ಹಾಲಿವುಡ್ ಸಿನಿಮಾ ರೇಂಜ್ನಲ್ಲಿದೆ ‘ಟಾಕ್ಸಿಕ್’ ಟೀಸರ್! ಮೇಕಿಂಗ್ ನೋಡಿ ದಂಗಾದ ಸಿನಿ ಪ್ರೇಕ್ಷಕರು..Toxic
Toxic
Published on:
Copied
Follow Us
ಬೆಂಗಳೂರು: ( Toxic) ಸ್ಯಾಂಡಲ್ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮದ ವೇಳೆಯೆ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.
ಟಾಕ್ಸಿಕ್ ಟೀಸರ್ ಆರಂಭದಲ್ಲೇ ಸ್ಮಶಾನದ ದೃಶ್ಯಗಳಿಂದಲೇ ತೆರೆದುಕೊಳ್ಳುತ್ತದೆ. ಅಂತ್ಯ ಸಂಸ್ಕಾರ ನಡೆಯುತ್ತಿರುವಾಗ ಸಿಕ್ಕಾಪಟ್ಟೆ ಭದ್ರತೆ ಇರುತ್ತೆ. ಇದರ ಮಧ್ಯೆಯೇ ಒಂದು ಕಾರು ಬಂದು ಕಂಪೌಂಡ್ ಒಳಗೆ ಬರುತ್ತದೆ. ಕಾರ್ ಒಳಗೆ ಯಶ್ ಯುವತಿಯೊಂದಿಗೆ ಇರುವ ದೃಶ್ಯ ಬರುತ್ತೆ. ಯಶ್ ಶರ್ಟ್ಲೆಸ್ ಆಗಿ ಕಾಣಿಸಿಕೊಳ್ತಾರೆ. ಯಶ್ ಬ್ಯಾಕ್ ಲುಕ್ನಿಂದ ಶುರುವಾಗೋ ದೃಶ್ಯ ಬೂಟುಗಾಲಿಂದ ಬುಲೆಟ್ಸ್ ಬಿಡುತ್ತಾರೆ. ಒಂದಷ್ಟು ಗಲಾಟೆ, ಗದ್ದಲ ಮುಗಿದ ನಂತರ ಅಸಲಿ ಗೇಮ್ ಶುರುವಾಗುತ್ತದೆ. ಡ್ಯಾಡಿ ಈಸ್ ಹೋಮ್ ಎಂದು ಯಶ್ ಅವರು ಒಂದೇ ಒಂದು ಡೈಲಾಗ್ ಹೊಡೆದಿದ್ದಾರೆ.
ಆರಂಭದಲ್ಲೇ ಹಸಿಬಿಸಿ ದೃಶ್ಯಗಳಿವೆ. ಮೇಕಿಂಗ್ ಹಾಲಿವುಡ್ ಶೈಲಿಯಲ್ಲಿದೆ. ಈ ರೀತಿಯ ಮೇಕಿಂಗ್ ಕನ್ನಡಕ್ಕೆ ಹೊಸದು. ಸಖತ್ ಆ್ಯಕ್ಷನ್ ಕೂಡ ಇದೆ. ರಾಯ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಯಶ್ ಅವರು ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ದೊಡ್ಡ ಬಜೆಟ್ನಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ. ಟೀಸರ್ ನೋಡಿದವರಿಗೆ ಅದ್ದೂರಿತನ ಸ್ಪಷ್ಟವಾಗಿ ಕಾಣಿಸಿದೆ.
ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ಜೊತೆ ಯಶ್ ಕೂಡ ಸಿನಿಮಾಗೆ ಕಥೆ ಬರೆದಿದ್ದಾರೆ. ರೆಟ್ರೋ ಶೈಲಿಯಲ್ಲಿ ಸಿನಿಮಾ ಮೂಡಿಬರುತ್ತಿದೆ.
ಈ ಚಿತ್ರ 2026, ಮಾರ್ಚ್ 19ರಂದು ಬಿಡುಗಡೆಯಾಗಲಿದೆ. ಈಗ ಮುಂಬೈನಲ್ಲಿ 'ಟಾಕ್ಸಿಕ್' ಸಿನಿಮಾದ ಪೋಸ್ಟ್ ಪ್ರೊಡಕ್ಷನ್, ಶೂಟಿಂಗ್ ಕೆಲಸ ನಡೆಯುತ್ತಿದೆಯಂತೆ.
ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಮತ್ತು ಹುಮಾ ಖುರೇಷಿಯಂತಹ ಸ್ಟಾರ್ ನಾಯಕಿಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಯೋಜನೆಯು ಭಾರತೀಯ ಚಿತ್ರರಂಗದ ಅತಿದೊಡ್ಡ ಚಿತ್ರಗಳಲ್ಲಿ ಒಂದಾಗಲಿದೆ. 'ಟಾಕ್ಸಿಕ್' ಹೈಪ್ ಈಗ ಜಾಲತಾಣವನ್ನು ಅಲುಗಾಡಿಸುತ್ತಿದೆ.
ಕನ್ನಡದ ಸ್ಟಾರ್ ನಟ ಯಶ್ ಬ್ಲಾಕ್ ಬಾಸ್ಟರ್ ಹಿಟ್ ಸಿನಿಮಾ ಕೆಜಿಎಫ್ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದರು ಮಾತ್ರವಲ್ಲದೆ ಕನ್ನಡ ಚಿತ್ರರಂಗಕ್ಕೆ ಹೊಸ ಕೀರ್ತಿ ತಂದರು. ಕೆಜಿಎಫ್ನ ಎರಡೂ ಭಾಗಗಳು ದೊಡ್ಡ ಯಶಸ್ಸನ್ನು ಕಂಡವು ಮತ್ತು 1000 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಕೆವಿಎನ್ ಪ್ರೊಡಕ್ಷನ್ಸ್ನಲ್ಲಿ ಗೀತು ಮೋಹನ್ದಾಸ್ ನಿರ್ದೇಶನದ ಯಶ್ ಅವರ ಮುಂದಿನ ಚಿತ್ರ ಟಾಕ್ಸಿಕ್ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.