

ಪ್ರಮುಖ ಮುಖ್ಯಾಂಶಗಳು
ಈತನ ನಕಲಿ ಬಣ್ಣ ಬಯಲಾಗಲು ಪ್ರಮುಖ ಕಾರಣ ಈತನ ಕೃತ್ಯಕ್ಕೆ ಬಲಿಯಾದ ಅಪ್ರಾಪ್ತ ಬಾಲಕಿಯೊಬ್ಬಳ ಅಳಲು. ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದ ಪಥನಂತಿಟ್ಟದ 17 ವರ್ಷದ ಬಾಲಕಿಯನ್ನು ಐಪಿಎಸ್ ತರಬೇತಿದಾರನೆಂದು ನಂಬಿಸಿ ಪ್ರೇಮದ ಹೆಸರಿನಲ್ಲಿ ಅತ್ಯಾಚಾರ ಎಸಗಿ ಗರ್ಭಿಣಿಯನ್ನಾಗಿ ಮಾಡಿರುವ ಕರಾಳ ಸತ್ಯ ತನಿಖೆಯ ವೇಳೆ ಬಹಿರಂಗಗೊಂಡಿದೆ. ಸದ್ಯ ಈತನ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.