ಈ ಬಗ್ಗೆ ಮಾತನಾಡಿದ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಾಕೈ, ಯುರೋಪ್ ರಾಷ್ಟ್ರಗಳ ಮೇಲೆ ಹರಿಹಾಯ್ದಿದ್ದಾರೆ. ಅಂತಾರಾಷ್ಟ್ರೀಯ ಕಾನೂನನ್ನು ಎತ್ತಿ ಹಿಡಿಯುವ ಬದಲು, ಯುರೋಪ್ ರಾಷ್ಟ್ರಗಳು ಅಮೆರಿಕದ ದಬ್ಬಾಳಿಕೆಗೆ ಮಣಿದಿವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇರಾನ್ ಮೇಲೆ ನಿರ್ಬಂಧ ಹೇರಲು ಅಮೆರಿಕದ ಜೊತೆ ಕೈಜೋಡಿಸುವ ಮೂಲಕ ಇಸ್ರೇಲ್ ಮತ್ತು ಅಮೆರಿಕದ ಅಪರಾಧ ಕೃತ್ಯಗಳಿಗೆ ಯುರೋಪ್ ಪ್ರಚೋದನೆ ನೀಡಿದೆ ಎಂದು ನೇರವಾಗಿ ದೂರಿದ್ದಾರೆ. ವಿಶೇಷವಾಗಿ ಫ್ರಾನ್ಸ್ ಸೇರಿದಂತೆ ಪ್ರಮುಖ ಯುರೋಪಿಯನ್ ದೇಶಗಳು ಇಂದಿನ ಯುದ್ಧದ ಪರಿಸ್ಥಿತಿಯನ್ನು ಸೃಷ್ಟಿಸಿವೆ ಎಂಬುದು ಇರಾನ್‌ನ ವಾದವಾಗಿದೆ.