ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಈ ಬಾರಿ ಬಂಗಾಳದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಪಣತೊಟ್ಟಿರುವ ಅಮಿತ್ ಶಾ, ಟಿಎಂಸಿ ಸರ್ಕಾರದ ವಿರುದ್ಧ ರಾಜಕೀಯ ಚಾರ್ಜ್ಶೀಟ್ ಬಿಡುಗಡೆ ಮಾಡಿ, ಈ ಚುನಾವಣೆಯನ್ನು ಬಂಗಾಳಕ್ಕಾಗಿ ಮಾತ್ರವಲ್ಲದೆ ದೇಶದ ಭದ್ರತೆಗಾಗಿ ನಡೆಯುವ ಯುದ್ಧವೆಂದು ಘೋಷಣೆ ಮಾಡಿದ್ದರು. ತುಷ್ಟೀಕರಣ ರಾಜಕೀಯ, ಭ್ರಷ್ಟಾಚಾರ ಹಾಗೂ ರಾಜಕೀಯ ಹಿಂಸಾಚಾರದಿಂದಾಗಿ ರಾಜ್ಯವು ದೇಶದ ಒಳನುಸುಳುವಿಕೆಗೆ ಪ್ರಮುಖ ಕಾರಿಡಾರ್ ಆಗಿ ಮಾರ್ಪಟ್ಟಿದೆ ಎಂದು ಆರೋಪಿಸಿದ್ದರು.