರು ಇನ್ನಿಲ್ಲ ಎಂಬ ಅಂಶವನ್ನು ಒಪ್ಪಿಕೊಳ್ಳುವುದು ನನಗೆ ನಂಬಲಾಗದ ಸಂಗತಿಯಾಗಿದ್ದು, ಅವರ ಕುಟುಂಬ ಸದಸ್ಯರಿಗೆ ನನ್ನ ಸಂತಾಪ ಸೂಚಿಸುತ್ತೇನೆ ಎಂದು ಶಿಂಧೆ ಸಂತಾಪ ಸೂಚಿಸಿದ್ದಾರೆ.
ಅಜಿತ್​ ದಾದಾರ ಸಾವು ತಾವೊಬ್ಬ ಸ್ನೇಹಿತನನ್ನು ಕಳೆದುಕೊಂಡಂತಾದರೆ, ಮಹಾರಾಷ್ಟ್ರವು ಒಬ್ಬ ಲೋಕನಾಯಕನನ್ನು ಕಳೆದುಕೊಂಡಿದೆ ಎಂದು ಏಕನಾಥ ಶಿಂಧೆ ಹೇಳಿದರು. ಅವರಿಗೆ ಪ್ರತಿಯೊಂದು ಇಲಾಖೆಯ ಬಗ್ಗೆಯೂ ಬಹಳ ಜ್ಞಾನವಿತ್ತು, ಆರ್ಥಿಕತೆಯನ್ನು ಚೆನ್ನಾಗಿ ತಿಳಿದಿದ್ದ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ಇದು ಮಹಾರಾಷ್ಟ್ರಕ್ಕೆ ದೊಡ್ಡ ನಷ್ಟ ಎಂದ ಅವರು ಮಹಾರಾಷ್ಟ್ರ ಈ ಮಟ್ಟಿಗೆ ಬೆಳೆಯಲು ಅಜಿತ್​ ದಾದಾನ ಪಾತ್ರ ಪ್ರಮುಕವಾಗಿದೆ ಎಂದರು.
ಪವಾರ್ ಅವರ ವಿಮಾನ ಬೆಳಿಗ್ಗೆ 8 ಗಂಟೆ ಸುಮಾರಿಗೆ ಮುಂಬೈನಿಂದ ಹೊರಟು ಬಾರಾಮತಿ ಬಳಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ಅಪಘಾತಕ್ಕೀಡಾಯಿತು. ಸ್ಥಳದಲ್ಲಿ ಬೆಂಕಿ, ಹೊಗೆ ಮತ್ತು ಸುಟ್ಟ ಅವಶೇಷಗಳು ಕಂಡುಬಂದಿವೆ. ಅಪಘಾತದಲ್ಲಿ ಎಲ್ಲಾ ಐದು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ದೃಢಪಡಿಸಿದೆ.
2023 ರಲ್ಲಿ ಅಧಿಕಾರಕ್ಕಾಗಿ ನಡೆದ ಹೋರಾಟದ ನಂತರ ಅಜಿತ್ ಪವಾರ್  ಹಿರಿಯ ರಾಜಕಾರಣಿ ಮತ್ತು ಪಕ್ಷದ ಸಂಸ್ಥಾಪಕ ಶರದ್ ಪವಾರ್ ಅವರಿಂದ ಎನ್‌ಸಿಪಿಯ ನಿಯಂತ್ರಣವನ್ನು ಕಸಿದುಕೊಂಡರು. ಅಂದಿನಿಂದ, ಎನ್‌ಸಿಪಿ ಬಿಜೆಪಿ ಮತ್ತು ಮಹಾರಾಷ್ಟ್ರದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಶಿಂಧೆ ನೇತೃತ್ವದ ಸೇನಾವನ್ನು ಒಳಗೊಂಡ ಮಹಾಯುತಿ ಮೈತ್ರಿಕೂಟದಲ್ಲಿ ಒಂದು ಘಟಕವಾಗಿದೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net