ಈ ಘಟನೆ ಬೆನ್ನಲ್ಲೇ ರಚನಾ ಗುರ್ಜರ್ ಅವರು ನರ್ವರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ರಚನಾ, ತಡರಾತ್ರಿ 2 ಗಂಟೆಯ ಸುಮಾರಿಗೆ ಕುಟುಂಬಸ್ಥರೆಲ್ಲರೂ ಮಲಗಿದ್ದಾಗ ಮನೆಗೆ ನುಗ್ಗಿದ ಕಳ್ಳರು, ನಮ್ಮನ್ನು ಕೋಣೆಯೊಳಗೆ ಲಾಕ್ ಮಾಡಿ ಈ ಕೃತ್ಯ ಎಸಗಿದ್ದಾರೆ. ಸುಮಾರು 8 ರಿಂದ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು, ನಗದು ಹಾಗೂ ಎನರ್ಜಿ ಡ್ರಿಂಕ್ಸ್ ಬಾಕ್ಸ್ ಅನ್ನು ಕದ್ದೊಯ್ದಿದ್ದಾರೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಮುಖಗಳು ರೆಕಾರ್ಡ್ ಆಗಬಾರದು ಎಂಬ ಉದ್ದೇಶದಿಂದ ಕಳ್ಳರು ಬಹುಶಃ ಲಾಟಿಯೊಂದನ್ನು ಬಳಸಿ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ಆ್ಯಂಗಲ್‌ಗಳನ್ನು ಕೂಡ ಬದಲಾಯಿಸಿದ್ದರು ಎಂದು ರಚನಾ ಹೇಳಿದ್ದಾರೆ.