4ನೇ ಟೆಸ್ಟ್ ಪಂದ್ಯ​ 2 ದಿನಕ್ಕೆ ಅಂತ್ಯ! ಮೆಲ್ಬೋರ್ನ್ ಪಿಚ್‌ ಬಗ್ಗೆ ಐಸಿಸಿ ಕೊಟ್ಟ ರೇಟಿಂಗ್ ಇದು | AUS vs ENG

ಆ್ಯಶಸ್​ ಸರಣಿ
ಆ್ಯಶಸ್​ ಸರಣಿ
Published on

ಪ್ರಮುಖ ಮುಖ್ಯಾಂಶಗಳು

  • ಆ್ಯಶಸ್​ ಸರಣಿಯ ನಾಲ್ಕನೇ ಟೆಸ್ಟ್​ 2 ದಿನಕ್ಕೆ ಅಂತ್ಯ
  • ಸರಣಿಯಲ್ಲಿ ಆಸೀಸ್​ 3-1 ಅಂತರದಲ್ಲಿ ಮುನ್ನಡೆ
  • ಮೆಲ್ಬೋರ್ನ್​ ಪಿಚ್​ ಬಗ್ಗೆ ಐಸಿಸಿ ರೇಟಿಂಗ್
ಸಿಡ್ನಿ: ಆ್ಯಶಸ್ ಸರಣಿಯ ಭಾಗವಾಗಿ ನಡೆದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯವು ಕೇವಲ ಎರಡು ದಿನಗಳಲ್ಲಿ ಮುಕ್ತಾಯಗೊಂಡಿತು. ಬೌಲರ್‌ಗಳಿಗೆ ವರವಾದ ಪಿಚ್​, ಬ್ಯಾಟರ್​ಗಳಿಗೆ ಭಾರೀ ಕಷ್ಟಕರವಾಯಿತು. 
ಈ ಪಂದ್ಯದ ಮೊದಲ ದಿನದಂದು 20 ವಿಕೆಟ್‌ ಮತ್ತು ಎರಡನೇ ದಿನದಂದು 16 ವಿಕೆಟ್‌ಗಳು ಉರುಳಿದವು. ಇದರಿಂದಾಗಿ, ಪಿಚ್ ಬಗ್ಗೆ ಸಾಕಷ್ಟು ಟೀಕೆ, ದೂರಗಳು ಹರಿದುಬಂದಿತು. ಈ ಕ್ರಮದಲ್ಲಿ, ಇಂದು (ಡಿ.29) ಐಸಿಸಿ ಪಿಚ್‌ ಕುರಿತಂತೆ ರೇಟಿಂಗ್ ನೀಡಿತು. ಪಿಚ್‌ಗೆ ಒಂದು ಡಿಮೆರಿಟ್ ಪಾಯಿಂಟ್ ನಿಗದಿಪಡಿಸಿ, ಅತೃಪ್ತಿಕರವಾಗಿದೆ ಎಂದು ತಿಳಿಸಿತು. 
"ಮ್ಯಾಚ್ ರೆಫರಿ ಜೆಫ್ ಕ್ರೋವ್ ಅವರ ವರದಿಯ ಆಧಾರದ ಮೇಲೆ, ನಾಲ್ಕನೇ ಆಶಸ್ ಟೆಸ್ಟ್ ನಡೆದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿನ ಪಿಚ್ ಅನ್ನು ನಾವು ಅತೃಪ್ತಿಕರ ಎಂದು ರೇಟಿಂಗ್ ನೀಡಿದ್ದೇವೆ. ನಾವು ಕ್ರೀಡಾಂಗಣಕ್ಕೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸೇರಿಸಿದ್ದೇವೆ" ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಒಂದೇ ಪಿಚ್​ 6 ಡಿಮೆರಿಟ್ ಪಾಯಿಂಟ್‌ಗಳನ್ನು ಪಡೆದರೆ, ಆ ಮೈದಾನವನ್ನು 12 ತಿಂಗಳ ಕಾಲ ನಿಷೇಧಿಸಲಾಗುತ್ತದೆ. ಆ ಸಮಯದಲ್ಲಿ, ಕ್ರೀಡಾಂಗಣದಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸುವಂತಿಲ್ಲ. ಐಸಿಸಿ ಪಿಚ್ ರೇಟಿಂಗ್ ನಾಲ್ಕು ವಿಭಾಗಗಳನ್ನು ಹೊಂದಿದೆ. ಇದರಲ್ಲಿ, ವೆರಿ ಗುಡ್​, ಸ್ಯಾಟಿಸಿಫ್ಯಾಕ್ಟರಿ, ಅನ್ಸ್ಯಾಟಿಸಿಫ್ಯಾಕ್ಟರಿ​ ಮತ್ತು ಅನ್​ಫಿಟ್​. 
ನಾಲ್ಕನೇ ಪಂದ್ಯವನ್ನು ಇಂಗ್ಲೆಂಡ್​ ಗೆದ್ದಿದ್ದೇ ಆದರೂ ಮೆಲ್ಬೋರ್ನ್ ಪಂದ್ಯದಲ್ಲಿ ಎರಡು ತಂಡಗಳಿಂದ ಒಬ್ಬೇ ಒಬ್ಬ ಬ್ಯಾಟ್ಸ್‌ಮನ್ ಕೂಡ ಅರ್ಧಶತಕ ಗಳಿಸಲಿಲ್ಲ. ಆ್ಯಶಸ್ ಸರಣಿಯನ್ನು ಆಸೀಸ್ ವಶಪಡಿಸಿಕೊಂಡಿದ್ದು, 3-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net