ನಮ್ಮದು ಬಡವರ ಪಕ್ಷ: ಬಿಹಾರ ಚುನಾವಣಾ ಸೋಲಿನ ಬಳಿಕ ಆರ್‌ಜೆಡಿ ಪ್ರತಿಕ್ರಿಯೆ | Bihar election

ಆರ್​ಜೆಡಿ ನಾಯಕ ತೇಜಸ್ವಿ ಯಾದವ್
ಆರ್​ಜೆಡಿ ನಾಯಕ ತೇಜಸ್ವಿ ಯಾದವ್
Published on
ಪಾಟ್ನಾ: ಬಿಹಾರ ಚುನಾವಣೆಯಲ್ಲಿ(Bihar election) ಭಾರಿ ಸೋಲಿನ ನಂತರ ಪ್ರತಿಕ್ರಿಯಿಸಿರುವ ಆರ್​​​ಜೆಡಿಯು, ಏರಿಳಿತಗಳು ಅನಿವಾರ್ಯ, ನಮ್ಮದು ಬಡವರ ಪಕ್ಷ ಎಂದು ಶನಿವಾರ (ನ.15) ಹೇಳಿದೆ.
ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಆರ್​ಜೆಡಿ, ಪಕ್ಷವು ಸಾರ್ವಜನಿಕ ಸೇವೆಯು ಒಂದು ನಿರಂತರ ಪ್ರಕ್ರಿಯೆಯಾಗಿದೆ. ಅಲ್ಲದೆ, ಇದು ಅಂತ್ಯವಿಲ್ಲದ ಪ್ರಯಾಣವಾಗಿದೆ ಎಂದಿದೆ. ಚುನಾವಣೆಗಳಲ್ಲಿ ಹಿನ್ನಡೆ ಮತ್ತು ಯಶಸ್ಸು ಎರಡೂ ರಾಜಕೀಯ ಜೀವನದ ನೈಸರ್ಗಿಕ ಭಾಗಗಳಾಗಿವೆ. ನಮಗೆ ಸೋಲಿನಲ್ಲಿ ದುಃಖವಿಲ್ಲ ಮತ್ತು ಗೆಲುವಿನಲ್ಲಿ ದುರಹಂಕಾರವಿಲ್ಲ ಎಂದು RJD ತಿಳಿಸಿದೆ.
ಸಾರ್ವಜನಿಕ ಸೇವೆಯು ನಿರಂತರ ಪ್ರಕ್ರಿಯೆ, ಅಂತ್ಯವಿಲ್ಲದ ಪ್ರಯಾಣ. ಅದರಲ್ಲಿ ಏರಿಳಿತಗಳು ಅನಿವಾರ್ಯ. ಸೋಲಿನಲ್ಲಿ ದುಃಖವಿಲ್ಲ, ಗೆಲುವಿನಲ್ಲಿ ದುರಹಂಕಾರವಿಲ್ಲ. ರಾಷ್ಟ್ರೀಯ ಜನತಾದಳವು ಬಡವರ ಪಕ್ಷ. ಅದು ಬಡವರ ನಡುವೆ ಧ್ವನಿ ಎತ್ತುವುದನ್ನು ಮುಂದುವರಿಸುತ್ತದೆ ಎಂದು ಎಕ್ಸ್​ನಲ್ಲಿ ಬರೆದುಕೊಂಡಿದೆ.

ಚುನಾವಣಾ ಅಕ್ರಮ- ರಾಹುಲ್​ ಗಾಂಧಿ ಆರೋಪ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿನ ಭಾರೀ ಸೋಲಿಗೆ ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಫಲಿತಾಂಶಗಳನ್ನು ನಿಜಕ್ಕೂ ಅಚ್ಚರಿಯಾಗಿದೆ ಎಂದಿದ್ದಾರೆ. ಈ ಬಾರಿಯ ಚುನಾವಣೆಯ ಆರಂಭದಿಂದಲೂ ಅನ್ಯಾಯವಾಗಿದೆ ಎಂದು ರಾಹುಲ್​ ಆರೋಪಿಸಿದ್ದಾರೆ.
ದೇಶದಲ್ಲಿನ ಪ್ರಜಾಪ್ರಭುತ್ವವನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸಬೇಕು ಎಂದು ರಾಹುಲ್​ ಪ್ರತಿಪಾದಿಸಿದ್ದಾರೆ. ನಾವು ಸಾರ್ವಜನಿಕವಾಗಿ ಪುರಾವೆಗಳನ್ನು ಪ್ರಸ್ತುತಪಡಿಸದಿದ್ದರೂ, ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ರಾಜಿ ಮಾಡಿಕೊಂಡಿದೆ ಎಂದು ರಾಹುಲ್​ ಹೇಳಿದ್ದಾರೆ.

ಬಿಹಾರ ತೀರ್ಪು

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ 243 ಸ್ಥಾನಗಳಲ್ಲಿ 202 ಸ್ಥಾನಗಳನ್ನು ಪಡೆದುಕೊಂಡಿದೆ. ಭಾರತೀಯ ಜನತಾ ಪಕ್ಷವು 89 ಸ್ಥಾನಗಳನ್ನು ಪಡೆಯುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಮಿತ್ರ ಪಕ್ಷವಾದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು 85 ಸ್ಥಾನಗಳನ್ನು ಗೆದ್ದಿದೆ.
ಬಿಹಾರದಲ್ಲಿ ವಿರೋಧ ಪಕ್ಷ ಮಹಾಘಟಬಂಧನ್ ಪ್ರಭಾವ ಬೀರಲು ಹೆಣಗಾಡಿದೆ. ರಾಷ್ಟ್ರೀಯ ಜನತಾ ದಳ ಕೇವಲ 25 ಸ್ಥಾನಗಳನ್ನು ಗಳಿಸಿತು. ಆದರೆ ಕಾಂಗ್ರೆಸ್ ಕೇವಲ ಆರು ಸ್ಥಾನಗಳನ್ನು ಗಳಿಸಿತು. AIMIM ಐದು ಸ್ಥಾನಗಳನ್ನು ಗಳಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net