ಹೌದು, ವಾರಣಾಸಿಯ ಲೋಹ್ತಾ ಪೊಲೀಸ್ ಠಾಣಾ ವ್ಯಾಪ್ತಿಯ ಚಿತ್ತೌನಿ ಗ್ರಾಮದಲ್ಲಿ ನಡೆದ ವಿವಾಹ ಸಮಾರಂಭವೊಂದು ನಾಟಕೀಯ ತಿರುವು ಪಡೆದುಕೊಂಡಿತು. ಪಾರಸ್ ರಾಜ್‌ಭರ್ ಎಂಬುವವರ ಪುತ್ರಿ ಕಿರಣ್ ರಾಜ್‌ಭರ್ ಅವರ ವಿವಾಹವು ಅದ್ಧೂರಿಯಾಗಿ ನಡೆಯುತ್ತಿತ್ತು. ಮದುವೆಯ ಮೆರವಣಿಗೆ ಮುಗಿದು, ಮಾಲೆ ಬದಲಾಯಿಸುವ ಶಾಸ್ತ್ರಕ್ಕಾಗಿ ವಧು-ವರರು ವೇದಿಕೆಯ ಮೇಲೆ ನಿಂತಿದ್ದಾಗ, ಇಡೀ ಸಭೆಯೇ ಬೆಚ್ಚಿಬೀಳುವಂತಹ ಘಟನೆಯೊಂದು ನಡೆಯಿತು.