ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡೆಸುತ್ತಿರುವ ಯುದ್ಧವು ಭಾರತದ ಅಡುಗೆ ಮನೆಗಳ ಮೇಲೆ ಪ್ರಭಾವ ಬೀರಿದೆ. ತಮ್ಮ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸುತ್ತಿರುವ ದಾಳಿಗೆ ಪ್ರತೀಕಾರವಾಗಿ ಇರಾನ್, ಹಾರ್ಮುಜ್ ಜಲಸಂಧಿಯನ್ನು ಬ್ಲಾಕ್ ಮಾಡಿದೆ. ಇದೇ ಜಲಸಂಧಿಯಿಂದ ಜಾಗತಿಕವಾಗಿ ಇಂಧನ ಪೂರೈಕೆಯಾಗುತ್ತಿದೆ. ಅಂದರೆ, ತೈಲ ತುಂಬಿದ ಹಡುಗುಗಳು ಇದೇ ಜಲಸಂಧಿಯನ್ನು ಹಾದು ಹೋಗುತ್ತವೆ. ಇದೀಗ ಬ್ಲಾಕ್ ಮಾಡಿರುವ ಕಾರಣ ತೈಲ ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಿದ್ದು, ಭಾರತದ ಮೇಲೆ ಪರಿಣಾಮ ಬೀರುತ್ತಿದೆ.